Monday, June 23, 2025

Latest Posts

ಆಯುರ್ವೇದ ಮತ್ತು ಯೋಗ ವಿಧಾನದಿಂದ ಈ ರೀತಿಯಾಗಿ ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಿ.. ಭಾಗ 1

- Advertisement -

Health Tips: ಈಗಿನ ಕಾಲದಲ್ಲಿ ಜಂಕ್ ಫುಡ್, ರೇಡಿಮೇಡ್ ಫುಡ್‌ಗಳನ್ನು ತಿಂದು, ಬೊಜ್ಜು ಬೆಳೆಯುವ ಸಮಸ್ಯೆ ಹೆಚ್ಚಾಗಿದೆ. ಆದರೆ ಆ ಬೊಜ್ಜನ್ನು ಹೇಗೆ ಕರಗಿಸುವುದು ಅನ್ನೋ ಬಗ್ಗೆ ಸರಿಯಾದ ಕ್ರಮ ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಆಯುರ್ವೇದ ಮತ್ತು ಯೋಗ ವಿಧಾನದಿಂದ ಯಾವ ರೀತಿ ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಬೇಕು ಎಂದು ತಿಳಿಸಲಿದ್ದೇವೆ.

ಮೊದಲನೇಯದಾಗಿ ಹೊಟ್ಟೆ ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯೋಣ. ಕೆಲವರು ಊಟ ಮಾಡುತ್ತ ನೀರು ಕುಡಿಯುತ್ತಾರೆ. ಇದೇ ಹೊಟ್ಟೆ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಇನ್ನು ಕೆಲವರು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾರೆ. ಜಂಕ್‌ ಫುಡ್ ಸೇವನೆ, ಸರಿಯಾಗಿ ನೀರಿನ ಸೇವನೆ ಮಾಡದಿರುವುದು. ಇದೆಲ್ಲವೂ ಹೊಟ್ಟೆ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.  ಮೈದಾ, ಸಕ್ಕರೆ, ಅನ್ನ ಇತ್ಯಾದಿಯನ್ನು ಅಗತ್ಯಕ್ಕಿಂತ ಹೆಚ್ಚು ತಿನ್ನುವವರ ಹೊಟ್ಟೆ ಬೊಜ್ಜು ಹೆಚ್ಚಾಗಿರುತ್ತದೆ. ರಾತ್ರಿ 11 ಗಂಟೆ ಬಳಿಕ ತಿಂದು, ತಿಂದ ತಕ್ಷಣ ಮಲಗುವವರ ಹೊಟ್ಟೆ ಕೂಡ ದಪ್ಪಗಿರುತ್ತದೆ.

ಹೊಟ್ಟೆ ಬೊಜ್ಜು ಹೆಚ್ಚಾಗುವುದಕ್ಕೆ ಬರೀ ಫ್ಯಾಟ್ ಅಥವಾ ಕೊಬ್ಬು ಅಷ್ಟೇ ಕಾರಣವಲ್‌ಲ. ಬದಲಾಗಿ ಹೊರಹೋಗಬೇಕಾಗಿರುವ ಮಲ, ಹೊಟ್ಟೆ ಮೂಲೆ ಸೇರಿರುತ್ತದೆ. ನಿಮಗೆ ಪ್ರತಿದಿನ ಹೊಟ್ಟೆ ಸ್ವಚ್ಛವಾಗುತ್ತಿದ್ದರೂ, ಉಳಿದ ಮಲ, ಹೊಟ್ಟೆಯೊಳಗೆ ಇರುತ್ತದೆ. ಅದು ಸೇರಿ ಸೇರಿ, ಹೊಟ್ಟೆ ಬೊಜ್ಜು ಹೆಚ್ಚಾಗುತ್ತದೆ.

ಹಾಗಾದ್ರೆ ಹೊಟ್ಟೆ ಬೊಜ್ಜು ಕರಗುವುದಕ್ಕೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ, ನೀವು ಸದಾ ಆ್ಯಕ್ಟೀವ್ ಆಗಿರಿ. ಹೆಣ್ಣು ಮಕ್ಕಳು ಮಾಡುವ ಮನೆಗೆಲಸವನ್ನು ಗಂಡುಮಕ್ಕಳು ಕೂಡ ಮಾಡಬಹುದು. ಪಾತ್ರೆ ತೊಳೆಯುವುದು, ಬಟ್ಟೆ ತೊಳೆಯುವುದು, ಕಸ ಗುಡಿಸುವುದು, ನೆಲ ಒರೆಸುವುದು ಇತ್ಯಾದಿ ಕೆಲಸ ಮಾಡಿ. ಇದೆಲ್ಲ ಆಗುವುದಿಲ್ಲ ಎಂದಲ್ಲಿ, ಬೆಳಿಗ್ಗೆ ಬೇಗ ಎದ್ದು ಉಗುರು ಬೆಚ್ಚಗಿನ ನೀರು ಕುಡಿದು, ವಾಕಿಂಗ್ ಮಾಡಿ. ಯೋಗ ಮಾಡಿ. ಯೋಗ ಮಾಡುವಾಗ, ಕಲಿತುಕೊಂಡು ಮಾಡಿ. ಯೂಟ್ಯೂಬ್ ನೋಡಿ, ಮಾಡಿದರೂ, ಕೆಲವೊಮ್ಮೆ ತಪ್ಪಾಗುವ ಸಾಧ್ಯತೆ ಇರುತ್ತದೆ. ಯೋಗ ಮಾಡುವಾಗ ಯಾವ ತಪ್ಪೂ ಆಗಕೂಡದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲಿ. ಹಾಗಾಗಿ ಹೊಟ್ಟೆ ಬೊಜ್ಜು ಕರಗಲು ಮಾಡಬೇಕಾದ ಯೋಗ, ವ್ಯಾಯಾಮವನ್ನು ಕಲಿತು ಮಾಡಿ.

ಸಾಮಾನ್ಯವಾಗಿ ಹೊಟ್ಟೆ ಬೊಜ್ಜು ಕರಗಲು, ಬಿಸಿ ನೀರು, ಸೂಪ್, ಸಲಾಡ್‌ ತಿನ್ನಬೇಕು. ಜಂಕ್ ಫುಡ್, ಕೂಲ್ ಡ್ರಿಂಕ್ಸ್ ಸೇವನೆ ಬಿಡಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಇದರ ಜೊತೆಗೆ ಊಟವಾದ ಬಳಿಕ, ಸೇವಿಸಬೇಕಾದ ಒಂದು ಮಿಶ್ರಣವನ್ನು ನೀವು ಸೇವಿಸಬೇಕು. ಆ ಮಿಶ್ರಣ ಹೇಗೆ ಮಾಡಬೇಕು ಎಂಬ ಬಗ್ಗೆ ನಾವು ಮುಂದಿನ ಭಾಗದಲ್ಲಿ ತಿಳಿಯೋಣ.

ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

- Advertisement -

Latest Posts

Don't Miss