Health Tips: ಇದರ ಮೊದಲ ಭಾಗದಲ್ಲಿ ನೀವು ಬೊಜ್ಜು ಬರಲು ಕಾರಣವೇನು..? ಬೊಜ್ಜು ಕರಗಲು ಏನು ಮಾಡಬೇಕು ಎಂಬ ಬಗ್ಗೆ ತಿಳಿದಿದ್ದೀರಿ. ಇದೀಗ ಅದರ ಮುಂದುವರಿದ ಭಾಗವಾಗಿ, ನಾವು ನಿಮಗೆ ಊಟವಾದ ಬಳಿಕ ಸೇವಿಸಬೇಕಾದ ಮುಖ್ವಾಸ್ ರೆಸಿಪಿ ಹೇಳಲಿದ್ದೇವೆ.
ಮುಖ್ವಾಸ್ ಮಾಡಲು, 50 ಗ್ರಾಂ ಸೋಂಪು, 50 ಗ್ರಾಂ ಬಿಳಿ ಎಳ್ಳು, 50 ಗ್ರಾಂ ಜೀರಿಗೆ, 25 ಗ್ರಾಂ ವೋಮ, 25 ಗ್ರಾಂ ಧನಿಯಾ ದಾಲ್, 25 ಗ್ರಾಂ ಜ್ಯೇಷ್ಠ ಮಧುವಿನ ಪುಡಿ, 50 ಗ್ರಾಂ ಬೆಲ್ಲದ ಪುಡಿ, 5ರಿಂದ 10 ಗ್ರಾಂ ಪುದೀನಾ ಸತ್ವ, ಇವಿಷ್ಟನ್ನು ಒಂದು ಗಾಜಿನ ಡಬ್‌ಬದಲ್ಲಿ ಹಾಕಿ ಮಿಕ್ಸ್ ಮಾಡಿ. ಒಂದು ವಾರಕ್ಕಾಗುವಷ್ಟು ಈ ಮಿಶ್ರಣ ಮಾಡಿ ಇಡಿ. ಎರಡು ಹೊತ್ತು ಊಟವಾದ ಬಳಿಕ ಒಂದೊಂದು ಸ್ಪೂನ್ ಇದನ್ನ ಸೇವಿಸಿ.
ಇದರ ಸೇವನೆಯಿಂದ, ಹೊಟ್ಟೆಯ ಬೊಜ್ಜು ಕರಗುತ್ತದೆ. ಸರಿಯಾಗಿ ಮಲಮೂತ್ರ ವಿಸರ್ಜನೆಯಾಗುತ್ತದೆ. ತಂಬಾಕು ಸೇವನೆಯ ಚಟವಿದ್ದವರು, ಇದನ್ನು ತಿಂದರೆ, ಆ ಚಟ ನಿಧಾನವಾಗಿ ಬಿಟ್ಟು ಹೋಗುತ್ತದೆ. ಇನ್ನು ಇದು ರುಚಿಯಾಗಿದೆ ಎಂದು ಹೆಚ್ಚು ತಿಂದರೆ, ಆರೋಗ್ಯ ಸುಧಾರಿಸುವ ಜಾಗದಲ್ಲಿ, ಅನಾರೋಗ್ಯ ತಂದಿಡುತ್ತದೆ. ಹಾಗಾಗಿ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಊಟವಾದ ಬಳಿಕ, ಒಂದೊಂದು ಸ್ಪೂನ್ ಸೇವಿಸಿದರೆ ಸಾಕು.
ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..