Sunday, June 22, 2025

Latest Posts

ನೀವು ಮನೆಯಲ್ಲೇ ಈ ರೀತಿಯಾಗಿ ಟೇಸ್ಟಿ ಪನೀರ್ 65 ತಯಾರಿಸಬಹುದು..

- Advertisement -

Recipe: ಪನೀರ್‌ನಿಂದ ಮಾಡಿದ ತಿಂಡಿ ತಿನ್ನಬೇಕು ಅಂದ್ರೆ ಹಲವರು ರೆಸ್ಟೋರೆಂಟ್‌ಗೆ ಹೋಗುತ್ತಾರೆ. ಆದರೆ ಕೆಲವು ರೆಸಿಪಿಗಳನ್ನು ನೀವು ಮನೆಯಲ್ಲೇ ಟ್ರೈ ಮಾಡಬಹುದು. ಅಂಥ ರೆಸಿಪಿಗಳಲ್ಲಿ ಪನೀರ್ 65 ಕೂಡ ಒಂದು. ಇಂದು ನಾವು ಈ ರೆಸಿಪಿಯನ್ನು ಹೇಗೆ ತಯಾರಿಸಬೇಕು ಅಂತಾ ಹೇಳಲಿದ್ದೇವೆ.

250 ಗ್ರಾಮ್ ಪನೀರನ್ನು ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ. ಒಂದು ದೊಡ್ಡ ಬೌಲ್‌ಗೆ 2 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್, 2 ಟೇಬಲ್ ಸ್ಪೂನ್ ಮೈದಾ, ಚಿಟಿಕೆ ಅರಿಶಿನ, ಕಾಲು ಸ್ಪೂನ್ ಗರಂ ಮಸಾಲೆ, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಕುಟ್ಟಿ ಪುಡಿ ಮಾಡಿದ ಕಾಳುಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಇದಕ್ಕೆ ಪನೀರ್ ಕ್ಯೂಬ್ಸ್, ಅರ್ಧ ನಿಂಬೆರಸ, 5 ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ಹಸಿಮೆಣಸು, ಹಾಕಿ ಮಿಕ್ಸ್ ಮಾಡಿ. ಈಗ ಇದಕ್ಕೆ ಕೊಂಚ ಕೊಂಚವೇ ನೀರು ಸೇರಿಸುತ್ತ, ಬಜ್ಜಿ ಹಿಟ್ಟಿನಂತೆ ಮಿಕ್ಸ್ ಮಾಡಿ.

ಇದನ್ನು ಕರಿಯಲು ಬೇಕಾದಷ್ಟು ಎಣ್ಣೆ ಬಿಸಿಗೆ ಇಟ್ಟು, ಇದಕ್ಕೆ ಮಿಶ್ರಣ ಮಾಡಿದ ಪನೀರ್ ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ಈಗ ಪ್ಯಾನ್ ಬಿಸಿ ಮಾಡಿ, ಮೂರು ಸ್ಪೂನ್ ಎಣ್ಣೆ, ಸಾಸಿವೆ, ಸಣ್ಣಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಕರಿದಿಟ್ಟ ಪನೀರ್ ಇದಕ್ಕೆ ಸೇರಿಸಿ, 2 ನಿಮಿಷ ಹುರಿದರೆ ಪನೀರ್ 65 ರೆಡಿ.

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

- Advertisement -

Latest Posts

Don't Miss