Sunday, September 8, 2024

Latest Posts

ನಾವು ಈ ಕೆಲಸ ಮಾಡುವಾಗ ಮೌನ ವಹಿಸಲೇಬೇಕು ಅನ್ನುತ್ತೆ ಹಿಂದೂ ಧರ್ಮ

- Advertisement -

Spiritual Story: ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದೆ. ಅದನ್ನು ಯಾರು ಅನುಸರಿಸುತ್ತಾರೆ. ಅವರು ಬರೀ ಧರ್ಮಪಾಲನೆಯಲ್ಲಿ ಶ್ರೇಷ್ಟರಲ್ಲದೇ, ಉತ್ತಮ ಆರೋಗ್ಯವನ್ನೂ ಹೊಂದಿರುತ್ತಾರೆ. ಏಕೆಂದರೆ, ಹಿಂದೂ ಧರ್ಮದಲ್ಲಿರುವ ಪದ್ಧತಿ ಬರೀ ಪದ್ಧತಿ ಅಷ್ಟೇ ಅಲ್ಲದೇ, ಅದು ಆರೋಗ್ಯಕರ ಜೀವನ ಶೈಲಿ. ಈ ಪದ್ಧತಿಗಳ ಹಿಂದೆ ಹಲವು ವೈಜ್ಞಾನಿಕ ಕಾರಣಗಳಿದೆ. ಅದರಲ್ಲೂ ನಾವು ಕೆಲ ಕೆಲಸಗಳನ್ನು ಮಾಡುವಾಗ, ಮೌನ ವಹಿಸಲೇಬೇಕು ಅಂತಾ ಹೇಳಲಾಗಿದೆ. ಹಾಗಾದ್ರೆ ನಾವು ಯಾವ ಕೆಲಸ ಮಾಡುವಾಗ ಮೌನ ವಹಿಸಬೇಕು..? ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಊಟ ಮಾಡುವಾಗ ನಾವು ಮೌನ ವಹಿಸಬೇಕು. ಆಹಾರ ಸೇವನೆ ಮಾಡುವಾಗ ಮೌನ ವಹಿಸಬೇಕು ಎಂದು ಹೇಳಿದ್ದಾರೆ. ಇದಕ್ಕಿರುವ ಧಾರ್ಮಿಕ ಕಾರಣ ಅಂದ್ರೆ, ಊಟ ಮಾಡುವಾಗ ಮಾತನಾಡಿದರೆ, ಅನ್ನಪೂರ್ಣೆಗೆ ಅವಮಾನಿಸುವುದು ಎಂದು. ಹಾಗಾಗಿ ದೇವರ ಧ್ಯಾನದಲ್ಲಿ, ಊಟವನ್ನು ಸೇವಿಸಬೇಕು. ಇನ್ನು ಇದಕ್ಕಿರುವ ವೈಜ್ಞಾನಿಕ ಕಾರಣ ಅಂದ್ರೆ, ಆಹಾರ ಸೇವಿಸುವುದು, ಮತ್ತು ಮಾತನಾಡುವುದು ಒಂದೇ ಸಲ ಮಾಡಿದಾಗ, ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಆಹಾರ ಸೇವಿಸುವಾಗ, ಮೌನ ವಹಿಸಬೇಕು.

ಮಲಮೂತ್ರ ವಿಸರ್ಜನೆ ಮಾಡುವಾಗ ಮೌನವಾಗಿರಬೇಕು. ಮಲ ಮೂತ್ರ ವಿಸರ್ಜನೆ ಮಾಡುವಾಗ ಬಾಯಿ ಬಿಡಬಾರದು ಎಂದು ಹೇಳಲಾಗುತ್ತದೆ. ಇದರ ಹಿಂದಿರುವ ವೈಜ್ಞಾನಿಕ ಕಾರಣ ಅಂದ್ರೆ, ಈ ಸಮಯದಲ್ಲಿ ನಾವಿರುವ ಜಾಗದಲ್ಲಿ ಕ್ರಿಮಿ ಕೀಟಗಳು ಇರುತ್ತದೆ. ಅದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಮತ್ತು ಈ ಸಮಯದಲ್ಲಿ ಅವು ಬಾಯಿಯ ಮೂಲಕ ನಮ್ಮ ದೇಹ ಸೇರಬಹುದು. ಈ ಕಾರಣಕ್ಕೆ ಮಲ ಮೂತ್ರ ವಿಸರ್ಜನೆ ಮಾಡುವಾಗ ಮಾತನಾಡಬಾರದು ಅಂತಾ ಹೇಳುತ್ತಾರೆ.

ದೇವಸ್ಥಾನ, ಧಾರ್ಮಿಕ ಕಾರ್ಯಕ್ರಮಗಳಿಗೆ ಹೋದಾಗ ಮಾತನಾಡಬಾರದು. ದೇವಸ್ಥಾನ ಮತ್ತು ಧಾರ್ಮಿಕ ಕಾರ್ಯಗಳಲ್ಲಿ, ದೇವರ ಧ್ಯಾನದಲ್ಲಿರಬೇಕಾಗುತ್ತದೆ. ಭಕ್ತಿಯಿಂದ ದೇವರ ಕೆಲಸ ಮಾಡಬೇಕಾಗುತ್ತದೆ. ಈ ವೇಳೆ ನಾವು ಬೇರೆಡೆ ಗಮನ ನೀಡಬಾರದು ಎಂಬ ಕಾರಣಕ್ಕೆ, ಧಾರ್ಮಿಕ ಕಾರ್ಯಗಳಲ್ಲಿ ಮತ್ತು ದೇವಸ್ಥಾನಗಳಿಗೆ ಹೋದಾಗ ಮೌನ ವಹಿಸಬೇಕು. ಮತ್ತು ಈ ಸ್ಥಳಗಳಲ್ಲಿ ನಾವು ಮೌನ ವಹಿಸಿದಷ್ಟು, ಸಕಾರಾತ್ಮಕ ಶಕ್ತಿಯ ಪ್ರಭಾವ ನಮ್ಮ ಮೇಲಾಗುತ್ತದೆ.

ದುಃಖದಲ್ಲಿದ್ದಾಗ ನಾವು ಮೌನ ವಹಿಸಬೇಕು. ದುಃಖದಲ್ಲಿದ್ದಾಗ, ಕೋಪದಲ್ಲಿದ್ದಾಗ ನಾವು ಮೌನ ವಹಿಸಬೇಕು ಎಂದು ಏಕೆ ಹೇಳಲಾಗುತ್ತದೆ ಎಂದರೆ, ಈ ವೇಳೆ ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಇರುವುದಿಲ್ಲ. ದುಃಖ ನಮ್ಮನ್ನು ಆವರಿಸಿರುವ ಕಾರಣಕ್ಕೆ, ದುಃಖದಲ್ಲಿ ಬರುವ ಕೆಲ ಮಾತುಗಳು, ನಮ್ಮ ಜೀವನವನ್ನು ಬೇರೆ ರೀತಿಯಲ್ಲಿ ಬದಲಾಯಿಸಬಹುದು. ಹಾಗಾಗಿ ದುಃಖದಲ್ಲಿದ್ದಾಗ ನಾವು ಮೌನ ವಹಿಸುವುದು ಮುಖ್ಯ.

ಉಪವಾಸವಿದ್ದಾಗ ಏನನ್ನು ಸೇವಿಸಬಾರದು..?

ಹಿರಿಯರ ಕಾಲಿಗೆ ನಮಸ್ಕರಿಸಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ಶೂರ್ಪನಖಿ ತನ್ನ ಅಣ್ಣ ರಾವಣನ ಮೇಲೆ ದ್ವೇಷ ಸಾಧಿಸಿದ್ದಳು ಗೊತ್ತೇ..?

- Advertisement -

Latest Posts

Don't Miss