Spiritual: ನೀವು ಯಾವುದೇ ಮಹಿಳೆಯ ಬಳಿ, ಯಾವುದೇ ಒಂದು ಸಿಕ್ರೇಟ್ ಹೇಳಿ, ಅದನ್ನು ಯಾರ ಬಳಿಯೂ ಹೇಳಬೇಡ ಎಂದರೆ, ಅದು ಯಾರಾದರೂ ಒಬ್ಬರ ಕಿವಿಗಾದರೂ ಬಿದ್ದೇ ಬೀಳುತ್ತದೆ. ಹಾಗಾದ್ರೆ ಹೆಣ್ಣು ಮಕ್ಕಳ ಈ ಸ್ವಭಾವಕ್ಕೆ ಕಾರಣವೇನು ಅಂತಾ ಕೇಳಿದರೆ, ಮಹಾಭಾರತ ಕಾಲದಲ್ಲಿ ಯುಧಿಷ್ಠಿರ ತನ್ನ ತಾಯಿ ಕುಂತಿ ದೇವಿಗೆ ನೀಡಿದ ಶಾಪ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕುಂತಿದೇವಿಗೆ ಋಷಿಗಳು ಕೊಟ್ಟ ವರದಿಂದ ಆಕೆ 9 ತಿಂಗಳು ಕಾಯದೇ, ದೇವತೆಗಳಿಂದಲೇ ತನಗೆ ಬೇಕಾದ ರೀತಿಯಲ್ಲಿ ಸಂತಾನ ಪಡೆಯುವ ಭಾಗ್ಯ ಹೊಂದಿದ್ದಳು. ಆ ವರವನ್ನು ಪರೀಕ್ಷಿಸಲು ಆಕೆಗೆ, ನದಿಯ ದಡದಲ್ಲಿ ನಿಂತು ಸೂರ್ಯದೇವನನ್ನು ಪ್ರಾರ್ಥಿಸಿ, ಗಂಡು ಸಂತಾನವನ್ನು ಪಡೆದಳು. ವರ ನಿಜವಾಯಿತೆಂಬ ಖುಷಿ ಒಂದೆಡೆಯಾದರೆ, ಜನಿಸಿದ ಪುತ್ರನನ್ನು ಏನು ಮಾಡಲಿ ಎಂಬ ಹೆದರಿಕೆ ಇನ್ನೊಂದೆಡೆ.
ಆಗ ನಡಿ ದಡದಲ್ಲೇ ಇದ್ದ ದೋಣಿಯಲ್ಲಿ ಮಗುವನ್ನು ಕೂರಿಸಿ, ನದಿಯಲ್ಲಿ ತೇಲಿಬಿಟ್ಟಳು. ಮುಂದೆ ಆ ಮಗು ಸೂತರ ಕೈಗೆ ಸಿಕ್ಕಿ, ಅಲ್ಲೇ ಬೆಳೆಯಿತು. ಹೀಗೆ ಬೆಳೆದ ಮಗನೇ ಕರ್ಣ. ಕರ್ಣನನ್ನು ಸೂತಪುತ್ರನೆಂದೇ ಕರೆಯಲಾಗುತ್ತಿತ್ತು. ಮಹಾಭಾರತ ಯುದ್ಧವಾಗಿ, ಅರ್ಜುನನ ಕೈಯಿಂದ ಕರ್ಣನ ಕೊನೆಯಾಗುವವೆಗೂ ಕರ್ಣ ತಮ್ಮ ಒಡಹುಟ್ಟಿದ ಸಹೋದರನೆಂಬ ಸತ್ಯ ಪಾಂಡವರಿಗೆ ಗೊತ್ತಿರಲಿಲ್ಲ.
ಕೊನೆಗೆ ಪಾಂಡವರೆಲ್ಲ ಸೇರಿ, ಕರ್ಣನನ್ನು ಕೊಂದ ಖುಷಿಯಿಂದ ಕುಂತಿ ದೇವಿಯ ಬಳಿ ಬಂದು, ಅರ್ಜುನ ಕರ್ಣನನ್ನು ಕೊನೆಗೊಳಿಸಿದ ಎಂದು ಹೇಳಿದರು. ಆಗ ಕುಂತಿ ದೇವಿ, ದುಃಖಿತಳಾದಳು. ವಿರೋಧಿಯನ್ನು ಸೋಲಿಸಿದ್ದಕ್ಕೆ ಅಮ್ಮ ಖುಷಿಯಾಗಬೇಕಿತ್ತು. ಆದರೆ ದುಃಖಿತಳಾಗಿದ್ದಾಳೆಂದು ಕಾರಣ ಕೇಳಿದಾಗ, ಕರ್ಣ, ಆಕೆಯ ಹಿರಿಯ ಮಗ ಮತ್ತು ಪಾಂಡವರ ಸಹೋದರನೆಂಬ ಸತ್ಯ ಆಕೆ ಹೇಳಿದಳು.
ಆಗ ಯುಧಿಷ್ಠಿರನಿಗೆ ಕೋಪ ಬಂದು, ಇಷ್ಟು ದೊಡ್ಡ ಸತ್ಯವನ್ನು ನಮ್ಮಿಂದ ಮುಚ್ಚಿಟ್ಟು ನೀನು ದೊಡ್ಡ ತಪ್ಪನ್ನೇ ಮಾಡಿದೆ. ನಾವೆಲ್ಲರರೂ ಸ್ವಂತ ಸಹೋದರನ ಮೇಲೆ ದ್ವೇಷ ಸಾಧಿಸಿ, ಅವನನ್ನು ಕೊಲ್ಲಲು ಕಾರಣಳಾದೇ. ಇನ್ನು ಮುಂದೆ ಹೆಣ್ಣು ಮಕ್ಕಳ ಹೊಟ್ಟೆಯಲ್ಲಿ ಯಾವುದೇ ರಹಸ್ಯ ಉಳಿಯದಿರಲಿ ಎಂದು ಯುಧಿಷ್ಠಿರ ಶಾಪ ನೀಡಿದ. ಈ ಕಾರಣಕ್ಕೆ, ಯಾಾವ ಹೆಣ್ಣಿನ ಬಳಿಯೂ ರಹಸ್ಯ ಉಳಿಯುವುದಿಲ್ಲ.