ಸೆಲ್ಫಿ(Selfie)ಯನ್ನುತೆಗೆದುಕೊಳ್ಳುವ ವೇಳೆ ಕಾಲುಜಾರಿ ನರ್ಸಿಂಗ್ ವಿದ್ಯಾರ್ಥಿ ನೀರು ಪಾಲಾಗಿರುವ ಘಟನೆ ಹನೂರು ತಾಲೂಕಿನ ಹೊಗನೇಕಲ್ ಜಲಪಾತದಲ್ಲಿ(Hogenakkal Falls) ನಡೆದಿದೆ. ಮೈಸೂರಿನ(mysur) ಸಂಗಮೇಶ್ವರ ಎಂಬುವವರ ಮಗ ಉಮಾಶಂಕರ್ (19)(Umashankar)ತನ್ನ ಸ್ನೇಹಿತರಾದ ರವಿಕುಮಾರ್(ravikumar), ಶಿವಪ್ರಸಾದ್(shivaprasad) ಎಂಬುವವರೊಂದಿಗೆ ರಜೆ ಇದ್ದ ಕಾರಣ ಹೊಗನೇಕಲ್ ತೆರಳಿದ್ದಾಗ ಇಂತಹ ಅವಘಡ ಸಂಭವಿಸಿದೆ. ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಉಮಾಶಂಕರ್, ತನ್ನ ಸ್ನೇಹಿತರು ಬೇಡವೆಂದರೂ ಜಲಪಾತ ಒಂದರ ಬಳಿ ತೆರಳಿ ಫೋಟೋ ತೆಗೆಯುವಂತೆ ಹೇಳಿದ್ದಾನೆ. ಸ್ನೇಹಿತರು ಫೋಟೋಗಳನ್ನು ತೆಗೆದ ಬಳಿಕ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಾಲುಜಾರಿ 80 ಅಡಿಗಳಿಗಿಂತಲೂ ಆಳವಾದ ಜಾಗದಲ್ಲಿ ನೀರಿಗೆ ಬಿದ್ದಿದ್ದಾನೆ. ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟದ ಪೊಲೀಸರು(Male Mahadeshwar Betta Police Station) ತೆರಳಿ ನುರಿತ ಈಜುಗಾರರಿಂದ ಶವ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಈ ಪ್ರಕರಣ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.