Saturday, April 19, 2025

Latest Posts

ಕಂಡೀಶ್ನರ್ ಬಳಸುವ ಬದಲು ಮನೆಯಲ್ಲೇ ಇದನ್ನು ತಯಾರಿಸಿ ಬಳಸಿ..

- Advertisement -

ನಾವು ಕೂದಲ ಆರೋಗ್ಯಕ್ಕಾಗಿ ಏನೆಲ್ಲ ಮಾಡುತ್ತೇವೆ. ಕಾಸ್ಟ್ಲಿ ಶ್ಯಾಂಪೂ ಬಳಸುತ್ತೇವೆ. ಹೆಚ್ಚು ದುಡ್ಡು ಕೊಟ್ಟು ಎಣ್ಣೆ ತಂದು ಬಳಸುತ್ತೇವೆ. ಕೆಲವರು ದುಡ್ಡು ಕೊಟ್ಟು ಮಿನರಲ್ ವಾಟರ್ ತಂದು ಅದರಿಂದ ತಲೆ ಸ್ನಾನ ಮಾಡುತ್ತಾರೆ. ಇಷ್ಟೆಲ್ಲ ಮಾಡಿದ್ರೂ, ಕೂದಲ ಸ್ಥಿತಿ ಮಾತ್ರ ಹಾಗೆ ಇರುತ್ತದೆ. ಆದ್ರೆ ನಾವಿಂದು ಹೇಳುವ ಹೇರ್ ರೆಮಿಡಿಯನ್ನು ನೀವು ಟ್ರೈ ಮಾಡಿದ್ರೆ, ನಿಮ್ಮ ಕೂದಲು ಸ್ಮೂತ್, ಸಿಲ್ಕಿ, ಶೈನಿಯಾಗಿರುತ್ತದೆ.

ಒಂದು ಕಪ್ ಅನ್ನ ಮತ್ತು 1 ಟೇಬಲ್ ಸ್ಪೂನ್ ಹರಳೆಣ್ಣೆ ತೆಗೆದುಕೊಳ್ಳಿ. ಇದೆರಡನ್ನು ಮಿಕ್ಸ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ, ಕೊಂಚ ನೀರು ಹಾಕಿ ಗ್ರೈಂಡ್ ಮಾಡಿ. ಈಗ ಕಂಡಿಶ್ನರ್ ರೆಡಿ. ತಲೆ ಸ್ನಾನ ಮಾಡಿದ ಬಳಿಕ ಈ ಕಂಡಿಶ್ನರನ್ನು ತಲೆ ಕೂದಲಿಗೆ ಹಚ್ಚಿ 19 ನಿಮಿಷ ಬಿಟ್ಟು ಹೇರ್ ವಾಶ್ ಮಾಡಿ. ನೆನಪಿರಲಿ ಕಂಡಿಶ್ನರನ್ನು ಯಾವುದೇ ಕಾರಣಕ್ಕೂ ತಲೆ ಬುಡಕ್ಕೆ ಹಚ್ಚಬಾರದು. ಕಂಡಿಶ್ನರ್ ಏನಿದ್ರೂ ತಲೆ ಕೂದಲಿಗೆ ಹಚ್ಚಬೇಕು.

ಇನ್ನು ಹೇರ್ ಆಯ್ಲ್ ಕೂಡ ನೀವು ಮನೆಯಲ್ಲೇ ತಯಾರು ಮಾಡಬಹುದು. ಒಂದು ಕಪ್ ಹರಳೆಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ, ಅದಕ್ಕೆ ಒಂದು ಟೇಬಲ್ ಸ್ಪೂನ್ ಮೆಂತ್ಯೆ ಹಿಟ್ಟು ಮತ್ತು ಒಂದು ಟೇಬಲ್ ಸ್ಪೂನ್ ನೆಲ್ಲಿಕಾಯಿ ಪುಡಿ ಸೇರಿಸಿ, ಮಿಕ್ಸ್ ಮಾಡಿ. ಈಗ ಒಂದು ಸಣ್ಣ ಪಾತ್ರೆಯಲ್ಲಿ ನೀರು ಕಾಯಿಸಲು ಇಡಿ. ನೀರು ಕಾದ ಬಳಿಕ ಪುಡಿ ಮಿಕ್ಸ್ ಮಾಡಿದ ಎಣ್ಣೆ ಇರುವ ಬೌಲನ್ನು ಕುದಿಯುತ್ತಿರುವ ನೀರಿನ ಮೇಲಿರಿಸಿ, ಡಬಲ್ ಬಾಯ್ಲ್ ಮಾಡಿ. ಈಗ ಬಿಸಿಯಾದ ಎಣ್ಣೆಯನ್ನು ಆರಿಸಿ, ತಲೆಗೆ ಮಸಾಜ್ ಮಾಡಿ, ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡಿ.

- Advertisement -

Latest Posts

Don't Miss