ಮೊದಲೆಲ್ಲಾ ಮನೆಯಲ್ಲೇ ರಾಗಿ ಅಂಬಲಿ, ಮಜ್ಜಿಗೆ, ಕಶಾಯ ಇತ್ಯಾದಿಯನ್ನ ಮನೆಯಲ್ಲೇ ಮಾಡಿ ಕುಡಿಯುತ್ತಿದ್ದರು. ಇದನ್ನ ಕುಡಿದ ಮಂದಿ, ಗಟ್ಟಿಮುಟ್ಟಾಗಿಯೂ, ಆರೋಗ್ಯವಾಗಿಯೂ ಚೈತನ್ಯದಿಂದ ಕೂಡಿರುತ್ತಿದ್ದರು. ಈಗಿನ ಕಾಲದಲ್ಲಿ ಹಲವಾರು ಹೆಲ್ತ್ ಮಿಕ್ಸ್ ಪೌಡರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅದನ್ನ ಹಾಲಿಗೆ ಹಾಕಿ ಮಕ್ಕಳಿಗೆ ಕೊಡಲಾಗುತ್ತದೆ. ಅದನ್ನ ಕುಡಿದರೂ ಕೂಡ, ಮಕ್ಕಳು ಮಂದವಾಗಿ ಇರ್ತಾರೆ. ಹಾಗಾಗಿ ಮನೆಯಲ್ಲೇ ಹೇಗೆ ಹೆಲ್ದಿ ಡ್ರಿಂಕ್ ಪೌಡರ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಕಪ್ ಗೋದಿ, ಅರ್ಧ ಕಪ್ ಶೇಂಗಾ, 25 ಬಾದಾಮಿ ಬೀಜ, ನಾಲ್ಕು ಸ್ಪೂನ್ ಕಲ್ಲು ಸಕ್ಕರೆ, ಐದು ಸ್ಪೂನ್ ಹಾಲಿನ ಪುಡಿ, ಇವಿಷ್ಟು ಹೆಲ್ತ್ ಡ್ರಿಂಕ್ಸ್ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿ.
ಮೊದಲು ಒಂದು ಕಪ್ ಗೋದಿಯನ್ನ ಎರಡು ದಿನ ನೆನೆಸಬೇಕು. ಆ ಎರಡು ದಿನದಲ್ಲಿ ನಾವು ಗೋದಿಯ ನೀರನ್ನ ನಾಲ್ಕು ಬಾರಿ ಚೇಂಜ್ ಮಾಡಬೇಕು. ಕೊನೆಗೆ ನಿಮ್ಮ ಉಗುರಿನಿಂದ ಆ ಗೋದಿಯನ್ನ ಕಟ್ ಮಾಡಬಹುದು ಎಂದೆನ್ನಿಸಿದಲ್ಲಿ ಆ ಗೋದಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಆರಿಸಿ, ಬಟ್ಟೆಯಲ್ಲಿ ಕಟ್ಟಿ, ಮೊಳಕೆ ಬರಿಸಬೇಕು. ಮೊಳಕೆ ಬಂದ ಗೋದಿಯನ್ನ, ಒಂದು ದಿನ ಬಿಸಿಲಿನಲ್ಲಿ ಒಣಗಿಸಬೇಕು.
ಹೀಗೆ ಒಣಗಿಸಿದ ಗೋದಿಯನ್ನು ಮಂದ ಉರಿಯನ್ನ, ಸುವಾಸನೆ ಬರುವವರೆಗೂ ಹುರಿಯಬೇಕು. ಹೀಗೆ ಹುರಿದ ಗೋದಿಯನ್ನು ಮಿಕ್ಸಿಗೆ ಹಾಕಿ, ಅಥವಾ ಕುಟ್ಟಿ ಸ್ಮೂತ್ ಆಗಿ ಪುಡಿ ಮಾಡಬೇಕು. ಹೀಗೆ ಪುಡಿ ಮಾಡಿದ ಹಿಟ್ಟನ್ನು ಜರಡಿ ಮಾಡಿ, ಕಸ ಸಪರೇಟ್ ಮಾಡಬೇಕು. ಈಗ ಪರ್ಫೆಕ್ಟ್ ಗೋದಿ ಪುಡಿ ರೆಡಿ. ಇದನ್ನ ಬದಿಗಿರಿಸಿ. ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಅರ್ಧ ಕಪ್ ಶೇಂಗಾ ಕಾಳು ಹಾಕಿ ಹುರಿದುಕೊಳ್ಳಿ. ಹುರಿದ ಬಳಿಕ ಬೌಲ್‌ನಲ್ಲಿ ಹಾಕಿರಿಸಿ. ನಂತರ 20ರಿಂದ 25 ಬಾದಾಮನ್ನು ಹುರಿದುಕೊಳ್ಳಿ. ಈಗ ಹುರಿದುಕೊಂಡ ಶೇಂಗಾ, ಬಾದಾಮ್ ಮತ್ತು ನಾಲ್ಕು ಸ್ಪೂನ್ ಕಲ್ಲು ಸಕ್ಕರೆಯನ್ನ ಮಿಕ್ಸಿ ಜಾರ್‌ಗೆ ಹಾಕಿ, ಪುಡಿ ಮಾಡಬೇಕು. ಈ ಪುಡಿಯನ್ನ ಕೂಡ ಜರಡಿ ಮಾಡಿಕೊಳ್ಳಬೇಕು.
ಈಗ ಈ ಪುಡಿಗೆ 5 ಸ್ಪೂನ್ ಹಾಲಿನ ಪುಡಿ ಮತ್ತು ಮೊದಲೇ ರೆಡಿ ಮಾಡಿದ ಗೋದಿ ಪುಡಿ ಮಿಕ್ಸ್ ಮಾಡಿದ್ರೆ ಹೆಲ್ತ್ ಡ್ರಿಂಕ್ ಪೌಡರ್ ರೆಡಿ. ಅವಶ್ಯಕತೆ ಇದ್ದಲ್ಲಿ, ಚಾಕೋಲೇಟ್ ಪುಡಿ ಅಥವಾ ಏಲಕ್ಕಿ ಪುಡಿ ಸೇರಿಸಿ, ನೀವೇ ನಿಮಗೆ ಬೇಕಾದ ಫ್ಲೇವರ್ ತಯಾರಿಸಿ ಕುಡಿಯಬಹುದು.