ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಅದೇ ರೀತಿ ಅದಕ್ಕೆ ತಕ್ಕ ಪರಿಹಾರವೂ ಇದೆ. ಆದ್ರೆ ಅದನ್ನ ಕಂಡುಕೊಳ್ಳೋಕ್ಕೆ ಸಮಯ ಬೇಕಷ್ಟೇ. ನೀವು ವಾರಕ್ಕೊಮ್ಮೆ ನಾವೀಗ ಹೇಳುವ ಹೇರ್ ಮಾಸ್ಕ್ ಬಳಸಿದ್ರೆ, ನಿಮ್ಮ ಕೂದಲಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗತ್ತೆ.
ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ..
ನಾಲ್ಕು ಸ್ಪೂನ್ ಹರಳೆಣ್ಣೆ, ಎರಡು ಸ್ಪೂನ್ ನ್ಯಾಚುರಲ್ ಆ್ಯಲೋವೆರಾ ಜೆಲ್, ಒಂದು ಸ್ಪೂನ್ ಗ್ಲಿಸರಿನ್. ಇವೆಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಮಿಕ್ಸ್ ಮಾಡಿದ ಮೇಲೆ ಅದು ಕ್ರೀಮಿ ಟೇಕ್ಸಚರ್‌ನಲ್ಲಿರಬೇಕು. ಈಗ ಇದನ್ನು ನಿಮ್ಮ ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ಅಪ್ಲೈ ಮಾಡಿ, ಅರ್ಧ ಗಂಟೆ ಬಳಿಕ ತಲೆ ಸ್ನಾನ ಮಾಡಿ.
ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..
ಈ ಮಾಸ್ಕ್ ತಲೆಗೆ ಹಚ್ಚುವುದರಿಂದ ಹೇರ್ ಡ್ಯಾಮೇಜ್ ಕಂಟ್ರೋಲ್ ಆಗುತ್ತದೆ. ಇದರಲ್ಲಿ ಹರಳೆಣ್ಣೆ ಬಳಸಿರುವ ಕಾರಣಕ್ಕೆ, ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತು ಆ್ಯಲೋವೆರಾ ಬಳಸಿದ್ದರ ಪರಿಣಾಮ, ನಿಮ್ಮ ಕೂದಲ ಬುಡ ಗಟ್ಟಿಮುಟ್ಟಾಗುತ್ತದೆ. ಗ್ಲಿಸರಿನ್ ಹಾಕಿದ ಪರಿಣಾಮ, ನಿಮ್ಮ ಕೂದಲು ಸಾಫ್ಟ್ ಆಗುತ್ತದೆ.
ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..
ಈ ಮಾಸ್ಕ್ ಬಳಸುವುದರಿಂದ ಡ್ಯಾಂಡ್ರಫ್, ಕೂದಲು ಉದುರುವ ಸಮಸ್ಯೆ, ಹೇರ್ ಡ್ಯಾಮೇಜ್, ಕೂದಲು ಬಿಳಿಯಾಗುವ ಸಮಸ್ಯೆ, ಇವೆಲ್ಲದಕ್ಕೂ ಮುಕ್ತಿ ಸಿಗುತ್ತದೆ. ವಾರಕ್ಕೊಮ್ಮೆ ಈ ಮಾಸ್ಕ್ ಬಳಸಿದ್ರೆ ಸಾಕು. ಇನ್ನು ಕೆಮಿಕಲ್ ಇಲ್ಲದ ಶ್ಯಾಂಪೂ ಬಳಸಿ. ಇಲ್ಲವಾದಲ್ಲಿ, ಶೀಗೇಕಾಯಿ ಪುಡಿಯಿಂದ ಸ್ನಾನ ಮಾಡಿ. ಇನ್ನು ನೀವು ಈ ಮಾಸ್ಕ್ ಬಳಸುವ ಮುನ್ನ ತಲೆಗೆ ಎಣ್ಣೆ ಹಚ್ಚದಿದ್ದರೆ, ಒಳಿತು. ಆವಾಗಲೇ ಮಾಸ್ಕ್ ಸರಿಯಾಗಿ ಕೆಲಸ ಮಾಡೋದು. ಇನ್ನು ಕೊನೆಯದಾಗಿ ನಿಮಗೆ ಈ ಮೂರು ವಸ್ತುವಿನಲ್ಲಿ ಯಾವುದಾದರೂ ವಸ್ತು ಬಳಸಿದ್ರೆ, ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.