ಈಗ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಬ್ರ್ಯಾಂಡ್‌ನ ಟೂತ್ ಪೇಸ್ಟ್, ಟೂತ್ ಪೌಡರ್, ಮೌತ್ ಫ್ರೆಶನರ್ ಇತ್ಯಾದಿ ಬಂದಿದೆ. ಆದ್ರೆ ನಮ್ಮ ಹಲ್ಲು ಮಾತ್ರ, ಮೊದಲಿನವರ ರೀತಿ ಆರೋಗ್ಯಕರವಾಗಿಲ್ಲ. ಯಾಕಂದ್ರೆ ಮೊದಲಿನವರು ಬ್ರ್ಯಾಂಡೇಡ್ ಟೂತ್ ಪೇಸ್ಟ್‌ಗಿಂತ ಹೆಚ್ಚು, ಹಲ್ಲಿನ ಪುಡಿಯನ್ನ ಬಳಕೆ ಮಾಡುತ್ತಿದ್ದರು. ಹಾಗಾಗಿ ಅವರ ಹಲ್ಲು ಗಟ್ಟಿ ಮುಟ್ಟಾಗಿತ್ತು. ಹಾಗಾಗಿ ಇಂದು ನಾವು ಮನೆಯಲ್ಲೇ, ಹಲ್ಲುಜ್ಜುವ ಪುಡಿಯನ್ನು ಹೇಗೆ ತಯಾರಿಸೋದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಒಂದು ದೊಡ್ಡ ಸ್ಪೂನ್ ಪ್ಯೂರ್ ಅರಿಷಿನ ಪುಡಿ. ನೀವು ಅರಿಷಿನ ಕೊಂಬನ್ನು ಮನೆಗೆ ತಂದು, ಒಣಗಿಸಿ, ಪುಡಿ ಮಾಡಿದರೆ, ಅದೇ ಪ್ಯೂರ್ ಅರಿಷಿನ. ಅಂಗಡಿಯಲ್ಲಿ ಸಿಗುವ ಕೆಲವು ಅರಿಷಿನ ಪುಡಿಗಳು ಪ್ಯೂರ್ ಆಗಿರುವುದಿಲ್ಲ. ಯಾಕಂದ್ರೆ ಅದರಲ್ಲಿ ಹಿಟ್ಟನ್ನು ಸೇರಿಸಲಾಗತ್ತೆ. ಒಂದು ದೊಡ್ಡ ಸ್ಪೂನ್ ಕೆಂಪುಪ್ಪಿನ ಪುಡಿ. ಒಂದು ದೊಡ್ಡ ಚಮಚ ಲವಂಗದ ಪುಡಿ. ಇವಿಷ್ಟು ಹಲ್ಲುಜ್ಜುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿ.
ಈ ಮೂರು ಪುಡಿಯನ್ನು ಮಿಕ್ಸ್ ಮಾಡಿದ್ರೆ, ಹಲ್ಲುಜ್ಜುವ ಪುಡಿ ರೆಡಿ. ಇದನ್ನ ಒಂದು ಗಾಜಿನ ಡಬ್ಬದಲ್ಲಿ ತುಂಬಿ ಒಂದು ತಿಂಗಳ ವರೆಗೆ ಬಳಸಬಹುದು. ಇದಕ್ಕೆ ನೀರು ತಾಕದಂತೆ ನೋಡಿಕೊಳ್ಳಿ. ಇದಕ್ಕೆ ನೀರು ತಾಕಿದ್ರೆ, ಈ ಪುಡಿ ಬಹುಬೇಗ ಹಾಳಾಗಿ ಬಿಡತ್ತೆ. ಇನ್ನು ನಿಮಗೆ ಈ ಮೂರು ಪುಡಿಯಲ್ಲಿ ಯಾವುದಾದರೂ ಪುಡಿ ಬಳಸಿದ್ರೆ, ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.