Saturday, July 5, 2025

Latest Posts

ಕಾಂತಿಯುತವಾದ ತ್ವಚೆ ಬೇಕಂದ್ರೆ ಇದನ್ನು ನೀವು ಟ್ರೈ ಮಾಡಲೇಬೇಕು..

- Advertisement -

ಅಂದವಾದ, ಬೆಳ್ಳಗಿನ ಮುಖ ಯಾರಿಗೆ ಬೇಡ ಹೇಳಿ. ಇಂದಿನ ಕಾಲದಲ್ಲಿ ಯುವಕರು ಕೂಡ, ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿ ನಾವಿಂದು ಕೆಲವು ಬ್ಯೂಟಿ ಟಿಪ್ಸನ್ನ ನಿಮ್ಮ ಮುಂದೆ ತಂದಿದ್ದೇವೆ. ಅದರಲ್ಲೂ ನಿಸರ್ಗದ ಕೊಡುಗೆಯಾದ ಅರಿಶಿನ ಬಳಸಿ, ನಾವು ಮನೆಯಲ್ಲೇ ಫೇಸ್‌ ಮಾಸ್ಕ ತಯಾರಿಸೋದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ..

ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..

ಅರಿಶಿನ ಮತ್ತು ಆ್ಯಲೋವೆರಾ ಫೇಸ್‌ ಮಾಸ್ಕ್: ನಾಲ್ಕು ಸ್ಪೂನ್ ಆ್ಯಲೋವೆರಾ ಜೆಲ್, ಒಂದು ಸ್ಪೂನ್ ಜೋಜೋಬಾ ಎಣ್ಣೆ, 1 ಸ್ಪೂನ್ ಅರಿಶಿನ ಪುಡಿ ಇವಿಷ್ಟನ್ನು ಮಿಕ್ಸ್ ಮಾಡಿ. ನಿಮ್ಮ ಮುಖವನ್ನು ಕ್ಲೀನ್ ಆಗಿ ತೊಳೆದು, ಅದಾಗಿ ಅದೇ ಆರಲು ಬಿಟ್ಟು. ನಂತರ ಈ ಪೇಸ್ಟ್‌ನ್ನ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ. ಇದರಿಂದ ಮುಖದಲ್ಲಿ ಗ್ಲೋ ಹೆಚ್ಚುತ್ತದೆ.

ಈ ಸಾತ್ವಿಕ ಜ್ಯೂಸ್ಗಳನ್ನು ನೀವೂ ಒಮ್ಮೆ ತಯಾರಿಸಿ ನೋಡಿ..

ಶಿಯಾ ಬಟರ್ ಮತ್ತು ಅರಿಶಿನ ಕ್ರೀಮ್: ಎರಡು ಸ್ಪೂನ್ ಶಿಯಾ ಬಟರ್, 1 ಸ್ಪೂನ್ ಅರಿಶಿನ, ಇವೆರಡನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಈ ಕ್ರೀಮ್ ರೆಡಿ. ಪ್ರತಿದಿನ ಕೊಂಚ ಕೊಂಚ ಮುಖಕ್ಕೆ, ತುಟಿಗೆ ಮತ್ತು ಕುತ್ತಿಗೆಗೆ ಈ ಕ್ರೀಮ್ ಅಪ್ಲೈ ಮಾಡಿ ಮಲಗಿ. ಬೆಳಿಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ಫೇಸ್‌ವಾಶ್ ಮಾಡಿ. ಇದರಿಂದ ನಿಮ್ಮ ತ್ವಚೆ ಸಾಫ್ಟ್ ಆಗುತ್ತದೆ.

4 ಸ್ಪೂನ್ ಕಡ್ಲೆ ಹಿಟ್ಟು, 2 ಸ್ಪೂನ್ ಅಕ್ಕಿ ಹಿಟ್ಟು(ಎರಡೂ ಹಿಟ್ಟನ್ನು ಚೆನ್ನಾಗಿ ಕ್ಲೀನ್ ಮಾಡಿ, ಬಳಸಿ.) 1 ಸ್ಪೂನ್ ಅರಿಶಿನ, ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಒಂದು ಗಾಜಿನ ಡಬ್ಬಿಯಲ್ಲಿ ತುಂಬಿಡಿ. ವಾರಕ್ಕೆ 3 ಬಾರಿ ಇದನ್ನು ಬಳಸಬೇಕು. ನಿಮಗೆ ಬೇಕಾದಷ್ಟು ಪುಡಿ ತೆಗೆದುಕೊಂಡು, ರೋಸ್ ವಾಟರ್ ಅಥವಾ ಮೊಸರಿನೊಂದಿಗೆ ಇದನ್ನು ಮಿಕ್ಸ್ ಮಾಡಿ, ಕ್ರೀಮ್ ತಯಾರಿಸಿ, ಅಪ್ಲೈ ಮಾಡಿ. 30 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಜ್ವರ ಬಂದಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ನೀವು ಮುಖ ತೊಳೆಯುವಾಗ, ಹೆಸರು ಕಾಳಿನ ಪುಡಿ ಅಥವಾ ಕಡಲೆ ಹಿಟ್ಟು ಬಳಸಿ. ಇವೆರಡು ಹಿಟ್ಟು ಕ್ಲೀನ್ ಆಗಿರಲಿ. ಇಲ್ಲವಾದಲ್ಲಿ ಮುಖದ ಮೇಲೆ ಗುಳ್ಳೆಗಳಾಗುವ ಸಾಧ್ಯತೆ ಇರುತ್ತದೆ. ಇನ್ನು ಈ ಮೇಲೆ ಹೇಳಿರುವ ಕ್ರೀಮ್, ಫೇಸ್‌ಪ್ಯಾಕನ್ನು ವಾರಕ್ಕೆ ಮೂರು ಬಾರಿ ಬಳಸಿದ್ರೆ ಸಾಕು. ಪ್ರತಿದಿನ ಬಳಸುವ ಅವಶ್ಯಕತೆ ಇಲ್ಲ. ಯಾಕಂದ್ರೆ ಕೆಲವರಿಗೆ ಪ್ರತಿದಿನ ಅರಿಶಿನ ಬಳಸಿದ್ರೆ, ಮುಖ ಹಳದಿ ಬಣ್ಣವಾಗುತ್ತದೆ. ಇನ್ನು ಈ ಫೇಸ್‌ಮಾಸ್ಕ್‌ನಲ್ಲಿ ಪ್ಯೂರ್ ಅರಿಶಿನವನ್ನೇ ಬಳಸಿ, ಹೊರತು ಕೆಮಿಕಲ್‌ನಿಂದ ತುಂಬಿದ ಅರಿಶಿನವನ್ನಲ್ಲ.

- Advertisement -

Latest Posts

Don't Miss