ಅಂದವಾಗಿರುವ, ದಪ್ಪವಾದ, ಸಿಲ್ಕಿ ಕೂದಲು ನಮಗೂ ಬೇಕು ಅನ್ನೋ ಆಸೆ ಯಾವ ಹೆಣ್ಣು ಮಗಳಿಗಿರೋದಿಲ್ಲಾ ಹೇಳಿ. ಹೆಣ್ಣಿನ ಅಂದ ಹೆಚ್ಚಿಸೋದೇ, ಈ ಕೂದಲು. ಇಂಥ ನೀಳ ಕೇಶರಾಶಿ ನಿಮ್ಮದಾಗಬೇಕು ಅಂದ್ರೆ, ನಾವಿವತ್ತು ಹೇಳುವ ಟಿಪ್ಸ್ ಫಾಲೋ ಮಾಡಿ.
ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..
ಒಂದು ಸ್ಪೂನ್ ತುಪ್ಪ, 2 ಸ್ಪೂನ್ ಆ್ಯಲೋವೆರಾ ಜೆಲ್ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, 30 ನಿಮಿಷ ಬಿಟ್ಟು, ಮೈಲ್ಡ್ ಶ್ಯಾಂಪೂವಿನಿಂದ ಹೇರ್ ವಾಶ್ ಮಾಡಿ. ಇದಕ್ಕಿಂತ ಹೆಚ್ಚು ಹೊತ್ತು ಬಿಡಬೇಡಿ.
ಈ ಸಾತ್ವಿಕ ಜ್ಯೂಸ್ಗಳನ್ನು ನೀವೂ ಒಮ್ಮೆ ತಯಾರಿಸಿ ನೋಡಿ..
ನಿಮ್ಮ ಕೂದಲು ಗಟ್ಟಿಮುಟ್ಟಾಗಬೇಕು ಎಂದರೆ, ಎರಡು ಸ್ಪೂನ್ ಬೇಯಿಸಿದ ಅನ್ನ ಮತ್ತು ನಾಲ್ಕು ಸ್ಪೂನ್ ಫರ್ಮಂಟೆಡ್ ರೈಸ್ ವಾಟರ್ ಸೇರಿಸಿ, ಪೇಸ್ಟ್ ಮಾಡಿ, ಅದೇ ಪೇಸ್ಟ್‌ನ್ನ ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಉತ್ತಮ ಶ್ಯಾಂಪೂವಿನಿಂದ ವಾಶ್ ಮಾಡಿ.
ಜ್ವರ ಬಂದಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..
ಇನ್ನು ನಿಮಗೆ ಡ್ಯಾಂಡ್ರಫ್ ಸಮಸ್ಯೆ ಇದ್ದಲ್ಲಿ, ಒಂದು ಟೇಬಲ್ ಸ್ಪೂನ್ ಹಸಿ ಶುಂಠಿ ರಸ ಮತ್ತು 1 ಟೇಬಲ್ ಸ್ಪೂನ್ ಬೇವಿನ ಎಣ್ಣೆ ಮಿಕ್ಸ್ ಮಾಡಿ, ಹೆಡ್ ಮಸಾಜ್ ಮಾಡಿ, ಅರ್ಧ ಗಂಟೆ ಬಳಿಕ, ತಲೆ ಸ್ನಾನ ಮಾಡಿ.
ಡೀಪ್ ಕಂಡೀಶ್ನಿಂಗ್‌ಗಾಗಿ ಒಂದು ಟೇಬಲ್ ಸ್ಪೂನ್ ದಾಸವಾಳದ ಎಲೆಯ ಪುಡಿ 2 ಟೇಬಲ್ ಸ್ಪೂನ್ ಮೊಸರು ಹಾಕಿ ಮಿಕ್ಸ್ ಮಾಡಿ, ಇದನ್ನು ಕೂದಲ ಬುಡ ಮತ್ತು ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಳಿಕ, ತಲೆ ಸ್ನಾನ ಮಾಡಿ.