ಊಟ ಸರಿಯಾಗಿ ಮಾಡದಿದ್ದಲ್ಲಿ, ಅಥವಾ ನಿದ್ದೆ ಸರಿಯಾಗಿ ಮಾಡದಿದ್ದಲ್ಲಿ, ಕೆಲಸದ ಒತ್ತಡದಿಂದ ಹೀಗೆ ಹಲವು ಕಾರಣಗಳಿಂದ ಪದೇ ಪದೇ ತಲೆನೋವು ಬರುತ್ತದೆ. ಇದನ್ನು ಮೈಗ್ರೇನ್ ಎಂದು ಕರೆಯುತ್ತಾರೆ. ಈ ಮೈಗ್ರೇನ್ ಸಮಸ್ಯೆ ಶುರುವಾದರೆ, ಯಾವುದೇ ಕೆಲಸವನ್ನ ನೆಮ್ಮದಿಯಿಂದ ಮಾಡಲಾಗುವುದಿಲ್ಲ. ಹಾಗಾಗಿ ನಾವಿಂದು ಮೈಗ್ರೇನ್ ಶುರುವಾದರೆ, ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಲಿದ್ದೇವೆ..
ನೀವು ಹೊತ್ತಿಗೆ ಸರಿಯಾಗಿ ಊಟ, ತಿಂಡಿ ಮಾಡದಿದ್ದಲ್ಲಿ, ಅಥವಾ ಸರಿಯಾಗಿ ನಿದ್ದೆ ಮಾಡಿಲ್ಲವೆಂದಲ್ಲಿ ನಿಮಗೆ ಮೈಗ್ರೇನ್ ಸಮಸ್ಯೆ ಬರುತ್ತದೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಜೀರ್ಣಕ್ರಿಯೆ ಸರಿಯಾಗಿ ಆಗಬೇಕು. ಜೀರ್ಣಕ್ರಿಯೆ ಸರಿಯಾಗದಿದ್ದಾಗಲೇ, ಇಂಥ ರೋಗಗಳು ಬರೋದು. ಅಥವಾ ಒಂದು ವಿಷಯದ ಬಗ್ಗೆ ಅತೀಯಾಗಿ ಯೋಚನೆ ಮಾಡುವುದು, ಆಫೀಸ್ ಕೆಲಸದಲ್ಲಿ ಹೆಚ್ಚು ಟೆನ್ಶನ್ ತೆಗೆದುಕೊಳ್ಳುವುದರಿಂದಲೂ ನೀವು ಮೈಗ್ರೇನ್ ಸಮಸ್ಯೆಗೆ ಗುರಿಯಾಗುತ್ತೀರಿ.
ಹೆಚ್ಚು ಟಿವಿ, ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ನೋಡುವುದರಿಂದಲೂ ನಿಮಗೆ ಮೈಗ್ರೇನ್ ಬರಬಹುದು. ಈ ಅರ್ಧ ತಲೆನೋವಿನ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ. ನೀವು ಧ್ಯಾನ, ಪ್ರಾಣಾಯಾಮ ಮಾಡಿ, ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿದಿನ ಬೆಳಿಗ್ಗೆ ಎದ್ದು ಶಾಂತ ಸ್ಥಳದಲ್ಲಿ ಧ್ಯಾನ, ಪ್ರಾಣಾಯಾಮ, ಸರಿಯಾದ ವಿಧಾನದಲ್ಲಿ ಯೋಗ ಮಾಡಿದರೆ ನಿಮ್ಮ ಮೈಗ್ರೇನ್ ಸಮಸ್ಯೆ ದೂರವಾಗತ್ತೆ.
ಅಲ್ಲದೇ ನಿಮ್ಮ ಆಹಾರ ಕ್ರಮ ಸರಿಯಾಗಿ ಇದ್ದಲ್ಲಿಯೂ ನೀವು ಮೈಗ್ರೇನ್‌ನಿಂದ ಮುಕ್ತಿ ಹೊಂದಬಹುದು. ಶುಂಠಿ ಕಶಾಯ ಮಾಡಿ ಕುಡಿಯಿರಿ. ಆದರೆ ಆ ಶುಂಠಿ ಕಶಾಯ ಕುಡಿದು ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದಲ್ಲಿ, ದೇಹವನ್ನು ತಂಪು ಮಾಡಿಕೊಳ್ಳಿ ಅಥವಾ ಶುಂಠಿ ಕಶಾಯ ಸೇವಿಸಬೇಡಿ. ರಾತ್ರಿ ಮಲಗುವಾಗ ಉಗುರುಬೆಚ್ಚಗಿನ ಎಣ್ಣೆಯಿಂದ ನಿಮ್ಮ ತಲೆಗೆ ಚೆನ್ನಾಗಿ ಮಸಾಜ್ ಮಾಡಿ, 8 ಗಂಟೆಗಳ ಕಾಲ ನೆಮ್ಮದಿಯಾಗಿ ನಿದ್ದೆ ಮಾಡಿ.
ಇನ್ನು ನಾವು ಪ್ರತೀ ಸಾರಿ ಹೇಳಿದಂತೆ, ಚೆನ್ನಾಗಿ ನೀರು ಕುಡಿಯಿರಿ. ಕಾಫಿ, ಟೀ ಸೇವನೆ ಬಿಟ್ಟುಬಿಡಿ. ಹಣ್ಣು ತರಕಾರಿ ಚೆನ್ನಾಗಿ ತಿನ್ನಿ. ಸಮಯಕ್ಕೆ ಸರಿಯಾಗಿ ಊಟ ಮಾಡಿ, ತಿಂಡಿ ಮಾಡಿ. ನಿದ್ದೆ ಮಾಡಿ. ಸೊಪ್ಪು, ಡ್ರೈಫ್ರೂಟ್ಸ್, ಹಾಲು, ಮೊಸರು, ಬೆಣ್ಣೆ, ತುಪ್ಪ ಸೇವನೆ ಮಾಡಿ. ಒಟ್ಟಿನಲ್ಲಿ ಆರೋಗ್ಯಕರ ಆಹಾರ ಸೇವಿಸಿ, ಶಿಸ್ತಿನಿಂದ ಜೀವಿಸಿ, ಯಾವುದಕ್ಕೂ ಟೆನ್ಶನ್ ತೆಗೆದುಕೊಳ್ಳದೇ, ಆರಾಮವಾಗಿ ಜೀವನ ಮಾಡಿ.
ನೀವು ಮಾಡಬಹುದಾದ ಇನ್ನೊಂದು ಪ್ರಯೋಗವೆಂದಲ್ಲಿ ಹಣೆ ಮೇಲೆ ತಣ್ಣಿರಿನ ಬಟ್ಟೆ ಹಾಕಿಕೊಳ್ಳಿ. ಇಷ್ಟೆಲ್ಲ ಮಾಡಿಯೂ ನಿಮ್ಮ ಮೈಗ್ರೇನ್ ಪ್ರಾಬ್ಲಮ್ ಕಡಿಮೆಯಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.