ಕೂದಲು ದಟ್ಟವಾಗಿ, ಸಿಲ್ಕಿಯಾಗಿದ್ದಾಗಲೇ, ಮುಖದ ಸೌಂದರ್ಯವೂ ಹೆಚ್ಚೋದು. ಅದಕ್ಕಾಗಿಯೇ ಇಂದಿನ ಹೆಣ್ಣು ಮಕ್ಕಳು ಹೇರ್ ಸ್ಟ್ರೇಟ್ನಿಂಗ್ ಮಾಡಿಸಿಕೊಳ್ಳೋದು. ಆದ್ರೆ ನಾವಿವತ್ತು ಕೆಲ ನ್ಯಾಚುರಲ್ ಪದಾರ್ಥಗಳನ್ನ ಬಳಸಿಯೇ, ಕೂದಲನ್ನ ಸಿಲ್ಕಿಯಾಗಿ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ..
ಅಂಟಲಕಾಯಿಯ ಶ್ಯಾಂಪೂ ಹಚ್ಚಿ ತಲೆ ಸ್ನಾನ ಮಾಡೋದು ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂಟಲಕಾಯಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಅದೇ ನೀರಿನ ಜೊತೆ, ಕುದಿಸಿ. ಆ ನೀರು ಚೆನ್ನಾಗಿ ಕುದಿ ಬಂದ ಮೇಲೆ, ತಣ್ಣಗಾಗಲು ಬಿಡಿ. ಈಗ ಅಂಟಲಕಾಯಿಯನ್ನು ಆ ನೀರಿನಲ್ಲಿ ಚೆನ್ನಾಗಿ ಹಿಂಡಿ, ನೊರೆ ಬರುವ ಹಾಗೆ ಗಾಢವಾದ ನೀರಾಗಿರಬೇಕು. ಈಗ ಇದನ್ನು ಸೋಸಿದರೆ, ಶ್ಯಾಂಪೂ ರೆಡಿ. ಇದರಿಂದ ತಲೆಗೆ ಮಸಾಜ್ ಮಾಡಿ, ಕೆಲ ಹೊತ್ತಿನ ಬಳಿಕ, ತಲೆ ಸ್ನಾನ ಮಾಡಿ.
ಎರಡನೇಯದ್ದು ಸಿಗೇಕಾಯಿ ಮತ್ತು ನೆಲ್ಲಿಕಾಯಿ ಶ್ಯಾಂಪೂ. ಒಂದು ಟೇಬಲ್ ಸ್ಪೂನ್ ಸಿಗೇಕಾಯಿ ಪುಡಿ ಮತ್ತು ಒಂದು ಟೇಬಲ್ ಸ್ಪೂನ್ ನೆಲ್ಲಿಕಾಯಿ ಪುಡಿ ಸೇರಿಸಿ, ಎರಡು ಕಪ್ ನೀರಿಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನ ಒಂದು ಪಾತ್ರೆಗೆ ಹಾಕಿ, ಕುದಿಸಿ, ಆರಿಸಿ. ತಣಿದ ಬಳಿಕ, ಇದನ್ನ ತಲೆಗೆ ಹಚ್ಚಿ ಮಸಾಜ್ ಮಾಡಿ, ಕೆಲ ಹೊತ್ತಿನ ಬಳಿಕ, ತಲೆ ಸ್ನಾನ ಮಾಡಿ.
ಮೂರನೇಯದ್ದು ಮೆಹೆಂದಿ ಹೇರ್ ಪ್ಯಾಕ್. 5 ಟೇಬಲ್ ಸ್ಪೂನ್ ಮೆಹೆಂದಿ, ಮತ್ತು 2 ಟೇಬಲ್ ಸ್ಪೂನ್ ತೆಂಗಿನ ಎಣ್ಣೆ, 1 ಟೇಬಲ್ ಸ್ಪೂನ್ ಆ್ಯಲೋವೆರಾ ಜೆಲ್. ಇವೆಲ್ಲವನ್ನೂ ಮಿಕ್ಸ್ ಮಾಡಿ, ಹೇರ್ ಪ್ಯಾಕ್ ತಯಾರಿಸಿ. ಇದನ್ನ ತಲೆಗೆ ಹಚ್ಚಿ, 1 ಗಂಟೆ ಬಿಟ್ಟು ತಲೆ ಸ್ನಾನ ಮಾಡಿ.. ತಿಂಗಳಿಗೆ ಒಮ್ಮೆ ಈ ಪ್ಯಾಕ್ ಹಾಕಿದ್ರೆ ಸಾಕು. ಮತ್ತು ವಾರದಲ್ಲಿ 2 ಬಾರಿಯಷ್ಟೇ ತಲೆಸ್ನಾನ ಮಾಡಬೇಕು. ಇನ್ನು ನೀವು ಈ ಎಲ್ಲ ಪ್ಯಾಕ್ ಹಾಕಿದ್ರಷ್ಟೇ ನಿಮ್ಮ ಕೂದಲನ್ನ ಆರೋಗ್ಯಕರವಾಗಿ ಮಾಡಿಕೊಳ್ಳಲು ಆಗೋದಿಲ್ಲ. ಬದಲಾಗಿ ನೀವು ಹಣ್ಣು, ತರಕಾರಿ, ಆರೋಗ್ಯಕರ ಆಹಾರಗಳನ್ನ ಕೂಡ ಸೇವಿಸಬೇಕು.
ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?