Friday, September 20, 2024

Latest Posts

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ರೆಮಿಡಿ ಫಾಲೋ ಮಾಡಿ..

- Advertisement -

ಕೈ ಕಾಲೆಲ್ಲ ಸಣ್ಣಗಿದ್ದು, ಹೊಟ್ಟೆ ಮಾತ್ರ ದಪ್ಪಗಿದ್ರೆ, ಆ ದೇಹದ ಆಕಾರವೇ ವಿಕಾರವಾಗಿರುತ್ತದೆ. ಅಲ್ಲದೇ, ಗಂಡು ಮಕ್ಕಳು ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಹೇರ್ ಸ್ಟೈಲ್ ಮಾಡಿಕೊಂಡರೂ, ಅವರ ಹೊಟ್ಟೆಯ ಬೊಜ್ಜಿನಿಂದ, ಅವರು ನಾಚಿಕೆ ಪಡುವಂತಾಗುತ್ತಿದೆ. ಹಾಗಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ನಾವಿಂದು ಕೆಲ ರೆಮಿಡಿ ಹೇಳಲಿದ್ದೇವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ದೇಹದಲ್ಲಿ ಕಫದ ಪ್ರಮಾಣದಲ್ಲಿ ಏರುಪೇರಾದಾಗಲೇ, ಹೊಟ್ಟೆಯ ಬೊಜ್ಜು ಬೆಳೆಯತ್ತೆ. ಕಿವಿ ನೋವು, ಗಂಟಲು ನೋವೆಲ್ಲ ಬರುವುದೇ, ದೇಹದಲ್ಲಿ ಕಫದ ಪ್ರಮಾಣದಲ್ಲಿ ಏರುಪೇರಾದಾಗ. ಹಾಗಾದ್‌ರೆ ನಮ್ಮ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗಬಾರದು ಅಂದ್ರೆ ಏನು ಮಾಡಬೇಕು ಅಂದ್ರೆ, ಸಕ್ಕರೆ ಸೇವನೆ ಮಾಡೋದನ್ನ ಬಿಟ್ಟುಬಿಡಬೇಕು. ಸಕ್ಕರೆಯನ್ನ ಸ್ಲೋ ಪಾಯ್ಸನ್ ಎಂದು ಹೇಳುತ್ತಾರೆ. ಹಾಗಾಗಿ ಸಕ್ಕರೆ ಸೇವನೆ ಮಾಡೋದನ್ನ ನಿಲ್ಲಿಸಿ.

ಸಕ್ಕರೆ ಸೇವನೆ ಮಾಡದಿರುವುದರಿಂದ, ಬೊಜ್ಜಿನ ಸಮಸ್ಯೆ, ಹೊಟ್ಟೆ ಉಬ್ಬರ, ಶುಗರ್, ಬಿಪಿ, ಹೃದಯ ರೋಗ ಸೇರಿ, ಹಲವು ಸಮಸ್ಯೆ ಬರುತ್ತದೆ. ಹಾಗಾಗಿ ಸಕ್ಕರೆ ಬದಲು ಉತ್ತಮವಾದ ಬೆಲ್ಲ ಬಳಸಿ. ಹಾಗಾದ್ರೆ ಯಾಕೆ ಸಕ್ಕರೆ ಬಳಸಬಾರದು ಅಂದ್ರೆ, ಸಕ್ಕರೆ ಸರಿಯಾಗಿ ಜೀರ್ಣವಾಗದ ವಸ್ತುವಾಗಿದೆ. ಇದು ನಾಲಿಗೆಗೆ ರುಚಿ ಕೊಡಲಷ್ಟೇ ಸೀಮಿತವಾಗಿದೆ. ಇದು ದೇಹಕ್ಕೆ ಹೋಗಿ, ಸರಿಯಾಗಿ ಜೀರ್ಣವಾಗದೇ, ಕಸವಾಗಿ ನಮ್ಮ ದೇಹದಲ್ಲಿ ಕೂರುತ್ತದೆ. ಈ ಕಸವೇ, ಬೊಜ್ಜಾಗಿ ಬೆಳೆದು, ತರಹೇವಾರಿ ರೋಗವನ್ನು ತರೋದು.

ಕೆಲವರು ಊಟವಾದ ಬಳಿಕ ಸಿಹಿ ತಿಂತಾರೆ. ಆದ್ರೆ ಪ್ರಯೋಗ ಮಾಡದ ಕೆಲ ವೈದ್ಯರು ಹೇಳುವ ಪ್ರಕಾರ, ಊಟವಾದ ಬಳಿಕ, ಕೊಂಚವೇ ಕೊಂಚ ಬೆಲ್ಲ ತಿನ್ನಬೇಕಂತೆ. ಇದರಿಂದ ನೀವು ತಿಂದ ಆಹಾರ 4 ಗಂಟೆಯೊಳಗೆ ಜೀರ್ಣವಾಗುತ್ತದೆ ಅಂತೆ. ಆದ್ರೆ ನೀವು ಸಕ್ಕರೆ ಅಥವಾ ಸಕ್ಕರೆ ಬಳಸಿ ಮಾಡಿದ ಸಿಹಿ ತಿಂಡಿ ತಿಂದಲ್ಲಿ, 8 ಗಂಟೆವರೆಗೂ ನೀವು ತಿಂದ ಆಹಾರ ಜೀರ್ಣವಾಗುವುದಿಲ್ಲ. ಮತ್ತು ನೀವು ಆರೋಗ್ಯಕರವಾದ ಊಟ ಮಾಡಿದ್ದರೂ ಕೂಡ, ಆ ಊಟದ ಶಕ್ತಿ ಎಲ್ಲ, ಸಕ್ಕರೆಯನ್ನ ಜೀರ್ಣ ಮಾಡುವುದರಲ್ಲೇ ಖರ್ಚಾಗಿ ಹೋಗುತ್ತದೆ. ಹಾಗಾಗಿ ಸಕ್ಕರೆ ಸೇವನೆ ನಿಲ್ಲಿಸಿ, ದೇಹದ ಬೊಜ್ಜನ್ನ ಕರಗಿಸಿ.

ಮಂಡಿ, ಮೊಣಕೈ, ಕಂಕುಳ ಚರ್ಮದ ಬಣ್ಣವನ್ನ ಈ ರೀತಿ ತಿಳಿಯಾಗಿಸಿ..

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ಇದೊಂದೇ ವಸ್ತು ಸಾಕು..

- Advertisement -

Latest Posts

Don't Miss