Monday, April 21, 2025

Latest Posts

ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಇಲ್ಲಿದೆ ಪರಿಹಾರ..

- Advertisement -

ನಿಮ್ಮ ಮುಖ ಎಷ್ಟೇ ಚೆಂದವಿದ್ದರೂ ಕೂಡ, ನಿಮಗೆ ಡಾರ್ಕ್ ಸರ್ಕಲ್ ಇದ್ದರೆ, ಆ ಎಲ್ಲ ಚೆಂದವೂ ನೀರಿನಲ್ಲಿ ಹೋಮ ಮಾಡಿದ ಹಾಗಿರತ್ತೆ. ಹಾಗಾಗಿ ನೀವು ಮುಖಕ್ಕೆ ಏನು ಟ್ರೀಟ್‌ಮೆಂಟ್ ಮಾಡದಿದ್ದರೂ, ನಿಮ್ಮ ಡಾರ್ಕ್‌ ಸರ್ಕಲನ್ನ ಮಾತ್ರ ಮೊದಲು ಹೋಗಲಾಡಿಸಬೇಕು. ಹಾಗಾಗಿ ನಾವಿಂದು ಡಾರ್ಕ್ ಸರ್ಕಲ್ ಹೋಗಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಲಿದ್ದೇವೆ..

ಕೆಲಸದ ಒತ್ತಡ, ಹೆಚ್ಚು ಸಮಯ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವುದು, ಹೆಚ್ಚು ಹೊತ್ತು ಮೊಬೈಲ್ ಬಳಸುವುದು, ನಿದ್ದೆಗೆಡುವುದು, ಆರೋಗ್ಯ ಹಾಳಾಗುವುದು, ಮದ್ಯಪಾನ, ಧೂಮಪಾನ ಸೇವನೆ, ದೇಹದಲ್ಲಿ ಐರನ್ ಅಂಶ ಕಡಿಮೆ ಇರುವುದು ಇವೆಲ್ಲದರಿಂದಲೂ ನಿಮ್ಮ ಕಣ್ಣಿನ ಸುತ್ತಲೂ ಕಪ್ಪು ಕಲೆಯಾಗುತ್ತದೆ. ಇದನ್ನೇ ಡಾರ್ಕ್ ಸರ್ಕಲ್ ಎನ್ನುತ್ತಾರೆ.

ಇದಕ್ಕೆ ನೀವು ಯೋಗ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಪಶ್ಚಿಮೊತ್ತಾಸನ, ಸರ್ವಾಂಗಾಸನ, ಧನುರ್ವಕ್ರಾಸನ, ಶವಾಸನ. ಇವೆಲ್ಲ ಆಸನ ಮಾಡುವುದರಿಂದ ನಿಮ್ಮ ಮುಖದ ಸೌಂದರ್ಯ ಹೆಚ್ಚುತ್ತದೆ. ಕಣ್ಣಿನ ಕಪ್ಪು ಕಲೆಯೂ ಹೋಗುತ್ತದೆ. ಇದರೊಟ್ಟಿಗೆ ನೀವು ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದಲೂ ನಿಮ್ಮ ಮುಖದಲ್ಲಿ ಸುಂದರ ಕಳೆ ಬರುತ್ತದೆ.

ಇನ್ನು ಸೌತೇಕಾಯಿಯನ್ನು ಸ್ಲೈಸ್ ಮಾಡಿ, ಅದನ್ನು ಫ್ರಿಜ್‌ನಲ್ಲಿರಿಸಿ. ಅರ್ಧ ಗಂಟೆ ಬಳಿಕ ಆ ಸೌತೇಕಾಯಿ ಸ್ಲೈಸನ್ನ ಕಣ್ಣಿನ ಮೇಲೆ ಇರಿಸಿಕೊಳ್ಳಿ. ಗ್ರೀನ್‌ ಟೀ ಬ್ಯಾಗನ್ನ ಕೂಡ ನೀವು ಕಣ್ಣಿನ ಕಲೆ ನಿವಾರಣೆಗೆ ಬಳಸಬಹುದು. ಆಲೂಗಡ್ಡೆ ತುರಿದು, ಅದನ್ನ ಕೂಡ ನೀವು ಕಣ್ಣಿನ ಮೇಲೆ ಇರಿಸಿಕೊಳ್ಳಬೇಕು.  ಇನ್ನು ನಿಮಗೆ ಗ್ರೀನ್ ಟೀ, ಸೌತೇಕಾಯಿ, ಆಲೂಗಡ್ಡೆ ಬಳಸಿದ್ದಲ್ಲಿ ಅಲರ್ಜಿಯಾಗುತ್ತದೆ ಎಂದಾದಲ್ಲಿ, ನೀವು ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಬಳಸುವುದು ಉತ್ತಮ.

ನುಗ್ಗೆಸೊಪ್ಪು ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಭರಪೂರ ಲಾಭಗಳು..

ಮೈಗ್ರೇನ್ (ತಲೆನೋವು) ಪದೇ ಪದೇ ಬರುತ್ತಿದ್ದರೆ, ಈ ರೆಮಿಡಿ ಬಳಸಿ..

ಓಟ್ಸ್ ಈ ರೀತಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು..

- Advertisement -

Latest Posts

Don't Miss