ನಾವು ಎಷ್ಟೇ ಉತ್ತಮವಾದ ಪರಿಸರದಲ್ಲಿದ್ದರೂ, ಧೂಳು ನ್ಮಮ ಮುಖದ ಸೌಂದರ್ಯವನ್ನ ಹಾಳು ಮಾಡೇ ಮಾಡತ್ತೆ. ಹಾಗಾಗಿಯೇ ಮುಖದಲ್ಲಿ ಗುಳ್ಳೆ, ಮೊಡವೆಗಳು ಆಗೋದು. ಅದಕ್ಕಾಗಿ ನಾವು ಹಲವು ಮನೆ ಮದ್ದು, ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಎಲ್ಲವನ್ನೂ ಬಳಸುತ್ತೇವೆ. ಆದರೂ ಕೂಡ ಆ ಸಮಸ್ಯೆಗೆ ಮುಕ್ತಿ ಸಿಗೋದಿಲ್ಲಾ. ಹಾಗಾಗಿ ನಾವಿಂದು ಫೇಸ್ ಸೇರಮ್ ರೆಡಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಇದನ್ನ ಮುಖಕ್ಕೆ ಅಪ್ಲೈ ಮಾಡುವುದರಿಂದ, ನಿಮ್ಮ ಮುಖದ ಮೇಲಿನ ಮೊಡವೆ ಕಲೆ ಮಾಯವಾಗತ್ತೆ. ನೀವು ಯಂಗ್ ಆಗಿ ಕಾಣುವಂತೆ ಮಾಡತ್ತೆ.
ನಾವೀಗ ಹೇಳುವ ಸೇರಮನ್ನ ನೀವು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮುಖವನ್ನು ಕ್ಲೀನ್ ಆಗಿ ತೊಳೆದ ಬಳಿಕ ಅಪ್ಲೈ ಮಾಡಬೇಕು. ಮತ್ತು ಮಸಾಜ್ ಮಾಡಬೇಕು. ಅದನ್ನ ಹಾಗೆ ಒಣಗಲು ಬಿಡಬೇಕು. ನಾಲ್ಕು ಡ್ರಾಪ್ಸ್ ಸೇರಮ್ ಬಳಸಿದ್ರೆ ಸಾಕು. ಮತ್ತು ನೀವು ಮೊದಲು ಇದನ್ನ ಕೈಗೆ ಅಪ್ಲೈ ಮಾಡಿ ನೋಡಿ. ಅದು ಉತ್ತಮವಾಗಿ ವರ್ಕ್ ಆದ್ರೆ ಮಾತ್ರ ಮುಖಕ್ಕೆ ಹಚ್ಚಿ. ನಿಮಗೆ ಅಲರ್ಜಿಯಾಗುವುದಾದಲ್ಲಿ ಹಚ್ಚಬೇಡಿ.
ನಿಮ್ಮದು ಡ್ರೈ ಸ್ಕಿನ್ ಆಗಿದ್ರೆ, ಒಂದು ಸ್ಪೂನ್ ತೆಂಗಿನ ಎಣ್ಣೆ, ಒಂದು ಸ್ಪೂನ್ ಜೇನುತುಪ್ಪ, ಒಂದು ಸ್ಪೂನ್ ಆ್ಯಲೋವೆರಾ ಜ್ಯೂಸ್ ಮಿಕ್ಸ್ ಮಾಡಿ. ಈಗ ಸೇರಮ್ ರೆಡಿ. ಆಯ್ಲೋವೆರಾ ಜೆಲ್ ನಮ್ಮ ಮುಖದ ಮೇಲಿನ ಕಲೆ ದೂರ ಮಾಡುತ್ತದೆ. ನಮ್ಮ ಸ್ಕಿನ್ ಕ್ಲೀನ್ ಮಾಡುತ್ತದೆ. ತೆಂಗಿನ ಎಣ್ಣೆ ಮಾಯ್ಸ್ಚರೈಸ್ ಆಗುವಂತೆ ಮಾಡುತ್ತದೆ. ಜೇನುತುಪ್ಪ ತ್ವಚೆಯ ಆರೋಗ್ಯ ಕಾಪಾಡುತ್ತದೆ.
ಇನ್ನು ನಿಮ್ಮದು ಆಯ್ಲಿ ಸ್ಕಿನ್ ಆಗಿದ್ರೆ, ಒಂದು ಸ್ಪೂನ್ ಟೊಮೆಟೋ ಜ್ಯೂಸ್, ಒಂದು ಸ್ಪೂನ್ ಜೇನುತುಪ್ಪ ಸೇರಿಸಿ. ಈಗ ಸೇರಮ್ ರೆಡಿ. ಟೊಮೆಟೋ ನಿಮ್ಮ ತ್ವಚೆಯನ್ನ ಗುಲಾಬಿ ಮಾಡುವಲ್ಲಿ ಸಹಾಯ ಮಾಡತ್ತೆ. ಗ್ಲೋ ಸಿಗತ್ತೆ.
ಇನ್ನು ನಿಮ್ಮದು ಸೆನ್ಸಿಟಿವ್ ಸ್ಕಿನ್ ಆಗಿದ್ರೆ, ಒಂದು ಸ್ಪೂನ್ ಸಕ್ಕರೆಯನ್ನು ಕರಗಿಸಿ. ಇದಕ್ಕೆ ಹಸಿ ಹಾಲು ಸೇರಿಸಿದ್ರೆ ಸೇರಮ್ ರೆಡಿ. ಇದನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಇದರಿಂದ ನಿಮ್ಮ ಮುಖದಲ್ಲಿರುವ ಕೊಳೆ ಮಾಯವಾಗತ್ತೆ. ಹಾಲು ಸಕ್ಕರೆ, ನಿಮ್ಮ ಮುಖಕ್ಕೆ ತೇವ ಕೊಡತ್ತೆ.




