Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ವೃಷಭ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ.
ವೃಷಭ ರಾಶಿಯವರಿಗೆ ಈ ವರ್ಷ ಅತ್ಯುತ್ತಮವಾಗಿರಲಿದೆ. ಆದರೆ ತಾಯಿಯ ಆರೋಗ್ಯದಲ್ಲಿ ಏರುಪೇರಾಗಲಿದೆ. ಸಹೋದರರಿಂದ ಕಲಹ ಉಂಟಾಗುವ ಸಾಧ್ಯತೆ ಇದೆ. ಆದರೆ ಅದರ ಜೊತೆ ಲಾಭವೂ ಉಂಟಾಗುತ್ತದೆ. ಮನೆ ಬದಲಾಯಿಸುವ ಸಾಧ್ಯತೆ ಇರುತ್ತದೆ. ಸಹೋದರನೊಂದಿಗೆ ಹಣದ ವಿಚಾರವಾಗಿ ಮಾತನಾಡುವಾಗ ತಾಳ್ಮೆ ವಹಿಸಬೇಕು. ಇಲ್ಲದಿದ್ದಲ್ಲಿ, ಜಗಳವಾಗುವ ಸಾಧ್ಯತೆ ಇದೆ.
ಅಲ್ಲದೇ, ಆತುರದಿಂದ ಭೂಮಿ, ಮನೆ ಖರೀದಿಸಿ, ಸಾಲಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಏನೇ ಖರೀದಿ ಮಾಡುವುದಿದ್ದರೂ, ಸಾಲವಾಗದ ರೀತಿ ನೋಡಿಕೊಳ್ಳಿ. ಅಥವಾ ಭೂಮಿ ವಿಚಾರವಾಗಿಯೇ ತಾಯಿ ಜೊತೆ ಜಗಳವಾಗಬಹುದು. ಹಾಗಾಗಿ ಭೂಮಿ ವಿಚಾರವಾಗಿ ವೃಷಭ ರಾಶಿಯವರು ಎಚ್ಚರಿಕೆಯಿಂದಿರಬೇಕು.
ಇನ್ನು ಹಲ್ಲು ನೋವಿನ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಜೀವನದಲ್ಲಿ ನೆಮ್ಮದಿ ಬೇಕಾಗಿದ್ದಲ್ಲಿ ಸರ್ಪ ದೇವರ ದರ್ಶನ ಮಾಡಿ, ಪೂಜೆ ಸಲ್ಲಿಸಿ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.