Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ಮೇಷ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ.
ಮೇಷ ರಾಶಿಗೆ ಈ ಯುಗಾದಿ ಸಮಯಕ್ಕೆ ಏಳೂವರೆ ಶನಿ ಶುರುವಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ಶನಿ ದೇವರು ಬುದ್ಧಿ ಕಲಿಸುವ ಸಮಯ, ಪರೀಕ್ಷೆ ತೆಗೆದುಕೊಳ್ಳುವ ಸಮಯ. ಶನಿ ದೇವರಾಗಿರುವ ಕಾರಣ, ಇದನ್ನು ಶನಿ ಕಾಟವೆಂದು ಹೇಳಬಾರದು. ಈ ವರ್ಷ ಶತ್ರುಭೀತಿ ಹೆಚ್ಚಾಗಿರುತ್ತದೆ. ಅಲ್ಲದೇ, ಪ್ರೀತಿ ಪ್ರೇಮದ ವಿಷಯದಲ್ಲಿ ಮೇಷ ನಕ್ಷತ್ರದವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಅಲ್ಲದೇ ಗರ್ಭಿಣಿಯರು ಕೂಡ ಈ ವೇಳೆ ಎಚ್ಚರಿಕೆಯಿಂದ ಇದ್ದು, ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು. ಎಲ್ಲಾದರೂ ಹೋಗುವಾಗ, ನಡೆದಾಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅಲ್ಲದೇ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯಾವುದೇ ವಿಚಾರದಲ್ಲಿಯಾದರೂ ಮೋಸ ಹೋಗುವ ಸಾಧ್ಯತೆ ಇರುತ್ತದೆ.
ವಾಹನ ಖರೀದಿ, ಭೂಮಿ ವಿಚಾರ ಯಾವುದೇ ಬೇರೆ ಕೆಲಸದ ವಿಚಾರದಲ್ಲಿ ಪಾರ್ಟ್ನರ್‌ಶಿಪ್ ಮಾಡುವುದಿ್ದರೆ, ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.