Horoscope: ನೀವು ಕೆಲ ರಾಶಿಯವರನ್ನು ನೋಡಿರಬಹುದು. ಅವರು ಬಡತನದ ಮನೆಯಲ್ಲಿ ಅಥವಾ ಮಧ್ಯಮವರ್ಗದವರ ಮನೆಯಲ್ಲಿ ಹುಟ್ಟಿದರೂ, ಅವರು ಹುಟ್ಟಿದ ಬಳಿಕ, ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಆ ಮನೆಯಲ್ಲಿ ಬೇಗ ಬೇಗ ಬರುತ್ತದೆ. ಯಾಕಂದ್ರೆ ಇವರೆಲ್ಲ ಹುಟ್ಟುವಾಗಲೇ ಲಕ್ಷ್ಮೀಯ ಕೃಪೆ ಜೊತೆ ಹುಟ್ಟುವವರು. ಇವರಿಗೆ ಕೊನೆಯವರೆಗೂ ಯಾವ ಕೊರತೆಯೂ ಇರುವುದಿಲ್ಲ. ಹಾಗಾದ್ರೆ ಯಾವುದು ಅಂಥ ಲಕ್ಕಿ ರಾಶಿ ಅಂತಾ ತಿಳಿಯೋಣ ಬನ್ನಿ..
ಮಿಥುನ ರಾಶಿ: ಮಿಥುನ ರಾಶಿಯವರ ಮೇಲೆ ಸದಾ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಕೂಡ, ಇವರಿಗೆ ಮಾತ್ರ ಬಯಸಿದ್ದೆಲ್ಲವೂ ಸಿಗುತ್ತದೆ. ಹಾಗಂತ ಇವರು ಸಿಕ್ಕ ಸಿಕ್ಕದ್ದೆಲ್ಲ ಬಯಸುವುದಿಲ್ಲ. ಆದರೆ ಐಷಾರಾಮಿ ಜೀವನ ಇಷ್ಟಪಡುವ ಇವರು, ಶ್ರಮ ಜೀವಿಗಳೂ ಹೌದು.
ಸಿಂಹ ರಾಶಿ: ಸಿಂಹ ರಾಶಿಯವರದ್ದು ಸದಾ ಕಾಾಲ ಎಲ್ಲದರಲ್ಲೂ ತಾವೇ ಮುಂದಿರಬೇಕು ಎನ್ನುವ ಗುಣ. ಇದೇ ಗುಣ ಅವರನ್ನು ನಾಯಕತ್ವದ ಪಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಇವರು ಶ್ರಮ ಜೀವಿಗಳಾದ ಕಾರಣ, ಲಕ್ಷ್ಮೀ ದೇವಿಯ ಕೃಪೆ ಸದಾ ಇವರ ಮೇಲಿರುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಶುಕ್ರನ ಕೃಪೆ ಹೆಚ್ಚು. ಹಾಗಾಗಿ ಇವರು ಲಕ್ಷ್ಮೀ ಕೃಪೆ ಪಡೆದೇ ಹುಟ್ಟಿರುತ್ತಾರೆ. ಅಲ್ಲದೇ, ಮಂಗಳನ ಪ್ರಭಾವವೂ ಜೋರಾಗಿಯೇ ಇರುವುದರಿಂದ, ಐಷಾರಾಮಿ ಜೀವನ ಅಂದ್ರೆ ಹೆಚ್ಚು ಇಷ್ಟ. ಇವರು ಪರ್ಸ್‌ನಲ್ಲಿ ದುಡ್ಡಿರಲಿ ಬಿಡಲಿ, ಇರುವ ದುಡ್ಡಿನಲ್ಲೇ ಜೀವನ ಎಂಜಾಯ್ ಮಾಡಿಬಿಡಬೇಕು ಎಂದು ಬಯಸುವವರು. ಜವಾಬ್ದಾರಿ ಅನ್ನೋದು ಒಂದಿದ್ರೆ, ಈ ರಾಶಿಯವರ ಜೀವನ ಸುಲಭವಾಗಿರುತ್ತದೆ.
ಧನು ರಾಶಿ: ಧನು ರಾಶಿಯವರು ಜಾಣರು. ಇವರಿಗೆ ಎಲ್ಲದರ ಬಗ್ಗೆಯೂ ಜ್ಞಾನವಿರುತ್ತದೆ. ಯಾವುದರ ಬಗ್ಗೆ ಇವರಿಗೆ ಗೊತ್ತಿಲ್ಲವೆಂದರೆ, ಕೆಲ ದಿನಗಳಲ್ಲೇ ಅದನ್ನು ಹೇಗಾದರೂ ಮಾಡಿ ಕಲಿತುಕೊಳ್ಳುತ್ತಾರೆ. ಅಷ್ಟು ಜಾಣರು ಈ ಧನು ರಾಶಿಯವರು. ಅಲ್ಲದೇ, ಲಕ್ಷ್ಮೀ ದೇವಿಯ ಕೃಪೆ ಕೂಡ ಇವರ ಮೇಲೆ ಸದಾಕಾಲ ಇರುತ್ತದೆ. ಹಾಗಾಗಿ ಇವರೊಂಥರಾ ಚಿನ್ನದ ಸ್ಪೂನ್ ಹಿಡಿದು ಹುಟ್ಟಿದವರು ಅಂತಾನೇ ಹೇಳಬಹುದು.