Beauty Tips: ಇಂದಿನ ಕಾಲದ ಕೆಲವು ಹೆಣ್ಣು ಮಕ್ಕಳಿಗೆ ಮೇಕಪ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗತ್ತೆ. ಅದರಲ್ಲೂ ಲಿಪ್‌ಸ್ಟಿಕ್ ಹಚ್ಚೋದಂದ್ರೆ ಇನ್ನೂ ಖುಷಿ. ಆದರೆ ನೀವು ಲಿಪ್‌ಸ್ಟಿಕ್ ಹಚ್ಚೋದನ್ನ ಅವೈಡ್ ಮಾಡ್ಲಿಲ್ಲಾ, ಅಥವಾ ಲಿಪ್‌ಸ್ಟಿಕ್ ಹಚ್ಚೋಕ್ಕೂ ಮುನ್ನ ಯಾವ ಕೇರ್ ತೆಗೆದುಕೊಳ್ಳಬೇಕೋ, ಅದನ್ನು ತೆಗೆದುಕೊಳ್ಳದಿದ್ದಲ್ಲಿ, ನಿಮ್ಮ ಸೌಂದರ್ಯವನ್ನೇ ನೀವು ಹಾಳು ಮಾಡಿಕೊಳ್ಳುತ್ತೀರಿ. ಹಾಗಾದ್ರೆ ಲಿಪ್ ಕೇರ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಕೆಲವರು ಬಳಸುವ ಲಿಪ್‌ಸ್ಟಿಕ್‌ನಿಂದ, ತುಟಿಗೆ ಗಾಯವಾಗುತ್ತದೆ. ತುಟಿ ಒಣಗುತ್ತದೆ. ಇಂಥವರು ವೈದ್ಯರ ಸಲಹೆ ಪಡೆದರೆ, ಅವರಿಗೆ ಲಿಪ್‌ಕೇರ್ ಕ್ರೀಮ್ ಕೊಡಲಾಗುತ್ತದೆ. ಇದನ್ನು ಬಳಸಿದ ಬಳಿಕ, ಲಿಪ್‌ಸ್ಟಿಕ್ ಬಳಸಿದರೆ, ನಿಮ್ಮ ಲಿಪ್ಸ್ ಆರೋಗ್ಯವಾಗಿರುತ್ತದೆ. ಆದರೆ ನೀವು ಯಾವಾಗಲಾದರೂ ಒಮ್ಮೆ ಲಿಪ್‌ಸ್ಟಿಕ್ ಬಳಸಿದರೆ ನಿಮ್ಮ ಲಿಪ್ ಚೆನ್ನಾಗಿರುತ್ತದೆ. ಕೆಲವರು ದಿನಾಲೂ ಲಿಪ್‌ಸ್ಟಿಕ್ ಬಳಸುತ್ತಾರೆ. ಅಂಥವರ ತುಟಿಯ ಆರೋಗ್ಯ ಬೇಗ ಹಾಳಾಗುತ್ತದೆ.
ಅಲ್ಲದೇ, ಕೆಲವರು ಇಡೀ ದಿನ ಲಿಪ್‌ಸ್ಟಿಕ್ ಹಾಕುತ್ತಾರೆ. ರಾತ್ರಿ ಮಲಗುವಾಗ ಅದನ್ನು ಕ್ಲೀನ್ ಕೂಡ ಮಾಡುವುದಿಲ್ಲ. ಇಂಥವರಿಗೆ ಚರ್ಮರೋಗ ಬರುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಲಿಪ್‌ಸ್ಟಿಕ್ ಮಿತವಾಗಿ ಬಳಸಬೇಕು. ಲಿಪ್ ಕೇರ್ ಹೇಗೆ ಮಾಡಬೇಕು ಅನ್ನುವ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಈ ವೀಡಿಯೋ ನೋಡಿ..