Friday, July 4, 2025

Latest Posts

ಜೊತೆಗಿರುವವರು ಎಂಥ ವ್ಯಕ್ತಿಗಳೆಂದು ತಿಳಿಯುವುದು ಹೇಗೆ..?

- Advertisement -

Spiritual Story: ಮನುಷ್ಯ ಎಂದ ಮೇಲೆ ಅವನಿಗೆ ಹಲವಾರು ಜನ ಪರಿಚಿತರಾಗುತ್ತಾರೆ. ಕೆಲವರು ಜೊತೆಯಲ್ಲೇ ಉಳಿಯುತ್ತಾರೆ. ಇನ್ನು ಕೆಲವರು ದೂರವಾಗುತ್ತಾರೆ. ಆದರೆ ಅದರಲ್ಲಿ ಕೆಲವರು ನಮಗೆ ಮೋಸ ಮಾಡಿರುತ್ತಾರೆ. ಹಾಗಾದ್ರೆ ನಮ್ಮ ಜೊತೆಗಿರುವವರು ಎಂಥ ವ್ಯಕ್ತಿಗಳೆಂದು ತಿಳಿಯುವುದು ಹೇಗೆ ಅಂತಾ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ನೀವು ಯಾರದ್ದಾದರೂ ಸ್ನೇಹ ಮಾಡಿದಾಗ ಗಮನಿಸಬೇಕಾದ ಮೊದಲ ಅಂಶವೆಂದರೆ, ಅವರ ಬುದ್ಧಿ ಹೇಗಿದೆ ಎಂದು ತಿಳಿದುಕೊಳ್ಳಬೇಕು. ಅವರು ಇನ್ನೊಬ್ಬರ ಬಗ್ಗೆ ನಿಮ್ಮ ಬಳಿ ಕೆಟ್ಟದಾಗಿ ಮಾತನಾಡಿದರೆ, ನಿಮ್ಮ ಬಗ್ಗೆಯೂ ಇನ್ನೊಬ್ಬರ ಬಳಿ ಕೆಟ್ಟದಾಗಿ ಮಾತನಾಡುತ್ತಾರೆಂದು ಅರ್ಥ. ಹಾಗಾಗಿ ಅಂಥವರ ಸಹವಾಸ ಮಾಡಿದರೆ, ನಿಮಗೇ ತೊಂದರೆ.

ಇನ್ನು ಅವರಿಗೆ ಯಾವುದೇ ದುಷ್ಟ ಚಟವಿದ್ದಲ್ಲಿ, ಅಂಥವರ ಸಹವಾಸ ತಕ್ಷಣ ಬಿಟ್ಟುಬಿಡಿ. ಇಲ್ಲದಿದ್ದಲ್ಲಿ, ನಿಮಗೂ ಅವರು ಕೆಟ್ಟಚಟ ಹಿಡಿಸುತ್ತಾರೆ. ಹಾಗಾಗಿಯೇ ಹಿರಿಯರು ಸಂಗತಿ ಸಂಗದೋಷ ಎಂದಿರುವುದು. ಇಂಥ ಚಟಗಳೇ ಸಾಲದ ಶೂಲಕ್ಕೆ ಸಿಕ್ಕಿಸುತ್ತದೆ. ಹಾಗಾಗಿ ಕೆಟ್ಟ ಚಟ ಇರುವ ಜನಗಳಿಂದ ದೂರವಿರಿ. ಚಟವೆಂದರೆ, ಬರೀ ಕುಡಿತ, ಧೂಮಪಾನವಲ್ಲ. ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಚಾಡಿ ಹೇಳುವುದು, ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವುದು ಕೂಡ ಚಟವಿದ್ದಂತೆ. ಇಂಥ ವ್ಯಕ್ತಿಗಳು ಎಂದಿಗೂ ಉದ್ಧಾರವಾಗುವುದಿಲ್ಲ.

ಇನ್ನು ನೀವು ಸ್ನೇಹ ಮಾಡುವ ವ್ಯಕ್ತಿಯ ಗುಣ ಹೇಗಿರಬೇಕು ಎಂದರೆ, ಅವರು ಇದ್ದ ಸತ್ಯವನ್ನು ಇದ್ದಹಾಗೆ ಮುಖಕ್ಕೆ ಹೊಡೆದ ಹಾಗೆ ಹೇಳುವಂತಿರಬೇಕು. ನೀನು ಮಾಡುತ್ತಿರುವ ಕೆಲಸ ತಪ್ಪು, ನೀನು ಸುಂದರವಾಗಿ ಕಾಣುತ್ತಿಲ್ಲ. ನಿನ್ನಲ್ಲಿ ಈ ಕೊರತೆ ಇದೆ ಎಂದು ಹೇಳಬೇಕು. ನಿಮಗೆ ಆ ಮಾತಿನಿಂದ ಬೇಸರವಾದರೂ, ಅದನ್ನು ನೀವು ತಿದ್ದಿಕೊಳ್ಳುವಂತಿರಬೇಕು. ಆದರೆ ನಿಮಗೆ ಬೇಸರವಾಗಲಿ ಅಂತಲೇ, ಸುಮ್ಮ ಸುಮ್ಮನೆ ಈ ರೀತಿ ಹೇಳುವವರೂ ಇದ್ದಾರೆ. ಆದರೆ ನೀವು ಇಂಥವರು ಮತ್ತು ನಿಮ್ಮ ಒಳ್ಳೆಯದನ್ನು ಬಯಸುವವರ ಮಧ್ಯೆ ಇರುವ ವ್ಯತ್ಯಾಸ ತಿಳಿಯಬೇಕಷ್ಟೇ.

ಹೊಸ್ತಿಲಿಗೆ ಹಿಂದೂಗಳು ಯಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ..?

ಇಂಥ ವ್ಯಕ್ತಿಗಳು ಎಷ್ಟು ದುಡಿದರೂ ಉದ್ಧಾರವಾಗಲು ಸಾಧ್ಯವಿಲ್ಲ..

ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..

- Advertisement -

Latest Posts

Don't Miss