- Advertisement -
ಕೆಲವರು ದೇವರಿಗೆ ಪ್ರತಿದಿನ ಪೂಜೆ ಮಾಡುತ್ತಾರೆ. ಭಕ್ತಿಯಿಂದ ಇರುತ್ತಾರೆ. ನಿಯತ್ತಾಗಿರುತ್ತಾರೆ. ಆದ್ರೆ ಅವರು ಅನುಕೂಲಸ್ಥರಾಗುವುದಿಲ್ಲ. ಕೆಲವರು ಆರೋಗ್ಯವಂತರಾಗಿರುವುದಿಲ್ಲ. ಇನ್ನು ಕೆಲವರು ಅಂದುಕೊಂಡ ಆಸೆ ನೆರವೇರಿಸಿಕೊಳ್ಳಲಾಗುವುದಿಲ್ಲ. ಆಗ ನಾನು ದೇವರಲ್ಲಿ ಪ್ರತಿದಿನ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇನೆ. ಆದ್ರೂ ಕೂಡ ದೇವರಿಗೆ ನನ್ನ ಕಷ್ಟ ಗೊತ್ತಾಗುತ್ತಲೇ ಇಲ್ಲವೆಂದು ಕೊರಗುತ್ತಾರೆ. ಆದ್ರೆ ನಿಮ್ಮಲ್ಲಿ ಕೆಲ ಲಕ್ಷಣಗಳು ಕಂಡು ಬಂದಲ್ಲಿ, ನಿಮಗೆ ದೇವರು ಒಲಿದಿದ್ದಾನೆ ಎಂದರ್ಥ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
- ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾಗುವುದು. ಹೌದು ಓದುಗರೇ ನಿಮ್ಮ ಮೇಲೆ ದೇವರ ದಯೆಯಿದೆ ಅಂತಾದಲ್ಲಿ ನಿಮ್ಮನ್ನು ಯಾರೂ ಎಬ್ಬಿಸದಿದ್ದರೂ, ನಿಮಗೆ ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲೇ ಎಚ್ಚರವಾಗುತ್ತದೆ. ಬ್ರಾಹ್ಮಿ ಮುಹೂರ್ತವೆಂದರೆ 3ಗಂಟೆಯ ಬಳಿಕ ಮತ್ತು 4 ಗಂಟೆಯ ಒಳಗೆ. ಈ ಸಮಯದಲ್ಲಿ ಎಚ್ಚರಾದರೆ, ಎದ್ದು ಸ್ನಾನ ಪೂಜೆ ಮಾಡಿ, ನಿಮ್ಮ ಕೆಲಸವನ್ನು ಮುಂದುವರೆಸಿ. ಎಲ್ಲ ಒಳ್ಳೆಯದಾಗುತ್ತದೆ.
- ನಿಮ್ಮ ಕನಸಿನಲ್ಲಿ ಪದೇ ಪದೇ ದೇವರು ಕಾಣಿಸುವುದು. ದೇವಸ್ಥಾನ ಕಾಣಿಸುವುದು. ಹೀಗೆಲ್ಲಾ ಆದಲ್ಲಿ ನಿಮ್ಮ ಮೇಲೆ ದೇವರ ದಯೆ ಇದೆ ಎಂದರ್ಥ. ಹೀಗಾದಾಗ ನೀವು ಹತ್ತಿರದ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡುವುದು ಉತ್ತಮ.
- ಮೂರನೇಯದಾಗಿ ನಿಮಗೆ ನಿಮ್ಮ ಸುತ್ತಮುತ್ತಲ ವಾತಾವರಣ ಸುಗಂಧಮಯವಾಗಿ, ಸಕರಾತ್ಮಕ ಯೋಚನೆಯಿಂದ ಕೂಡಿದ್ದರೆ, ನಿಮ್ಮ ಲಕ್ ಖುಲಾಯಿಸಲಿದೆ ಎಂದರ್ಥ. ಹಾಗಾಗಿ ಹಿರಿಯರು ಮನೆ ಮತ್ತು ನಾವು ಕೆಲಸ ಮಾಡುವ ಜಾಗ ಯಾವಾಗಲೂ ಸ್ವಚ್ಛವಾಗಿಡಬೇಕು ಅನ್ನೋದು.
- ಇನ್ನು ನಾಲ್ಕನೇಯದು ನೀವು ಅಂದುಕೊಳ್ಳದೇ, ಬಯಸದೇ ನಿಮಗೆ ಲಾಭವಾಗುವುದು. ಹಾಗಾಗಿ ಯಾವುದಕ್ಕೂ ಹೆಚ್ಚು ಆಸೆ ಪಡಬೇಡಿ. ದೇವರು ನಿಮಗೆ ಏನೇನು ಕೊಡಬೇಕು ಎಂದು ಆಲೋಚಿಸಿರುವನೇ ಅದನ್ನೇ ನೀಡುತ್ತಾನೆ.
- ನೀವು ದೇವರೊಂದಿಗೆ ಮಾತನಾಡುತ್ತಿರುವಂತೆ ಕನಸು ಬಿದ್ದರೆ, ಅಥವಾ ನಿಮ್ಮಿಷ್ಟ ದೈವ ನಿಮ್ಮ ಕನಸ್ಸಿನಲ್ಲಿ ಬಂದು ನಿಮಗೆ ದರ್ಶನ ನೀಡುತ್‌ತಿದ್ದರೆ, ಅಥವಾ ನೀವು ಕನಸ್ಸಿನಲ್ಲಿ ಹಾರಾಡುವ ರೀತಿ ಕನಸ್ಸು ಕಂಡರೆ, ಹೀಗೆಲ್ಲವಾದಲ್ಲಿ ನಿಮಗೆ ಬಹುಬೇಗ ಅದೃಷ್ಟ ಖುಲಾಯಿಸಲಿದೆ ಎಂದರ್ಥ.
- Advertisement -