Health Tips: ವೈದ್ಯೆ, ಆಹಾರ ತಜ್ಞೆಯಾದ ಡಾ.ಎಚ್.ಎಸ್.ಹೇಮಾ ಅವರು ಡ್ರೈಫ್ರೂಟ್ಸ್ ಮತ್ತು ನಟ್ಸ್ ಸೇವನೆ ಬಗ್ಗೆ ವಿವರಿಸಿದ್ದು, ಡ್ರೈಫ್ರೂಟ್ಸ್ ಮತ್ತು ನಟ್ಸ್ ನಮ್ಮ ಆರೋಗ್ಯಕ್ಕೆ ಉತ್ತಮವಾ, ಅಲ್ಲವಾ..? ಇದರ ಸೇವನೆಯಿಂದ ನಮಗಾಗುವ ಲಾಭ ಮತ್ತು ನಷ್ಟವೇನು ಅಂತಾ ತಿಳಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಒಣದ್ರಾಕ್ಷಿ, ಅಂಜೂರ, ಖರ್ಜೂರದ ಸೇವನೆಯಿಂದ ನಮ್ಮ ದೇಹಕ್ಕೆ ಕಬ್ಬಿಣದ ಅಂಶ ಸಿಗುತ್ತದೆ. ಆದರೆ ಇವುಗಳನ್ನು ನಾವು ಲಿಮಿಟಿನಲ್ಲಿ ತಿನ್ನಬೇಕು. ನೀರಿನಲ್ಲಿ ನೆನೆಸಿ ತಿಂದರೂ ಆರೋಗ್ಯಕ್ಕೆ ಇದು ಉತ್ತಮವಾಗಿರುತ್ತದೆ. ಇನ್ನು ಬಾದಾಮ್, ಅಖ್ರೋಟ್, ಗೋಡಂಬಿ ಇವುಗಳೆಲ್ಲ ಬೆಳೆಯುವ ಮಕ್ಕಳಿಗೆ ಉತ್ತಮ. ಇದೆಲ್ಲ ಪ್ರೋಟಿನ್ ಭರಿತವಾದ ನಟ್ಸ್. ಇದರ ಸೇವನೆಯಿಂದ ನಮ್ಮ ದೇಹಕ್ಕೆ ಕೊಬ್ಬಿನಂಶದ ಜೊತೆಗೆ ಕ್ಯಾಲರಿ ಕೂಡ ಸಿಗುತ್ತದೆ. ಹಾಗಾಗಿ ಇದನ್ನು ಲಿಮಿಟಿನಲ್ಲ ಸೇವಿಸಬೇಕು. ಇಲ್ಲವಾದಲ್ಲಿ, ನಮ್ಮ ದೇಹದ ತೂಕವನ್ನು ಇದು ಹೆಚ್ಚಿಸುತ್ತದೆ.
ಹಾಗಾಗಿ ಮೈಬಗ್ಗಿಸಿ ದುಡಿಯುವವರು, ಹೆಚ್ಚು ಓಡಾಡುವವರು ಇಂಥ ನಟ್ಸ್ ತಿಂದರೆ ಉತ್ತಮ. ಆದರೆ ಒಂದೇ ಕಡೆ ಕುಳಿತು ಕೆಲಸ ಮಾಡುವವರು, ಕೆಲಸ ಮಾಡದೇ ಸುಮ್ಮನೆ ಕುಳಿತುಕೊಳ್ಳುವವರು ಪಿಸ್ತಾ, ಗೋಡಂಬಿ, ಬಾದಾಮಿ, ಅಖ್ರೋಟ್‌ನಂಥ ನಟ್ಸ್ ಸೇವಿಸಿದ್ದಲ್ಲಿ, ಅವರ ದೇಹದ ತೂಕ ಇನ್ನೂ ಹೆಚ್ಚುತ್ತದೆ. ಇನ್ನು ಹಿರಿಯರಿಗೆ, ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಅಂಜೂರ ,ಖರ್ಜೂರ, ದ್ರಾಕ್ಷಿಯಂಥ ಡ್ರೈಫ್ರೂಟ್ಸ್ ತುಂಬಾ ಒಳ್ಳೆಯದು. ಅಲ್ಲದೇ, ನಿಶ್ಶಕ್ತಿಯಿಂದ ಬಳಲುವವರು, ಡ್ರೈಫ್ರೂಟ್ಸ್ ತಿನ್ನುವುದು ಉತ್ತಮ. ಈ ಬಗ್ಗೆ ವೈದ್ಯರು ಇನ್ನಷ್ಟು ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯಲು ವೀಡಿಯೋ ನೋಡಿ..




