Thursday, December 12, 2024

Latest Posts

ಗಂಟುನೋವುಗಳಿಗೆ ಮಸಾಜ್ ಮಾಡಿಸುವುದು ಎಷ್ಟು ಸರಿ!?

- Advertisement -

Health Tips: ಗಂಟು ನೋವು, ಮೈ ಕೈ ನೋವು ಅನ್ನೋದು ಇಂದಿನ ಕಾಲದಲ್ಲಿ ಎಲ್ಲರಿಗೂ ಕಾಮನ್ ಆಗಿದೆ. ವಯಸ್ಸು 20 ದಾಟದವರಿಗೂ ಕೈ ಕಾಲು ಗಂಟು ನೋವು ಶುರುವಾಗಿದೆ. ಈ ಬಗ್ಗೆ ವೈದ್.ರು ವಿವರಿಸಿದ್ದು, ಗಂಟು ನೋವುಗಳಿಗೆ ಮಸಾಜ್ ಮಾಡುವುದು ಸರಿನಾ..? ತಪ್ಪಾ ಅಂತಾ ಹೇಳಿದ್ದಾರೆ ನೋಡಿ..

ಕೆಲವರು ಗಂಟು ನಾವು, ಇಳುಕಿದ ನೋವು ಇದ್ದಲ್ಲಿ, ಉಳುಕು ತೆಗೆಯುವವರ ಬಳಿ ಹೋಗುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು ಅಂತಾರೆ ವೈದ್ಯರು. ಯಾವುದೇ ಗಂಟು ನೋವು, ಕೈ ಕಾಲು ನೋವಿನ ಸಮಸ್ಯೆ ಇದ್ದರೂ,. ನೀವು ವೈಜ್ಞಾನಿಕವಾಗಿ ಚಿಕಿತ್ಸೆ ಪಡೆಯುವುದು ಮುಖ್ಯ. ಇಲ್ಲವಾದಲ್ಲಿ, ಕೆಲ ಸಮಯ ಉಳುಕಿನ ನೋವು ಹೋದರೂ, ನೋವು ಹಾಗೇ ಉಳಿದುಕೊಳ್ಳುವ ಸಂಭವವಿರುತ್ತದೆ. ಹಾಗಾಗಿ ವೈದ್ಯರ ಬಳಿಯೇ ಹೋಗಿ., ಚಿಕಿತ್ಸೆ ಪಡೆಯುವುದು ಉತ್ತಮ.

ಏಕೆಂದರೆ, ವೈದ್ಯರ ಬಳಿ ಹೋದಾಗ, ಅದು ಯಾವ ರೀತಿಯ ಕಾಲು ನೋವು ಎಂದು ತಿಳಿದು, ಚಿಕಿತ್ಸೆ ಕೊಟ್ಟು, ಕಾಲು ನೋವು ಕಡಿಮೆ ಮಾಡಬಹುದು. ಸ್ವಲ್ಪ ನೋವಿದ್ದಾಗ, ಬ್ಯಾಂಡೇಜ್ ಹಾಕಿ, ಹೆಚ್ಚು ನೋವಿದ್ದರೆ, ಪ್ಲಾಸ್ಟರ್ ಹಾಕಿ, ಹೀಗೆ ಬೇರೆ ಬೇರೆ ವಿಧದಲ್ಲಿ ವೈದ್ಯರು ಚಿಕಿತ್ಸೆ ಕೊಡುತ್ತಾರೆ.

ಇನ್ನು ಗಂಟು ನೋವು ಇದ್ದಾಗ, ಮಸಾಜ್ ಮಾಡುವುದು, ಮನೆಯಲ್ಲೇ ಚಿಕಿತ್ಸೆ ಪಡೆಯುವುದೆಲ್ಲ ಮಾಡಿದರೆ, ಅದರಿಂದ ನೋವು ಇನ್ನೂ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ಅದೇ ಗಂಟು ನೋವು ಜೀವ ಹಿಂಡುವ ರೀತಿ ನೋವು ಕೊಡುತ್ತದೆ. ಹಾಗಾಗಿ ನೋವನ್ನು ಬುಡ ಸಮೇತ ಕಿತ್ತು ಹಾಕಲು, ಮಸಾಜ್ ಮಾಡುವ ಬದಲು, ವೈದ್ಯರಲ್ಲಿ ಚಿಕಿತ್ಸೆ ಪಡೆಯಿರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss