Health Tips: ಒಂದು ಮಗು ಬೆಳೆದು ದೊಡ್ಡದಾಗಿ, ಆರೋಗ್ಯಕರ ಭವಿಷ್ಯ ಹೊಂದಬೇಕು. ಗಟ್ಟಿಮುಟ್ಟಾಗಿರಬೇಕು. ಅವನ ಮಕ್ಕಳೂ ಆರೋಗ್ಯವಾಗಿರಬೇಕು ಅಂದ್ರೆ, ಆ ಮಗು ಶಿಶುವಾಗಿದ್ದಾಗ, ಅದರ ಆರೈಕೆ ಅತ್ಯುತ್ತಮವಾಗಿರಬೇಕು. ಜೊತೆ ತಾಯಿಯಾದವಳು 2 ವರ್ಷ ತುಂಬುವವರೆಗೂ ತನ್ನ ಎದೆಹಾಲನ್ನು ಕುಡಿಸಿರಬೇಕು. ಹಾಗಾಗಿ ಇಂದು ವೈದ್ಯರು ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ ಅಂತಾ ವಿವರಿಸಿದ್ದಾರೆ ನೋಡಿ.
ಎದೆ ಹಾಲು ಅಮೃತಕ್ಕೆ ಸಮಾನ ಎಂದು ಹಿರಿಯರೇ ಹೇಳಿದ್ದಾರೆ. ಯಾಕಂದ್ರೆ ತಾಯಿ ಸರಿಯಾದ ಪ್ರಮಾಣದಲ್ಲಿ ಮಗುವಿಗೆ ಎದೆ ಹಾಲು ಕೊಟ್ಟಲ್ಲಿ, ಮಗು ಆರೋಗ್ಯವಾಗಿ ಇರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೇ, ತಾಯಿಯ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಆದರೆ ಹಿಂದಿನ ಕಾಲದ ಹಲವು ಹೆಣ್ಣು ಮಕ್ಕಳು, ತಾವು ಮಗುವಿಗೆ ಎದೆಹಾಲು ಕುಡಿಸಿದರೆ, ಎಲ್ಲಿ ತಮ್ಮ ಸೌಂದರ್‌ಯ ಹಾಳಾಗುತ್ತದೆಯೋ ಅಂತಾ, ಮಗುವಿಗೆ ಬರೀ ಬಾಟಲಿ ಹಾಲನ್ನೇ ಕುಡಿಸುತ್ತಾರೆ. ಇದರಿಂದ ಮಗುವಿನ ಆರೋಗ್ಯ ಹಾಳಾಗುವುದರ ಜೊತೆಗೆ, ತಾಯಿಯ ಆರೋಗ್ಯವೂ ಹದಗೆಡುತ್ತದೆ.
ಆದರೆ ವೈದ್ಯರು ಹೇಳುವ ಪ್ರಕಾರ, ಹಾಲುಣಿಸದೇ ಇರುವ ತಾಯಿಂದರ ಸಂಖ್ಯೆ ವಿದೇಶಗಳಿಗಿಂತ, ನಮ್ಮ ದೇಶದಲ್ಲಿ ಕಡಿಮೆ ಇದೆ. ಭಾರತೀಯ ತಾಯಂದಿರು ಮಗುವನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಆದರೆ ಉಳಿದವರು ಆ ತಾಯಿಗೆ ಸಪೋರ್ಟ್ ಮಾಡಬೇಕು. ಆಕೆಯ ಆರೋಗ್ಯ ಚೆನ್ನಾಗಿರಲು ಮನೆಯಲ್ಲಿರರುವವರು ಕೂಡ, ಸಾಥ್ ನೀಡಬೇಕು ಅಂತಾರೆ ವೈದ್ಯರು.
ಮನೆಯಲ್ಲಿರುವ ಹಿರಿಯರು ಆ ತಾಯಿಗೆ ಆರೋಗ್ಯಕರ ಟಿಪ್ಸ್ ಕೊಡಬೇಕು. ಯಾವುದು ಮಾಡಬಾದು ಅಥವಾ ಯಾವುದು ಮಾಡಬೇಕು ಅಂತಾ ವಿವರಿಸಿ ಹೇಳಬೇಕು. ಆಗ ಅವರಿಗೆ ಹಿರಿಯರ ಮಾತಿನ ಅರಿವಾಗುತ್ತದೆ. ಇದರಿಂದ ತಾಯಿ ಮಗು ಇಬ್ಬರ ಆರೋಗ್ಯವೂ ಉತ್ತಮವಾಗಿರುತ್ತದೆ.