ಮನುಷ್ಯನ ಆರೋಗ್ಯಕ್ಕೆ ನೀರು ಎಷ್ಟು ಮುಖ್ಯ..?

Health Tips: ಮನುಷ್ಯ ಯಾವ ರೀತಿ, ಎಷ್ಟು ನೀರು ಕುಡಿಯಬೇಕು..? ಹೇಗೆ ನೀರು ಕುಡಿಯಬೇಕು..? ಮನುಷ್ಯನ ದೇಹಕ್ಕೆ ನೀರು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ವೈದ್ಯರಾದ ಡಾಕ್ಟರ್ ಆಂಜೀನಪ್ಪ ಅವರು, ನೀರಿನ ಸೇವನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೂರನೇ ಯುದ್ಧ ನಡೆದರೆ ಅದು ನೀರಿಗಾಗಿ ಅನ್ನೋ ಮಾತಿದೆ. ಏಕೆಂದರೆ ನೀರಿಗೆ ಅಷ್ಟು ಮಹತ್ವವಿದೆ ಅಂತಾರೆ ವೈದ್ಯರು. ನಮ್ಮ ದೇಹದಲ್ಲಿ ಶೇ.70ರಷ್ಟು ನೀರಿರುತ್ತದೆ. ಹಾಗಾಗಿ ದಿನಕ್ಕೆ 2 ಲೀಟರ್ ನೀರನ್ನ ಕುಡಿಯಬೇಕು. ಅಂದ್ರೆ 12 ಗ್ಲಾಸ್ ನೀರು ಕುಡಿಯಬೇಕು. ಒಂದು ದಿನಕ್ಕೆ ನಮ್ಮ ದೇಹದಲ್ಲಿ 8ರಿಂದ 10 ಲೀಟರ್ ಫ್ಲೂಯೇಡ್ ಉತ್ಪತ್ತಿಯಾಗುತ್ತದೆ. ಇವೆಲ್ಲವೂ ಸರಿಯಾಗಿರಬೇಕು ಅಂದ್ರೆ, ನಾವು ದಿನಕ್ಕೆ ಮಿನಿಮಮ್ 2 ಲೀಟರ್ ನೀರು ಕುಡಿಯಬೇಕು.

ಕಿಡ್ನಿ ಫೆಲ್ಯೂವರ್ ಸೇರಿ ಇತರ ಖಾಯಿಲೆ ಇರುವವರಿಗೆ ಮಾತ್ರ ವೈದ್ಯರು, ಹೆಚ್ಚು ನೀರು ಕುಡಿಯಬಾರದು ಎಂದು ಸಲಹೆ ನೀಡುತ್ತಾರೆ. ಅಂಥವರನ್ನು ಬಿಟ್ಟು ಕುಡಿದ ನೀರು ಸರಿಯಾಗಿ ಜೀರ್ಣವಾಗುತ್ತದೆ ಎನ್ನುವವರು ದಿನಕ್ಕೆ ಎಷ್ಟು ಬೇಕಾದ್ರೂ ನೀರು ಕುಡಿಯಬಹುದು. ಅದರಲ್ಲೂ ಮಕ್ಕಳು ಹೆಚ್ಚು ನೀರು ಕುಡಿಯಬೇಕು. ಆದರೆ ಕೆಲವು ಶಾಲೆಗಳಲ್ಲಿ ಪದೇ ಪದೇ ಯೂರಿನ್ ಪಾಸ್ ಮಾಡಲು ಬಿಡದ ಕಾರಣ, ಮಕ್ಕಳು ಹೆಚ್ಚು ನೀರು ಕುಡಿಯಲು ಹಿಂಜರಿಯುತ್ತಾರೆ.

ಆದರೆ ಶಿಕ್ಷಕರು ಕೂಡ ಮಕ್ಕಳ ಆರೋಗ್ಯದ ಕಡೆ ಗಮನ ಕೊಟ್ಟು, ಮಕ್ಕಳು ಸರಿಯಾಗಿ ನೀರು ಕುಡಿಯುವಂತೆ ನೋಡಿಕೊಳ್ಳಬೇಕು ಮತ್ತು ಅವರಿಗೆ ಯೂರಿನ್ ಪಾಸ್ ಮಾಡಲು ಅವಕಾಶ ಕೊಡಬೇಕು. ಇಲ್ಲವಾದಲ್ಲಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ನೀರಿನ ಸೇವನೆ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

ಪಟಾಕಿಯಿಂದಾಗುವ ದುಷ್ಪರಿಣಾಗಳು ಏನೇನು..?

ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..

ಪಟಾಕಿಯಿಂದ ಈ ಸಮಸ್ಯೆ ಬರುತ್ತದೆ ಎಚ್ಚರ..

About The Author