Friday, October 18, 2024

Latest Posts

ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು..?

- Advertisement -

Health Tips: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ. ಆದರೆ ನಾವು ಅತೀಯಾಗಿ ಬ್ರಶ್ ಮಾಡಿದರೆ, ಆರೋಗ್ಯವಾಗಿರಬೇಕಾದ ನಮ್ಮ ಹಲ್ಲು, ಹಾಳಾಗುತ್ತದೆ.ಅದರಲ್ಲೂ ನಾವು ಬಳಸುವ ಬ್ರಶ್‌ನ್ನು ಪದೇ ಪದೇ ಚೇಂಜ್ ಮಾಡುತ್ತಲಿರಬೇಕು. ಹಾಗಾದ್ರೆ ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು ಅಂತಾ ವೈದ್ಯರೆ ವಿವರಿಸಿದ್ದಾರೆ ನೋಡಿ..

ಈ ಬಗ್ಗೆ ವೈದ್ಯರು ಹೇಳುವುದೇನೆಂದರೆ, ಪ್ರತಿದಿನ ಎರಡು ಬಾರಿ ಹಲ್ಲುಜ್ಜಲೇಬೇಕು. ಬೆಳಿಗ್ಗೆ ಮತ್ತು ರಾತ್ರಿ. ಸಾಫ್ಟ್ ಬ್ರಿಸಲ್ಸ್ ಇರುವ ಬ್ರಶ್‌ಗಳನ್ನು ಬಳಸುವುದು ಉತ್ತಮ. ಏಕೆಂದರೆ, ರಫ್ ಆಗಿರುವ ಬ್ರಿಸಲ್ಸ್ ಇರುವ ಬ್ರಶ್ ಬಳಕೆಯಿಂದ ವಸಡಿನಲ್ಲಿ ರಕ್ತ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಫ್ಟ್ ಬ್ರಿಸಲ್ಸ್ ಇರುವ ಬ್ರಶ್‌ ಬಳಸುವುದು ಒಳ್ಳೆಯದು.

ಇನ್ನು ಯಾಕೆ ಪ್ರತಿದಿನ್ ಎರಡು ಬಾರಿ ಬ್ರಶ್ ಮಾಡಬೇಕು ಅಂದ್ರೆ, ಕೆಲವರಿಗೆ ಹಲ್ಲುಗಳಲ್ಲಿ ಆಹಾರ ಸಿಕ್ಕಿ ಹಾಕಿಕೊಳ್ಳುತ್ತದೆ. ಅದು ಬಾಯಿ ಮುಕ್ಕಳಿಸಿದಾಗಲೂ ಹೋಗುವುದಿಲ್ಲ. ಅದು ಬೆಳಗ್ಗಿನವರೆಗೂ ಹಾಗೇ ಉಳಿದರೆ, ಇನ್‌ಫೆಕ್ಷನ್ ಆಗಿ, ಹಲ್ಲು ಹುಳುಕು ಹಿಡಿಯುತ್ತದೆ. ಹಾಗಾಗಿ ರಾತ್ರಿಯೇ ಬ್ರಶ್ ಮಾಡಿದರೆ, ನಿಮ್ಮ ಹಲ್ಲು ಬೇಗ ಹುಳುಕಾಗುವುದಿಲ್ಲ ಮತ್ತು ಉದುರುವುದಿಲ್ಲ.

ಇನ್ನು ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾವಣೆ ಮಾಡಿದರೆ ಸಾಕು ಅಂತಾರೆ ವೈದ್ಯರು. ಇನ್ನು ಬ್ರಶ್ ಬದಲಾವಣೆ ಮಾಡೋದು, ಎರಡು ಬಾರಿ ಬ್ರಶ್ ಮಾಡೋದಷ್ಟೇ ಮುಖ್ಯವಲ್ಲ. ಇದರೊಂದಿಗೆ ನಾವು ಯಾವ ರೀತಿ ಬ್ರಶ್ ಮಾಡುತ್ತೇವೆ ಎನ್ನುವುದೂ ಮುಖ್ಯ. ಏಕೆಂದರೆ, ನಾವು ಸರಿಯಾದ ರೀತಿಯಲ್ಲಿ ಬ್ರಶ್ ಮಾಡಿದಾಗಲೇ, ನಮ್ಮ ಹಲ್ಲು ಸ್ವಚ್ಛವಾಗಿರುತ್ತದೆ. ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss