Health Tips: ಪ್ರತೀ ಹೆಣ್ಣಿಗೂ ತಾನು ತಾಯಿಯಾದಾಗ ಆಗುವ ಖುಷಿ ಅಷ್ಟಿಷ್ಟಲ್ಲ. ತನ್ನ ಹೆಣ್ತನ ಪೂರೈಸುವ, ತಾಯ್ತನ ಕೊಡುವ ಮಗುವೊಂದು ಮಡಿಲಿಗೆ ಬರುತ್ತಿದೆ ಎಂದರೆ, ಅದು ಹೆಣ್ಣಿನ ಜೀವನ ದೊಡ್ಡ ಪುಣ್ಯವೇ ಸರಿ. ಆದರೆ ಇಂಥ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಅದರಲ್ಲೂ ಗರ್ಭಿಣಿಯಾದವಳು ಚೆನ್ನಾಗಿ ಆರೋಗ್ಯಕರ ಆಹಾರಗಳನ್ನು ತಿನ್ನಬೇಕು. ವಾಕಿಂಗ್, ಯೋಗವನ್ನು ಮಾಡಬೇಕು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆಂದು ತಿಳಿಯೋಣ ಬನ್ನಿ..
ಮಕ್ಕಳ ತಜ್ಞರಾದ ಡಾಕ್ಟರ್ ಸುರೇಂದ್ರ ಅವರು ಗರ್ಭಿಣಿಯರು ಯಾವ ರೀತಿಯ ವ್ಯಾಯಾಮ, ಯೋಗಾಸನ ಮಾಡಬೇಕು ಎಂದು ಹೇಳಿದ್ದಾರೆ. ಗರ್ಭಿಣಿಯರಿಗೆ ಕೆಲವು ಸಂದರ್ಭದಲ್ಲಿ ವೈದ್ಯರು, ಬೆಡ್ ರೆಸ್ಟ್ ಮಾಡಬೇಕು ಎಂದು ಹೇಳುತ್ತಾರೆ. ಆಗ ನೀವು ವೈದ್ಯರ ಸಲಹೆಯಂತೆ ಯೋಗ ಮಾಡಬೇಕು. ಇನ್ನು ಗರ್ಭಿಣಿಯರು ಹೆಚ್ಚು ಭಾರ ಎತ್ತಬಾರದು.
ಆದರೆ ನೀವು ಮನೆಗೆಲಸಗಳನ್ನು ಮಾಡಿದಾಗ, ಅದೇ ಒಂದು ವ್ಯಾಯಮವಾಗುತ್ತದೆ ಎನ್ನುತ್ತಾರೆ ವೈದ್ಯರು. ಪ್ರತಿದಿನ ಯೋಗಾ ಗುರುಗಳು ಹೇಳಿಕೊಟ್ಟಂತೆ ಯೋಗಾಸನ, ವ್ಯಾಯಾಮ, ವಾಕಿಂಗ್ ಮಾಡಿದರೆ, ಗರ್ಭಿಣಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..