Health Tips: ನೀವು ಶಕ್ತಿವಂತರಾಗಬೇಕು ಅಂದ್ರೆ, ನಿಮ್ಮ ದೇಹಕ್ಕೆ ಪ್ರೋಟೀನ್ ಅಗತ್ಯವಿದೆ ಅಂತಾ ಹೇಳೋದನ್ನ ನೀವು ಕೇಳಿರುತ್ತೀರಿ. ಹಾಗಾದ್ರೆ ಪ್ರೋಟೀನ್ ಅಂದ್ರೆ ಏನು..? ಇದರ ಸೇವನೆ ಹೇಗಿರಬೇಕು..? ದೇಹದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾದ್ರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ.
ನಮ್ಮ ದೇಹ ರಚನೆಯಾಗಿರುವುದೇ ಜೀವಕೋಶದಿಂದ. ಆ ಜೀವಕೋಶದಲ್ಲಿ ಇರುವುದೇ ಹೆಚ್ಚಿನ ಅಮೈನೋಆ್ಯಸಿಡ್‌ಗಳು, ಪ್ರೋಟೀನ್‌ಗಳು. ಹಾಗಾಗಿ ದೇಹ ಅಂದ್ರೆನೇ ಪ್ರೋಟೀನ್ ಎಂದು ನಾವು ತಿಳಿಯಬೇಕು. ಪ್ರೋಟೀನ್ ನಮ್ಮ ದೇಹಕ್ಕೆ ಯಾಕೆ ಬೇಕು ಅಂದ್ರೆ, ಪ್ರೋಟೀನ್ ವಿಶಿಷ್ಟವಾದ ಕಾರ್ಯ ನಿರ್ವಹಿಸುತ್ತದೆ.
ಅದೇನೆಂದರೆ, ನಮ್ಮ ದೇಹದಲ್ಲಿನ ಜೀವಕೋಶ ಬೆಳೆಸಿ, ನಮ್ಮ ದೇಹದ ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ. ಹಾಗಾಗಿ ಪುಟ್ಟ ಮಕ್ಕಳಿಗೆ ಹೆಚ್ಚು ಪ್ರೋಟೀನ್ ಯುಕ್ತ ಆಹಾರವನ್ನು ನೀಡಲಾಗುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಪ್ರೋಟೀನ್ ಸೇವನೆ ಎಂದಿಗೂ ಮಾಡಬಾರದು ಅಂತಾರೆ ವೈದ್ಯರು. ಏಕೆಂದರೆ, ನಾವು ಅತೀಯಾಗಿ ಸೇವಿಸುವ ಪ್ರೋಟೀನ್ ಕೊಬ್ಬಾಗಿ ಪರಿವರ್ತನೆಯಾಗುತ್ತದೆ.
ಇನ್ನು ಪುಟ್ಟ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು ಹೆಚ್ಚು ಪ್ರೋಟೀನ್ ತೆಗೆದುಕೊಳ್ಳುತ್ತಾರೆ. ಏಕೆಂದರೆ ಈ ಸಮಯದಲ್ಲಿ ಪ್ರೋಟೀನ್ ಅವಶ್ಯಕತೆ ತುಂಬಾ ಹೆಚ್ಚಾಗಿರುತ್ತದೆ. ಇನ್ನು ಪ್ರೋಟೀನ್ ಪೌಡರ್ ಸೇವನೆ ಮಾಡಿದರೆ, ಅದರಿಂದ ನಮ್ಮ ಮೂತ್ರಕೋಶದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ಜೀವಕ್ಕೆ ಅಪಾಯವಾಗಬಹುದು. ಹಾಗಾಗಿ ಯಾವುದೇ ಪ್ರೋಟೀನ್ ಪುಡಿ ಬಳಸಬೇಡಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..