Health Tips: ಹುಟ್ಟಿದ ಮಗುವಿನ ಆರೋಗ್ಯ ಕಾಳಜಿ ಎಷ್ಟು ಮುಖ್ಯವೋ, ಅಷ್ಟೇ ಬಾಣಂತಿಯ ಆರೋಗ್ಯವೂ ಮುಖ್ಯ. ಹಾಗಾಗಿ ಬಾಣಂತಿ ತಾಯಿಯ ಮನೆಯಲ್ಲಿರಬೇಕು ಅಂತಾ ಹೇಳೋದು. ಆಗ ಆಕೆ ತಾಯಿಯ ಬಳಿ, ಆಕೆಯ ಕಷ್ಟ, ಆರೋಗ್ಯ ಸಮಸ್ಯೆಗಳನ್ನು ಸರಿಯಾಗಿ ಹೇಳಿಕೊಳ್ಳುತ್ತಾಳೆ. ತನಗೆ ಬೇಕಾದ ಆರೋಗ್ಯಕರ ಪದಾರ್ಥ ಕೇಳಿ ತಿನ್ನುತ್ತಾಳೆ ಎಂದು ಹೇಳುತ್ತಾರೆ. ವೈದ್ಯೆಯಾದ ಸಹನಾ ದೇವದಾಸ್, ತಾಯಿಯ ದೈಹಿಕ ಆರೋಗ್ಯ ಹೇಗೆ ನೋಡಿಕೊಳ್ಳಬೇಕು ಅಂತಾ ವಿವರಿಸಿದ್ದಾರೆ.
ಬಾಣಂತಿಯಾದವಳು ದಿನಕ್ಕೆ ಒಮ್ಮೆ ಸ್ವಚ್ಛವಾಗಿ ಸ್ನಾನ ಮಾಡಿದರೆ ಸಾಕು. ಅದೇ ಅವಳ ದೈಹಿಕ ಆರೋಗ್ಯ ಕಾಪಾಡುತ್ತದೆ. ಆದರೆ ಕೆಲವರು ಪದೇ ಪದೇ ದೇಹವನ್ನು, ಸ್ತನವನ್ನು ಒರೆಸಿಕೊಳ್ಳುತ್ತಾರೆ. ಇದು ತಪ್ಪು ಅಂತಾರೆ ವೈದ್ಯರು. ಇದರಿಂದ ಸ್ಕಿನ್ ಡ್ರೈ ಆಗುತ್ತದೆ. ಹಾಗಾಗಿ ದಿನಕ್ಕೊಮ್ಮೆ ಸ್ನಾನ ಮಾಡಿಕೊಂಡರೆ ಸಾಕು. ಮತ್ತು ಆರೋಗ್ಯಕರ ಆಹಾರ, ನೀರಿನ ಸೇವನೆ ಮಾಡಿದರೆ ಸಾಕು ಅಂತಾರೆ ವೈದ್ಯರು.
ಮಗುವಿಗೆ ಸ್ತನಪಾನ ಮಾಡಿಸಿದ ಬಳಿಕ, ಸ್ತನವನ್ನು ಒರೆಸಿಕೊಳ್ಳಬೇಕು ಅಂತಿಲ್ಲ. ಇದರಿಂದ ಆ ಭಾಗ ಡ್ರೈ ಆಗಿ ರಕ್ತ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಸ್ತನಪಾನ ಮಾಡಿಸಿದರೆ ಸಾಕು. ಇದರಿಂದ ಮಗುವಿಗೆ ಯಾವುದೇ ಅಲರ್ಜಿಯಾಗುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




