Wednesday, September 17, 2025

Latest Posts

ಬಳಸಿದ ಪ್ಯಾಡನ್ನು ಯಾವ ರೀತಿಯಾಗಿ ಡಿಸ್ಪೋಸ್ ಮಾಡಬೇಕು..?

- Advertisement -

Health Tips: ಪ್ಯಾಡ್ ಬಳಸಿ ಕೆಲವರು ಅದನ್ನು ಹಾಗೆ ಬಿಸಾಕಿ ಬಿಡುತ್ತಾರೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಹಾಗಾಗಿ ವೈದ್ಯರು ನಾವು ಬಳಸಿದ ಪ್ಯಾಡನ್ನು ಯಾವ ರೀತಿ ಡಿಸ್ಪೋಸ್ ಮಾಡಬೇಕು ಎಂದು ವಿವರಿಸಿದ್ದಾರೆ ನೋಡಿ..

ಈ ಬಗ್ಗೆ ಡಾ. ಚಂದ್ರಿಕಾ ಆನಂದ್ ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಮನೆಯಲ್ಲೇ ಇರುವವರು ಬಟ್ಟೆ ಪ್ಯಾಡ್‌ಗಳನ್ನು ಬಳಸಬಹುದು. ಆದರೆ ಇದನ್ನು ಬಳಸಿದ ಬಳಿಕ ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತೊಳೆದು, ಅದನ್ನು ಬಿಸಿಲಿನಲ್ಲಿ ಒಣಗಿಸಿ, ಬಳಸಬೇಕು. ಹಾಗೆ ಮಾಡಿದಾಗ, ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ.

ಆದರೆ ಹೊರಗಿನಿಂತ ತರುವ ಪ್ಯಾಡ್‌ಗಳನ್ನು ನೀವು ಬಳಸಿದ ಬಳಿಕ, ಅದನ್ನು ಕೂಡ ನೀವು ತೊಳೆಯಬೇಕು, ಬಳಿಕ ಅದನ್ನು ಒಣಗಿಸಿ, ಸೇರಿಸಿ ಸುಟ್ಟು ಹಾಕುವುದು ಉತ್ತಮ ಅಂತಾರೆ ವೈದ್ಯರು. ಏಕೆಂದರೆ, ನೀವು ಆ ಪ್ಯಾಡ್‌ಗಳನ್ನು ಹಾಗೆ ಬಿಸಾಕಿದರೆ, ಅಥವಾ ಕಸ ತೆಗೆದುಕೊಳ್ಳಲು ಬರುವವರ ಬಳಿ ಕೊಟ್ಟರೆ, ಅವರು ಅದನ್ನು ತೆಗೆದುಕೊಂಡು ಹಾಕಿ ಒಂದು ಬದಿ ಜಮಾ ಮಾಡುತ್ತಾರೆ.

ಆಗ ಆ ಪ್ಯಾಡ್ ಮಣ್ಣಲ್ಲಿ ಹೋಗುತ್ತದೆ. ಅಥವಾ ಕಸದಲ್ಲೇ ಉಳಿಯುತ್ತದೆ. ಆಗ ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಏಕೆಂದರೆ, ಪ್ಯಾಡ್‌ಗಳು ಅಷ್ಟು ಈಸಿಯಾಗಿ ನಾಶವಾಗುವುದಿಲ್ಲ. ಅದರಲ್ಲಿ ಪ್ಲಾಸ್ಟಿಕ್ ಅಂಶವಿರುವ ಕಾರಣ, ಅದು ಹಲವು ವರ್ಷಗಳವರೆಗೂ ಹಾಗೇ ಇರುತ್ತದೆ. ಹಾಗಾಗಿ ಮನೆಯಲ್ಲೇ ಬಳಸಿದ ಪ್ಯಾಡ ತೊಳೆದು ಒಣಗಿಸಿ, ಸುಟ್ಟು ಹಾಕುವುದು ಒಳಿತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss