Beauty Tips: ನಿಮ್ಮ ಮುಖ ಚೆಂದವಾಗಿರಬೇಕು ಅಂದ್ರೆ, ನೀವು ಮನೆಯಲ್ಲೇ ಅದಕ್ಕೆ ಪರಿಹಾರ ಹುಡುಕಬೇಕು. ಚೆನ್ನಾಗಿ ಫೇಸ್‌ವಾಶ್ ಮಾಡಿ. ಸ್ಕ್ರಬಿಂಗ್ ಮಾಡಿ, ಮುಖಕ್ಕೆ ಹಬೆ ತೆಗೆದುಕೊಂಡು, ಬಳಿಕ ಫೇಸ್‌ಪ್ಯಾಕ್ ಹಾಕಬೇಕು. ಹೀಗೆ ಮಾಡಿದಾಗ, ನಿಮ್ಮ ಮುಖ ಫ್ರೆಶ್ ಆಗಿ ಕಾಣುತ್ತದೆ. ಹಾಗಾದ್ರೆ ಯಾಕೆ ಸ್ಕ್ರಬಿಂಗ್ ಮಾಡಬೇಕು..? ಸ್ಕ್ರಬಿಂಗ್ ಮಾಡುವಾಗ ಮನೆಯಲ್ಲಿರುವ ಯಾವ ವಸ್ತು ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ನೀವು ಕಿತ್ತಳೆ ಹಣ್ಣನ್ನು ಬಳಸಿ ಸ್ಕ್ರಬ್ ತಯಾರಿಸಬಹುದು. ಕಿತ್ತಳೆ ಹಣ್ಣಿನ ರಸ ತ್ವಚೆಗೆ ತುಂಬಾ ಆರೋಗ್ಯಕಾರಿಯಾಗಿದೆ. ಕಿತ್ತಳೆಹಣ್ಣನ್ನು ಸೇವಿಸಿದರೆ, ಹೇಗೆ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದೋ, ಅದೇ ರೀತಿ ಕಿತ್ತಳೆ ಹಣ್ಣಿನ ರಸವನ್ನು ಮುಖಕ್ಕೆ ಬಳಸುವುದರಿಂದ, ನಿಮ್ಮ ತ್ವಚೆ ಸುಂದರವಾಗಿ ಕಾಣುತ್ತದೆ. ಒಂದು ಸ್ಪೂನ್ ಕಿತ್ತಳೆ ರಸ, ಸಕ್ಕರೆ, ತೆಂಗಿನಎಣ್ಣೆ, ಜೇನುತುಪ್ಪ ಇಷ್ಟನ್ನು ಮಿಕ್ಸ್ ಮಾಡಿ, ಮುಖಕ್ಕೆ ಸ್ಕ್ರಬ್ ಮಾಡಿ.
ಟೊಮೆಟೋ ಹಣ್ಣಿನ ಸ್ಕ್ರಬ್ ಬಳಸಬಹುದು. ಟೊಮೆಟೋ ರಸವನ್ನು ಹಲವು ಫೇಸ್‌ಪ್ಯಾಕ್ ಹಾಕುವಾಗ ಬಳಸಲಾಗುತ್ತದೆ. ಟೊಮೆಟೋ ರಸರಿಂದ ತ್ವಚೆ ಸಾಫ್ಟ್ ಆಗುತ್ತದೆ. ಅರ್ಧ ಟೊಮೆಟೋ ಹಣ್ಣನ್ನು ತೆಗೆದುಕೊಂಡು, ಅದರ ಮೇಲೆ ಸಕ್ಕರೆ ಹರಡಿ. ಇದರಿಂದ ತ್ವಚೆಗೆ ಸ್ಕ್ರಬ್ ಮಾಡಿ, ಸ್ಕ್ರಬಿಂಗ್ ಮಾಡುವಾಗಲೂ ರಫ್ ಆಗಿ ಮಾಡಬಾರದು. ಸಾಫ್ಟ್ ಆಗಿಯೇ ಸ್ಕ್ರಬ್ ಮಾಡಬೇಕು. 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖ ತೊಳೆಯಿರಿ.
ಕಾಫಿ ಪುಡಿ ಬಳಸಿಯೂ ಕೂಡ ಸ್ಕ್ರಬಿಂಗ್ ಮಾಡಬಹುದು. 1 ಸ್ಪೂನ್ ಕಾಫಿ ಪುಡಿ, ಸಕ್ಕರೆ, ಮತ್ತು ತೆಂಗಿನಎಣ್ಣೆ ಈ ಮೂರನ್ನೂ ಸೇರಿಸಿ, ಸ್ಕ್ರಬಿಂಗ್ ಮಾಡಿ. 5 ನಿಮಿಷ ಬಿಟ್ಟು ಕಾಟನ್ ಬಟ್ಟೆಯಿಂದ ಮುಖವನ್ನು ಒರೆಸಿಕೊಳ್ಳಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ವಾಶ್ ಮಾಡಿ. ಆದರೆ ನೆನಪಿರಲಿ, ಯಾವುದೇ ಸ್ಕ್ರಬಿಂಗ್ ಮಾಡಿದರೂ ವಾರಕ್ಕೊಮ್ಮೆ ಮಾಡಿದರೆ ಸಾಕು. ಹೆಚ್ಚು ಸ್ಕ್ರಬಿಂಗ್ ಮಾಡಿದರೆ, ನಿಮ್ಮ ತ್ವಚೆ ಒಣಗಿ ಹೋಗುತ್ತದೆ. ಇನ್ನು ನೀವು ಮೊದಲು ನಿಮ್ಮ ಕೈಗಳಿಗೆ ಸ್ಕ್ರಬಿಂಗ್ ಮಾಡಿಕೊಳ್ಳಿ. ನಿಮಗೆ ಅಲರ್ಜಿಯಾಗಿಲ್ಲವೆಂದಲ್ಲಿ ಮಾತ್ರ, ಮುಖಕ್ಕೆ ಸ್ಕ್ರಬಿಂಗ್ ಮಾಡಿಕೊಳ್ಳಿ.
ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?