Tuesday, December 3, 2024

Latest Posts

ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..

- Advertisement -

ಪ್ರತಿದಿನ ಅಡುಗೆ ಮಾಡುವಾಗ, ತರಕಾರಿ ಅಂತೂ ಬೇಕೇ ಬೇಕಾಗತ್ತೆ. ತರಕಾರಿ ಇಲ್ಲದೇ, ಯಾವ ಅಡುಗೆಯೂ ಸಂಪೂರ್ಣ ಆರೋಗ್ಯಕರವಾಗಲು ಸಾಧ್ಯವಿಲ್ಲ. ಹಾಗಾಗಿ ತರಕಾರಿಯನ್ನ ಪ್ರತಿಯೊಬ್ಬರೂ ಬಳಸಲೇಬೇಕು. ಆದ್ರೆ ಅದನ್ನ ಸರಿಯಾದ ರೀತಿಯಲ್ಲಿ ಬಳಸಬೇಕು. ಹಾಗಾಗಿ ನಾವಿಂದು ತರಕಾರಿ ಬಳಸಿ, ಹೇಗೆ ಪೋಷಕಾಂಶ ಪಡೆಯಬೇಕು..? ಮತ್ತು ತರಕಾರಿ ವಿಷಯದಲ್ಲಿ ಯಾವ ತಪ್ಪು ಮಾಡಬಾರದು ಅಂತಾ ಹೇಳಲಿದ್ದೇವೆ..

ಮೊದಲನೇಯ ವಿಷಯ, ಎಂದಿಗೂ ತರಕಾರಿಯನ್ನ ಕತ್ತರಿಸಿ ತುಂಬ ಹೊತ್ತು ಇರಿಸಬೇಡಿ. ತರಕಾರಿ ಕಟ್ ಮಾಡಿದ ತಕ್ಷಣವೇ ಬಳಸಿ. ಇಲ್ಲವಾದಲ್ಲಿ ಅದರಲ್ಲಿರುವ ಪೋಷಕಾಂಶಗಳೆಲ್ಲ ಹೋಗುತ್ತದೆ. ಅಂಥ ತರಕಾರಿ ತಿಂದು ಕೂಡ ಪ್ರಯೋಜನವಿಲ್ಲ. ತರಕಾರಿ ಸ್ಯಾಲೆಡ್ ತಿನ್ನುವಾಗಲೂ ಸಹ ನೀವು, ಫ್ರೆಶ್ ಆಗಿ ತರಕಾರಿ ಕಟ್ ಮಾಡಿ, ತಿನ್ನಬೇಕು.

ಎರಡನೇಯ ವಿಷಯ, ತರಕಾರಿ ಕಟ್ ಮಾಡಿದ ತಕ್ಷಣ, ತರಕಾರಿಯನ್ನು ತೊಳೆಯಬಾರದು. ಆಲೂಗಡ್ಡೆ, ಮಂಗಳೂರು ಸೌತೆ, ಎಲೆ ಕೋಸು ಇವಿಷ್ಟನ್ನ ನೀವು ತೊಳೆಯಬಹುದು. ಯಾಕಂದ್ರೆ ಇವುಗಳನ್ನ ತೊಳೆಯದಿದ್ದಲ್ಲಿ, ತಯಾರಿಸಿಡ ಅಡುಗೆಯಲ್ಲಿ ವಾಸನೆ ಬರಬಹುದು ಅಥವಾ ಕಹಿಯಾಗಬಹುದು. ಹಾಗಾಗಿ ಈ ತರಕಾರಿಯನ್ನ ತೊಳೆಯಬಹುದು. ಉಳಿದ ತರಕಾರಿಯನ್ನ ಕತ್ತರಿಸಿದ ಬಳಿಕ ಅಥವಾ ಸಿಪ್ಪೆ ತೆಗೆದ ಬಳಿಕ ತೊಳೆಯಬಾರದು. ಹಾಗೆ ಮಾಡಿದ್ದಲ್ಲಿ, ತರಕಾರಿಯಲ್ಲಿದ್ದ ಅರ್ಧದಷ್ಟು ಪೋಷಕಾಂಶ ಕಡಿಮೆಯಾಗುತ್ತದೆ.

ಮೂರನೇಯ ವಿಷಯ, ಹೆಚ್ಚು ಉರಿಯಲ್ಲಿ ತರಕಾರಿಯನ್ನ ಬೇಯಿಸಬಾರದು. ಮಂದ ಉರಿ ಅಥವಾ ಮಧ್ಯಮ ಉರಿಯಲ್ಲಿ ತರಕಾರಿಯನ್ನ ಬೇಯಿಸಬೇಕು. ಮತ್ತು ತರಕಾರಿ ಬೇಯಿಸಿದ ನೀರನ್ನು ಬಳಸಬೇಕು. ಎಲ್ಲ ಪೋಷಕಾಂಶ ಇರುವುದು ಇದರಲ್ಲಿಯೇ. ನಿಮಗೆ ತರಕಾರಿಯಲ್ಲಿರುವ ಪೂರ್ತಿ ಪೋಷಕಾಂಶ ಬೇಕೆಂದಲ್ಲಿ, ಕುಕ್ಕರ್‌ನಲ್ಲಿ ಎಂದಿಗೂ ತರಕಾರಿ ಬೇಯಿಸಬೇಡಿ. ಪಾತ್ರೆಗೆ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ, ಅಗತ್ಯವಿರುವಷ್ಟೇ ನೀರಿನಲ್ಲಿ ತರಕಾರಿ ಬೇಯಿಸಿ.

ನಾಲ್ಕನೇಯ ವಿಷಯ, ಮನೆಯಲ್ಲಿ ಬೆಳೆದ, ಅಥವಾ ನಿಮ್ಮ ಊರಿನಲ್ಲೇ ಬೆಳೆದ ತರಕಾರಿ ತಿನ್ನಿ. ಇತ್ತೀಚಿನ ದಿನಗಳಲ್ಲಿ ಮಾರ್ಟ್‌ಗಳಲ್ಲಿ ಪ್ಯಾಕ್ ಮಾಡಿರುವ ತರಕಾರಿಗಳು ಬರುತ್ತದೆ. ಅದನ್ನ ಬೇರೆ ಕಡೆಯಿಂದ ಇಂಪೋರ್ಟ್ ಮಾಡಿಕೊಂಡಿರುತ್ತಾರೆ. ಇಂಥ ತರಕಾರಿಗಳು ನೋಡಲು ಚೆಂದವಾಗಿರುತ್ತದೆ. ಆದ್ರೆ ಆರೋಗ್ಯಕ್ಕೆ ಹಾನಿಕಾರಕ. ಇನ್ನು ಹೈಬ್ರೀಡ್ ತರಕಾರಿ ರುಚಿಯೂ ಇರುವುದಿಲ್ಲ. ಆರೋಗ್ಯಕ್ಕೂ ಉತ್ತಮವಲ್ಲ. ಹಾಗಾಗಿ ಊರಲ್ಲೇ ಬೆಳೆದ ತರಕಾರಿಯನ್ನ ಉಪಯೋಗಿಸಿ.

ಯಾವುದರಿಂದ ಸ್ನಾನ ಮಾಡಿದ್ರೆ ಉತ್ತಮ..? ಆರೋಗ್ಯಕ್ಕೂ ಸ್ನಾನಕ್ಕೂ ಇದೆ ನಂಟು..

ಟೂತ್ ಪೇಸ್ಟ್ ಬಳಸುವ ಬದಲು ಇದನ್ನು ಬಳಸಿ..

ಸಿಂಪಲ್ ಮ್ಯಾಂಗೋ ಕುಲ್ಫಿ ರೆಸಿಪಿ..

- Advertisement -

Latest Posts

Don't Miss