ತುಳಸಿ ಎಲೆಯನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ತುಳಸಿ ಎಲೆಯನ್ನ ಯಾವ ರೀತಿ, ಎಷ್ಟು ಸೇವಿಸಬೇಕು ಅನ್ನೋದು ಮಾತ್ರ ಹಲವರಿಗೆ ಗೊತ್ತಿಲ್ಲ. ಅಂಥವರು ತುಳಸಿ ತಿಂದಾಗ, ಆರೋಗ್ಯ ಸುಧಾರಿಸುವ ಬದಲು, ಉಷ್ಣ ಹೆಚ್ಚಾಗಿ, ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಾವಿಂದು ತುಳಸಿಯನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಶಿವನ ದೇವಸ್ಥಾನಕ್ಕೆ ಹೋದಾಗ ಪೂರ್ತಿಯಾಗಿ ಪ್ರದಕ್ಷಿಣೆ ಯಾಕೆ ಹಾಕಬಾರದು..?
ತುಳಸಿ ಎಲೆಯನ್ನು ಸೇವಿಸುವ ಬದಲು, ಅದರ ಕಶಾಯ ಮಾಡಿ ಕುಡಿಯುವುದು ತುಂಬಾ ಉತ್ತಮ. ನೀವು ರವಿವಾರದ ದಿನ ಬಿಟ್ಟು ಉಳಿದ ವಾರದಲ್ಲಿ ಯಾವ ವಾರ ಬೇಕಾದರೂ ತುಳಸಿಯ ಕಶಾಯವನ್ನು ಸೇವಿಸಬಹುದು. ವಾರದಲ್ಲೆರಡು ಬಾರಿ ನೀವು ತುಳಸಿ ಕಶಾಯ ಸೇವಿಸಿ. 5ರಿಂದ 8 ತುಳಸಿ ದಳವನ್ನು ತೆಗೆದು ಸ್ವಚ್ಛಗೊಳಿಸಿ, ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ಚೆನ್ನಾಗಿ ಕುದಿಸಿ, ಕಶಾಯ ತಯಾರಿಸಿ. ಇದನ್ನು ಸೇವಿಸಿದ್ದಲ್ಲಿ, ನಿಮ್ಮ ಆರೋಗ್ಯ ವೃದ್ಧಿಸುತ್ತದೆ. ವೃಧ್ಯಾಪ್ಯದಲ್ಲಿ ನೀವು ಆರೋಗ್ಯವಂತರಾಗಿರಲು ಇದು ಸಹಾಯ ಮಾಡುತ್ತದೆ.
ಬೇಗ ಗರ್ಭಧಾರಣೆ ಮಾಡಬೇಕೆನ್ನುವವರು ಈ ಆಹಾರವನ್ನು ತಿನ್ನಿ..
ಇನ್ನು ರವಿವಾರ ಯಾಕೆ ತುಳಸಿಯನ್ನು ಮುಟ್ಟಬಾರದು ಅಂತಾ ಹೇಳುವುದೆಂದರೆ, ರವಿವಾರ ಸೂರ್ಯನ ಶಾಖ ಹೆಚ್ಚಾಗಿರುತ್ತದೆ. ಹಾಗಾಗಿ ಮನುಷ್ಯನ ದೇಹದಲ್ಲಿ ಉಷ್ಣತೆ ಹೆಚ್ಚಾಗಿರುತ್ತದೆ. ಮತ್ತು ತುಳಸಿ ಕೂಡ ಉಷ್ಣ ಪದಾರ್ಥವಾಗಿರುವ ಕಾರಣ, ನಾವು ತುಳಸಿಯನ್ನು ಮುಟ್ಟುವುದರಿಂದ ಉಷ್ಣತೆ ಮಿತಿಮೀರಿ, ತುಳಸಿ ಗಿಡ ಒಣಗುವ ಸಾಧ್ಯತೆ ಇರುತ್ತದೆ. ಹಾಗಾಗಿ ತುಳಸಿ ಗಿಡವನ್ನು ರವಿವಾರ ಮುಟ್ಟಬಾರದು.