ಗಂಟಲ ಕಿರಿ ಕಿರಿ ಉಂಟಾದರೆ ಎಂಥ ಕಷ್ಟ ಆಗತ್ತೆ ಅನ್ನೋದು, ಅದನ್ನು ಅನುಭವಿಸಿದವರಿಗೇ ಗೊತ್ತು. ಕೆಲವೊಮ್ಮೆ ಅದರಿಂದ ಎದೆ ನೋವು ಕೂಡ ಬರುತ್ತದೆ. ಹಾಗಾಗಿ ಇಂದು ನಾವು ಗಂಟಲ ಕಿರಿಕಿರಿ ಬಂದರೆ, ಅದನ್ನು ಹೇಗೆ ಹೋಗಲಾಡಿಸಬೇಕು ಎಂದು ಹೇಳಲಿದ್ದೇವೆ.
ತುಟಿಯ ಬಣ್ಣವನ್ನು ತಿಳಿ ಗುಲಾಬಿ ಮಾಡುವುದು ಹೇಗೆ..?
ಮೊದಲನೇಯದಾಗಿ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅರಿಶಿನ ಹಾಕಿ, ಗಾರ್ಗಲಿಂಗ್ ಮಾಡಿ. ಅಂದ್ರೆ ನೀರನ್ನು ಗಂಟಲಿನಲ್ಲಿರಿಸಿಕೊಂಡು ಗಳ ಗಳ ಮಾಡುವುದು. ನೀವು ಅರಿಶಿನದ ಜೊತೆ ಉಪ್ಪನ್ನ ಕೂಡ ಸೇರಿಸಿಕೊಳ್ಳಬಹುದು. ಇದರಿಂದ ನಿಮ್ಮ ಗಂಟಲಿನಲ್ಲಿರುವ ಬ್ಯಾಕ್ಟಿರೀಯಾ ಸಾಯುತ್ತದೆ. ಮತ್ತು ನಿಮಗೆ ಗಂಟಲಿನ ಕಿರಿ ಕಿರಿಯಿಂದ ಮುಕ್ತಿ ಸಿಗುತ್ತದೆ.
ಎರಡನೇಯದಾಗಿ ಅರ್ಧ ಚಮಚ ಜೇನುತುಪ್ಪ ಮತ್ತು ಅರಿಶಿನವನ್ನು ಸೇರಿಸಿ, ರಾತ್ರಿ ಮಲಗುವ ಮುನ್ನ ಸೇವಿಸಬೇಕು. ಇದನ್ನು ಸೇವಿಸಿದ ಬಳಿಕ ನೀರು ಕುಡಿಯಬಾರದು ಮತ್ತು ಏನನ್ನೂ ಸೇವಿಸಬಾರದು. ನೀವು ಜೇನುತುಪ್ಪದ ಜೊತೆ ಅರಿಶಿನದ ಬದಲು, ಶುಂಠಿ ರಸ, ಹಿಂಗನ್ನ ಕೂಡ ಬಳಸಬಹುದು.
ಜೀವನದಲ್ಲಿ ಅಪ್ಪಿ ತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ..
ಮೂರನೇಯದಾಗಿ ಕೊಂಚ ಅರಿಶಿನ ಮತ್ತು ಬೆಲ್ಲ ಹಾಕಿ ಪುಟ್ಟ ಲಾಡು ತಯಾರಿಸಿ, ರಾತ್ರಿ ಮಲಗುವ ಮುನ್ನ ಸೇವಿಸಿ. ಇದನ್ನು ಸೇವಿಸಿದ ಬಳಿಕ ಏನನ್ನೂ ತಿನ್ನಬೇಡಿ ಮತ್ತು ಕುಡಿಯಬೇಡಿ.
ನಾಲ್ಕನೇಯದಾಗಿ ಒಂದು ಲವಂಗವನ್ನು ಅಗಿದು ಬಾಯಿಯಲ್ಲೇ ಇರಿಸಿಕೊಳ್ಳಿ. ಮತ್ತು ಅದರ ರಸವನ್ನು ನುಂಗಿ. ಹೀಗೆ ಮಾಡುವುದರಿಂದ ಗಂಟಲ ಕಿರಿಕಿರಿಯಿಂದ ಮುಕ್ತಿ ಸಿಗುತ್ತದೆ. ಅಲ್ಲದೇ ಕೆಂಪು ಕಲ್ಲುಸಕ್ಕರೆ ಸೇವನೆಯಿಂದಲೂ ಇದಕ್ಕೆ ಪರಿಹಾರ ಸಿಗುತ್ತದೆ.
ಇನ್ನು ಮುಖ್ಯವಾದ ವಿಷಯ ಅಂದ್ರೆ, ನಿಮಗೆ ಮನೆ ಮದ್ದು ಮಾಡಿಯೂ ಎರಡು ದಿನದೊಳಗೆ ಗಂಟಲ ಕಿರಿಕಿರಿ ಕಡಿಮೆಯಾಗದಿದ್ದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸುವುದು ಉತ್ತಮ.