Tips For Life: ಯಾರಿಗೆ ವಿಲ್ ಪವರ್ ಹೆಚ್ಚಾಗಿರುತ್ತದೆಯೋ, ಅವರು ಜೀವನದ ಎಂಥ ಕಷ್ಟಗಳನ್ನು ಬೇಕಾದರೂ ಎದುರಿಸುತ್ತಾರೆ ಅಂತಾ ಹೇಳಲಾಗುತ್ತದೆ. ವಿಲ್ ಪವರ್ ಎಂದರೆ, ನಿಮಗೆ ಯಾವುದಾದರೂ ಇಷ್ಟದ ಪದಾರ್ಥ, ಅಥವಾ ನಿಮಗೆ ಈ ಮೊದಲು ಯಾವುದಾದರೂ ಚಟವಿದ್ದರೆ, ಆ ಚಟಕ್ಕೆ ಬೇಕಾದ ವಸ್ತು ನಿಮ್ಮ ಮುಂದಿದ್ದರೆ, ಅದನ್ನು ಯಾವುದೇ ಕಾರಣಕ್ಕೂ ಮುಟ್ಟದೇ, ತಡೆದುಕೊಳ್ಳುವುದೇ ವಿಲ್ ಪವರ್.
ಮದ್ಯ, ಸಿಗರೇಟ್, ಹೆಣ್ಣು,ತಿಂಡಿ ಹೀಗೆ ಯಾವುದೇ ವಸ್ತು ಎದುರಿನಲ್ಲಿದ್ದರೂ, ಅದನ್ನು ಮುಟ್ಟದೇ, ಸುಮ್ಮನಿದ್ದರೆ, ನೀವು ಗೆದ್ದಿರಿ ಎಂದರ್ಥ. ಇಂಥ ವಿಲ್ ಪವರ್ ನಿಮಗೂ ಬರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
ಮೊದಲನೇಯ ವಿಷಯ. ಯಾರ ಥಿಂಕಿಂಗ್ ಲೇವಲ್ ಹೈ ಇರುತ್ತದೆಯೋ, ಅವರ ವಿಲ್ ಪವರ್ ಕೂಡ ಹೈ ಇರುತ್ತದೆ. ಅಂದರೆ, ಹೈ ಲೆವಲ್ ನಲ್ಲಿ ಯೋಚಿಸುವವರು, ಎಲ್ಲದರ ಮೇಲೆ ಕಂಟ್ರೋಲ್ ಹೊಂದಿರುತ್ತಾರೆ. ಇಂದ್ರಿಯಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ. ವಿಜ್ಞಾನಿಗಳ ಪ್ರಕಾರ, ನಿಮ್ಮ ಬಳಿ ಯಾಕೆ ಎನ್ನುವ ಪ್ರಶ್ನೆ ಇದ್ದಲ್ಲಿ, ನಿಮ್ಮ ವಿಲ್ ಪವರ್ ಉತ್ತಮವಾಗಿರುತ್ತದೆಯಂತೆ. ಅಂದರೆ, ನೀವು ದೇಹದ ತೂಕ ಇಳಿಸಬೇಕು ಅನ್ನುವ ಆಶಯ ಹೊಂದಿದ್ದೀರಿ ಎಂದಿಟ್ಟುಕೊಳ್ಳಿ. ಅದಕ್ಕೊಂದು ಕಾರಣ ಬೇಕು. ಯಾಕೆ ನಾನು ದೇಹದ ತೂಕ ಇಳಿಸಬೇಕು ಎನ್ನುವ ಕಾರಣ ನಿಮ್ಮ ಬಳಿ ಇರಬೇಕು. ಆಗಷ್ಟೇ ನಿಮ್ಮ ವಿಲ್ ಪವರ್ ಉತ್ತಮವಾಗಿರಲು ಸಾಧ್ಯವಾಗುತ್ತದೆ.
ಎರಡನೇಯದಾಗಿ ನಿಮ್ಮ ಆತ್ಮವಿಶ್ವಾಸ ಎಷ್ಟು ಇರುತ್ತದೆಯೋ, ನಿಮಗೆ ಅಷ್ಟು ಯಶಸ್ಸು ಸಿಗುತ್ತದೆ. ನಾನು ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸಿ, ನನ್ನ ಗುರಿ ಮುಟ್ಟುತ್ತೇನೆ ಎನ್ನುವ ಆತ್ಮವಿಶ್ವಾಸ ನಿಮಗಿದ್ದಾಗ, ನಿಮ್ಮ ವಿಲ್ ಪವರ್ ಹೆಚ್ಚುತ್ತದೆ.
ಮೂರನೇಯದಾಗಿ ನೀವು ಮಾಡುವ ಕೆಲಸವನ್ನು ಸಣ್ಣಸಣ್ಣದಾಗಿ ಹಂಚಿಕೊಳ್ಳಿ. ಈ ವಾರ ಈ ಕೆಲಸ ಮಾಡಿದರೆ, ಮುಂದಿನ ವಾರ ಇನ್ನೊಂದು ಕೆಲಸ ಕಂಪ್ಲೀಟ್ ಮಾಡುತ್ತೇನೆ. ಮತ್ತೆ ಅದರ ಮುಂದಿನ ವಾರ ಮತ್ತೊಂದು ಕೆಲಸ ಮಾಡುತ್ತೇನೆ. ಹೀಗೆ ಒಂದು ತಿಂಗಳಲ್ಲಿ ನಾನಂದುಕೊಂಡ ಕೆಲಸ ಮುಗಿಸುತ್ತೇನೆ ಎನ್ನುವಂತಿರಬೇಕು.
ನಾಲ್ಕನೇಯದಾಗಿ ಪ್ರತಿದಿನ ಧ್ಯಾನ ಮಾಡಿ. ಧ್ಯಾನ ಮಾಡಿದಾಗ ನಿಮ್ಮ ವಿಲ್ ಪವರ್ ನೀವು ಕಂಟ್ರೋಲಿನಲ್ಲಿಡಬಹುದು. ಇಂದ್ರಿಯಗಳನ್ನು ಹಿಡಿತದಲ್ಲಿಡುವುದರಿಂದ ಕಾಮ, ಲೋಭ, ಮದ, ಮತ್‌ಸರಗಳಿಂದ ದೂರವಿಡಬಹುದು. ಅದಕ್ಕಾಗಿ ನೀವು ಧ್ಯಾನ ಮಾಡುವುದು ತುಂಬಾ ಮುಖ್ಯ.
ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?