ಮುಂಬೈ: ಈ ತಿಂಗಳ ಅಂತ್ಯದ ವೇಳೆಗೆ ನೀವು ನಿಮ್ಮ ಉದ್ಯೋಗಿಗಳ ಭವಿಷ್ಯ ನಿಧಿಯ ಸಾರ್ವತ್ರಿಕ ಖಾತೆ ಸಂಖ್ಯೆಯನ್ನು ಆಧಾರ್ ಲಿಂಕ್ ಮಾಡಬೇಕಾಗುತ್ತದೆ.
ಮುಂದಿನ ತಿಂಗಳಿನಿಂದ ನಿಮ್ಮ ಪಿಎಫ್ ಖಾತೆಗಳಿಗೆ ಕಂಪನಿಯ ಷೇರು ಜಮಾ ಆಗುವುದಿಲ್ಲ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಕೂಡ ಉದ್ಯೋಗಿಗಳ ಯುಎಎನ್‌ಗಳನ್ನು ಆಧಾರ್‌ನೊಂದಣಿಗೆ ತಕ್ಷಣ ಲಿಂಕ್ ಮಾಡುವಂತೆ ಉದ್ಯೋಗದಾತರಿಗೆ ಸೂಚನೆ ನೀಡಿದೆ. ಈ ಮೊದಲು, ಯುಎಎನ್-ಆಧಾರ್ ಸಂಪರ್ಕಕ್ಕೆ ಗಡುವು 31 ಆಗಸ್ಟ್ 2021 ಆಗಿತ್ತು. ನಂತರ ಇದನ್ನು ನವೆಂಬರ್ 30, 2021 ರವರೆಗೆ ವಿಸ್ತರಿಸಲಾಯಿಗಿದೆ.
ಆಧಾರ್ ಜೋಡಣೆ ಮಾಡದಿದ್ದರೆ. ಪಿಎಫ್ ಖಾತೆಯಿಂದ ಹಣ ತೆಗೆಯಲು ತೊಂದರೆಯಾಗುತ್ತದೆ. ಹಾಗೆಯೇ ಕೋವಿಡ್-19 ರ ಹಿನ್ನೆಲೆಯಲ್ಲಿ ಸರ್ಕಾರವು ನೀಡುವ ಪ್ರಯೋಜನಗಳು. ವಿಮಾ ಪ್ರಯೋಜನಗಳು ಸಹ ನಿಮಗೆ ಸಿಗೋದಿಲ್ಲ.
ಇಪಿಎಪ್‌ಒ ಪೋರ್ಟಲ್ ತೆರೆಯಿರಿ ಮತ್ತು ಎಡಭಾಗದಲ್ಲಿರುವ ಇಕೆವೈಸಿ ಆಯ್ಕೆಯ ಮೇಲೆ .
ಯುಎಎನ್, ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯ ಅನ್ನು ನಮೂದಿಸಿ ಮತ್ತು ಲಿಂಕ್ ಅನ್ನು ಆಯ್ಕೆಮಾಡಿ. ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಆಧಾರ್ ಪರಿಶೀಲನೆ’ ಮಾಡಿ.
ಪ್ರಸ್ತುತ ಬಳಕೆಯಲ್ಲಿರುವ ‘ಮೊಬೈಲ್ ಅಥವಾ ಇ-ಮೇಲ್’ ಮೂಲಕ ಪರಿಶೀಲನೆ ಮಾಡಬಹುದು.
‘ಪರಿಶೀಲನೆಗೆ ಮತ್ತೊಮ್ಮೆ ಒಟಿಪಿ. ನಮೂದಿಸಿ ಮತ್ತು ಸಲ್ಲಿಸಿ.
ನಂತರ ಇಪಿಎಫ್, ಯುಎಎನ್ ಆಧಾರಿತ ಸಂಪರ್ಕ ಪ್ರಕ್ರಿಯೆಯ ಪೂರ್ಣಗೊಳುತ್ತದೆ.

