Health Tips: ಕೂದಲು ಉದುರುವ ಸಮಸ್ಯೆಯನ್ನ ಇತ್ತೀಚೆಗೆ ಹಲವರು ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಶ್ಯಾಂಪೂ, ಹೇರ್ ಪ್ಯಾಕ್, ಎಣ್ಣೆ ಏನೇ ಬಳಸಿದರೂ, ಹೇರ್ ಫಾಲ್ ಕಂಟ್ರೋಲಿಗೆ ಬರುತ್ತಿಲ್ಲ. ಅಲ್ಲದೇ, ಕಲರ್ ಕಲರ್ ಹೇರ್ ಡೈ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದು ಹಾನಿಕಾರಕ ಹೌದಾ ಅಲ್ಲವಾ ಅನ್ನೋ ಬಗ್ಗೆ ತಿಳಿದುಕೊಳ್ಳಬೇಕಿದೆ. ಹಾಗಾಗಿ ವೈದ್ಯರು ಇಲ್ಲೊಂದಿಷ್ಟು ಸಲಹೆ ಕೊಟ್ಟಿದ್ದಾರೆ ನೋಡಿ..
ಇಂದಿನ ಕಾಲದಲ್ಲಿ ಯಾವ ಬಟ್ಟೆ ಹಾಕಿಕೊಳ್ಳುತ್ತೇವೋ, ಆ ಬಟ್ಟೆಗೆ ತಕ್ಕ ಬಣ್ಣವನ್ನು ಜನ ತಲೆಗೆ ಹಚ್ಚುತ್ತಿದ್ದಾರೆ. ಮೊದಲೆಲ್ಲ ವಯಸ್ಸನ್ನು ಮರೆಮಾಚುವ ಸಲುವಾಗಿ ಮಾತ್ರ, ತಲೆ ಕೂದಲಿಗೆ ಬಣ್ಣ ಹಚ್ಚಲಾಗುತ್ತಿತ್ತು. ಆದ್ರೆ ಈಗ ಸ್ಟೈಲಿಗಾಗಿ ತಲೆಗೂದಲಿಗೆ ಬಣ್ಣ ಹಚ್ಚಲಾಗುತ್ತಿದೆ. ಆದರೆ ಹೀಗೆ ಮಾಡುವುದು ತಪ್ಪು ಅಂತಾರೆ ವೈದ್ಯರು.
ಇನ್ನು ತಲೆಗೂದಲಿಗೆ ಯಾವ ಎಣ್ಣೆ ಬಳಸಬೇಕು ಎನ್ನುವ ಬಗ್ಗೆ ವೈದ್ಯರು ಮಾತನಾಡಿದ್ದು, ಕೊಬ್ಬರಿ ಎಣ್ಣೆಯನ್ನು ಆಹಾರದೊಂದಿಗೆ ಮತ್ತು ತಲೆಗೂದಲಿಗೆ ಬಳಸುವುದರಿಂದ ಕೂದಲಿ ಎಲ್ಲ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಹಾಗಾಗಿಯೇ ಯಾವ ಊರುಗಳಲ್ಲಿ ತೆಂಗಿನ ಕಾಯಿಯನ್ನು ಬೆಳೆದು, ತೆಂಗಿನ ಎಣ್ಣೆ ಬಳಸುತ್ತಾರೋ, ಅಂಥವರು ಸದಾ ಆರೋಗ್ಯವಾಗಿ, ಸುಂದರವಾಗಿ, ಉತ್ತಮ ಕೂದಲು ಉಳ್ಳವರಾಗಿರುತ್ತಾರೆ.
ಅಲ್ಲದೇ, ಎಣ್ಣೆಯನ್ನ ಮಸಾಜ್ ಮಾಡುವ ರೀತಿಯನ್ನು ಸರಿಯಾಗಿ ತಿಳಿದು, ಬಳಿಕ ಮಸಾಜ್ ಮಾಡಬೇಕು. ತಲೆಗೂದಲಿಗೆ ಎಣ್ಣೆ ಹಾಕುವಾಗ, ತಲೆಯಿಂದ ಎಣ್ಣೆ ಸೋರಬೇಕು. ಆ ರೀತಿ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಒಂದು ಗಂಟೆ ಬಿಟ್ಟು, ಸೀಗೆಪುಡಿ, ಅಂಟುವಾಳದ ಪುಡಿ ಬಳಸಿ ತಲೆ ಸ್ನಾನ ಮಾಡಿ. ಹೀಗೆ ಮಾಡಿದಾಗ, ಕೂದಲು ಗಟ್ಟಿಮುಟ್ಟಾಗಿ ಇರುತ್ತದೆ. ಇನ್ನಷ್ಟು ಮಾಹಿತಿಯನ್ನು ತಿಳಿಯಲು ಈ ವೀಡಿಯೋ ನೋಡಿ..
ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?