Recipe: ಸಾಮಾನ್ಯವಾಗಿ ಹಲವರು ಬ್ರೆಡ್ ತಂದಾಗ, ಅದರಿಂದ ಟೋಸ್ಟ್ ಅಥವಾ ಸ್ಯಾಂಡವಿಚ್ ಮಾಡಿ ತಿನ್ನುತ್ತಾರೆ. ಆದರೆ ನೀವು ಸಿಂಪಲ್ ಆಗಿ ಟೋಸ್ಟ್ ಮಾಡುವ ಬದಲು, ಫ್ರೆಂಚ್ ಟೋಸ್ಟ್ ಮಾಡಿದರೆ, ಅದು ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ನಾವಿಂದು ಫ್ರೆಂಚ್ ಟೋಸ್ಟ್ ರೆಸಿಪಿ ಹೇಳಲಿದ್ದೇವೆ.
ಒಂದು ಕಪ್ ಕಾಯಿಸಿದ ಹಾಲು, 3 ಸ್ಪೂನ್ ಕಸ್ಟರ್ಡ್ ಪುಡಿ, 2 ಸ್ಪೂನ್ ಸಕ್ಕರೆ, ಅರ್ಧ ಚಮಚ ಚಕ್ಕೆ ಪುಡಿ, ಕೊಂಚ ವೆನಿಲ್ಲಾ ಎಸ್ಸೆನ್ಸ್ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಕೊಂಚ ತುಪ್ಪ ಹಾಕಿ. ಎರಡು ಬ್ರೆಡ್ ತೆಗೆದುಕೊಂಡು ಅದರ ಮಧ್ಯೆ ಚೀಸ್ ಇಟ್ಟು ಎರಡನ್ನೂ ಸೇರಿಸಿ, ಈ ಮಿಕ್ಸ್‌ನಲ್ಲಿ ಡಿಪ್ ಮಾಡಿ. ಇದನ್ನು ತವಾ ಮೇಲೆ ಹಾಕಿ ಟೋಸ್ಟ್ ಮಾಡಿ.
ಇದು ರೆಡಿಯಾದ ಬಳಿಕ ಇದರ ಮೇಲೆ ಚೀಸ್ ಹಾಕಿ ಟೇಸ್ಟ್ ಮಾಡಲು ಕೊಡಿ. ನಿಮಗೆ ಚೀಸ್ ಇಷ್ಟವಿಲ್ಲದಿದ್ದಲ್ಲಿ, ಎರಡು ಬ್ರೆಡ್‌ನ್ನ ರೆಡಿ ಇರುವ ಮಿಶ್ರಣದಲ್ಲಿ ಅದ್ದಿ ಟೋಸ್ಟ್ ತಯಾರಿಸಿ. ಅದರ ಮೇಲೆ ಬಾಳೆಹಣ್ಣು ಮತ್ತು ಜೇನುತುಪ್ಪ ಹಾಕಿ ಸವಿಯಿರಿ.