Health Tips: ಮಳೆಗಾಲ ಶುರುವಾಗಿದೆ. ಮಳೆಗಾಲ ಎಂದರೆ, ಶೀತ, ಕೆಮ್ಮು, ನೆಗಡಿಗೆ ಇನ್ನೊಂದು ಹೆಸರು. ಯಾಕಂದ್ರೆ ಮಳೆಗಾಲದಲ್ಲಿ ಎಣ್ಣೆ ಪದಾರ್ಥಗಳ ಸೇವನೆ, ಮಳೆಯಲ್ಲಿ ನೆನೆಯುವುದು, ಕೆಲವು ಹಣ್ಣು- ತರಕಾರಿಗಳ ಸೇವನೆಯಿಂದ ನೆಗಡಿ, ಕೆಮ್ಮು ಬರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಡಾ.ಕಿಶೋರ್ ಮಾತನಾಡಿದ್ದಾರೆ. ಗಂಟಲ ಕಿರಿಕಿರಿಯ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂಬ ಬಗ್ಗೆ ತಿಳಿಯೋಣ ಬನ್ನಿ..
ನಿಮಗೆ ಗಂಟಲ ಕಿರಿಕಿರಿಯುಂಟಾಗಿದ್ದರೆ, ನೀವು ಮೊದಲು ಮಾಡಬೇಕಾದ ಕೆಲಸವೆಂದರೆ, ಬಿಸಿ ಬಿಸಿ ನೀರನ್ನು ಕೊಂಚ ಕೊಂಚವಾಗಿ ಕುಡಿಯಬೇಕು. ಮತ್ತು ಕುಳಿತುಕೊಂಡು ನೀರು ಕುಡಿಯುವುದು ಉತ್ತಮ. ಇದರಿಂದ ಗಂಟಲಲ್ಲಾಗುವ ಊತವನ್ನು ಕಡಿಮೆ ಮಾಡಬಹುದು. ಅಲ್ಲದೇ ಬೆಚ್ಚಗಿನ ನೀರು ಮತ್ತು ಉಪ್ಪು ಮಿಕ್ಸ್ ಮಾಡಿ, ಗಾರ್ಗೆಲಿಂಗ್ ಮಾಡಿದ್ರೆ, ನಿಮ್ಮ ದೇಹದಲ್ಲಿ ಕಫವಿದ್ದರೆ, ಆ ಕಫ ಆರಾಮವಾಗಿ ಹೊರ ಬರಲು ಅನುಕೂಲವಾಗುತ್ತದೆ.
ಇನ್ನು ನಾಲ್ಕೈದು ಕಪ್ಪು ತುಳಸಿಯನ್ನು ತೆಗೆದುಕೊಂಡು, ಅದರ ರಸ ಹಿಂಡಿ, ಅದಕ್ಕೆ ಕೊಂಚ ಜೇನುತುಪ್ಪ ಸೇರಿಸಿ. ಇದಕ್ಕೆ ಚಿಟಿಕೆ ಅರಿಶಿನ, ಲವಂಗದ ಪುಡಿ, ಪಚ್ಚಕರ್ಪೂರದ ಪುಡಿ ಸೇರಿಸಿ. ಇದನ್ನು ತಿಂದರೆ, ಗಂಟಲ ಕಿರಿಕಿರಿ ಮಾಯವಾಗುತ್ತದೆ. ಮೂರು ಗಂಟೆಗೊಮ್ಮೆ ಕೊಂಚ ಕೊಂಚವೇ ತಿನ್ನಬೇಕು. ಇಲ್ಲವಾದಲ್ಲಿ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಇನ್ನು ಈ ಮನೆ ಮದ್ದು ಮಾಡುವಾಗ, ಹಳೆಯ ಜೇನುತುಪ್ಪವಿದ್ದರೆ ಇನ್ನೂ ಉತ್ತಮ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..