Recipe: ರಾತ್ರಿ ಸಿಂಪಲ್ ಆಗಿ ಏನಾದರೂ ರೆಡಿ ಮಾಡಿ, ಊಟ ಮಾಡಬೇಕು ಅಂತಾ ಇದ್ದಾಗ, ಆ ಆಹಾರ ತಯಾರಿಸಲು ಅರ್ಧ ಗಂಟೆಯಾದರೂ ತೆಗೆದುಕೊಳ್ಳುತ್ತದೆ. ಹಾಗಾಗಿ ನಾವಿಂದು ಪಲಾವ್ ಮಿಕ್ಸ್ ತಯಾರಿುವುದು ಹೇಗೆ ಅಂತಾ ಹೇಳಲಿದ್ದೇವೆ. ಈ ಮಿಕ್ಸ್ ತಯಾರಿಸಿ, ನೀವು ಪ್ರಿಜ್‌ನಲ್ಲಿರಿಸಿ, 4 ದಿನವಾದ್ರೂ ಬಳಸಬಹುದು. ನಿಮಗೆ ಪಲಾವ್ ತಿನ್ನಬೇಕು ಎನ್ನಿಸಿದಾಗ, ಬಿಸಿ ಬಿಸಿ ಅನ್ನ ತಯಾರಿಸಿ, ಒಂದೆರಡು ತರಕರಾ ಹುರಿದು, ಅದರೊಂದಿಗೆ ಈ ಮಿಕ್ಸ್ ಮತ್ತು ತುಪ್ಪ ಸೇರಿಸಿದರೆ, ಸಾಕು. ರುಚಿ ರುಚಿ ಪಲಾವ್ ರೆಡಿ. ಹಾಗಾದ್ರೆ ಇದನ್ನು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲು ಮಿಕ್ಸ್ ಜಾರ್‌ಗೆ 1 ಕಪ್ ಕೊತ್ತೊಂಬರಿ ಸೊಪ್ಪು, 1 ಕಪ್ ಪುದೀನಾ, ಅರ್ಧ ಈರುಳ್ಳಿ, ಚಿಕ್ಕ ತುಂಡು ಶುಂಠಿ, 4 ಹಸಿಮೆಣಸಿನಕಾಯಿ, 6 ಬೆಳ್ಳುಳ್ಳಿ ಎಸಳು, ಹಾಕಿ ರುಬ್ಬಿ, ಚಟ್ನಿ ತಯಾರಿಸಿಕೊಳ್ಳಿ.
ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ತುಪ್ಪ, 2 ಸ್ಪೂನ್ ಎಣ್ಣೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಜೀರಿಗೆ, ಸೋಂಪು, ಇವಿಷ್ಟನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಉದ್ದಕ್ಕೆ ಕತ್ತರಿಸಿದ 2 ಈರುಳ್ಳಿ ಹಾಕಿ ಹುರಿದು, ಎರಡು ಟೊಮೆಟೋವನ್ನು ಸೇರಿಸಿ, ಮತ್ತೆ ಹುರಿಯಿರಿ. ಇವೆರಡು ಸಾಫ್ಟ್ ಆದ ಬಳಿಕ, ರುಬ್ಬಿಕೊಂಡ ಚಟ್ನಿಯನ್ನು ಇದಕ್ಕೆ ಸೇರಿಸಿ. ಈಗ ಎಣ್ಣೆ ಮತ್ತು ಈ ಮಿಶ್ರಣ ಸಪರೇಟ್ ಆಗುವವರೆಗೂ ಹುರಿಯಿರಿ. ಬಳಿಕ ಇದಕ್ಕೆ ಉಪ್ಪು ಸೇರಿಸಿ, ಹುರಿದರೆ ಪಲಾವ್ ಪ್ರಿ ಮಿಕ್ಸ್ ರೆಡಿ.
ಗಾಳಿಯಾಡದ ಡಬ್ಬದಲ್ಲಿ ಇದನ್ನು ಮುಚ್ಚಿ, ಫ್ರಿಜ್‌ನಲ್ಲಿರಿಸಿ. ಪಲಾವ್ ತಿನ್ನಬೇಕು ಎನ್ನಿಸಿದಾಗ, ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ, ಕ್ಯಾರೇಟ್, ಬಟಾಣಿ, ಬೀನ್ಸ್ ಹಾಕಿ ಚೆನ್ನಾಗಿ ಹುರಿದು, ಪ್ರಿ ಮಿಕ್ಸ್ ಸೇರಿಸಿ, ಅನ್ನ, ತುಪ್ಪ ಸೇರಿಸಿದರೆ, ಪಲಾವ್ ರೆಡಿ. ಉಪ್ಪು ಖಾರ ಇನ್ನಷ್ಟು ಬೇಕಿದ್ದಲ್ಲಿ, ಅದನ್ನೂ ಸೇರಿಸಿಕೊಳ್ಳಬಹುದು.