ನಾವು ಯಾರನ್ನಾದರೂ ಮೀಟ್ ಮಾಡಲು ಹೋದಾಗ, ಅಥವಾ ಮುಖ್ಯವಾದವರೊಟ್ಟಿಗೆ ಮಾತನಾಡುವಾಗ ನಮ್ಮ ಬಾಯಿಯಿಂದ ವಾಸನೆ ಬಂದ್ರೆ, ನಮಗೆ ಅದೆಷ್ಟು ಅವಮಾನವಾಗತ್ತೆ ಅಲ್ವಾ..? ಹಾಗಾಗಿ ಕೆಲವರು ಮೌತ್ ಸ್ಪ್ರೇ ಬಳಸುತ್ತಾರೆ. ಇನ್ನು ಕೆಲವರು ಮನೆ ಮದ್ದು ಮಾಡುತ್ತಾರೆ. ನಾವು ಕೂಡ ಅದೇ ರೀತಿ ಬಾಯಿಯ ವಾಸನೆ ತೊಲಗಿಸುವುದಕ್ಕೆ ಮನೆ ಮದ್ದು ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ನಮ್ಮ ಬಾಯಿಯಿಂದ ವಾಸನೆ ಬರಬಾರದು ಅಂದ್ರೆ , ನಮ್ಮ ನಾಲಿಗೆ ಸರಿಯಾಗಿ ಇರಬೇಕು. ಅದಕ್ಕಾಗಿ ನೀವು ಪ್ರತಿದಿನ ಬೆಳಿಗ್ಗೆ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಬೇಕು. ನೀವು ವೈದ್ಯರ ಬಳಿ ಹೋದಾಗ, ನಿಮ್ಮ ಆರೋಗ್ಯ ಹೇಗಿದೆ ಎಂದು ನೋಡಲು ಅವರು ಮೊದಲು ಹೇಳುವ ಮಾತೇ, ಎಲ್ಲಿ ನಿಮ್ಮ ನಾಲಿಗೆ ತೋರಿಸಿ ಎಂದು. ಯಾಕಂದ್ರೆ ನಾಲಿಗೆ, ಹೃದಯ, ಗಂಟಲು, ಕಿಡ್ನಿ ಇವೆಲ್ಲದರ ಆರೋಗ್ಯ ಹೇಗಿದೆ ಅನ್ನೋದನ್ನ ಹೇಳತ್ತೆ. ಹಾಗಾಗಿ ವೈದ್ಯರು ನಿಮ್ಮ ನಾಲಿಗೆ ನೋಡಿಯೇ, ಯಾವ ಜಾಗದಲ್ಲಿ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಹಾಗಾಗಿ ನಿಮ್ಮ ನಾಲಿಗೆ ಸ್ವಚ್ಛಗೊಳಿಸಿದರೆ, ನೀವು ದೇಹದ ಒಳಗಿರುವ ಹಲವು ಸ್ಥಳಗಳನ್ನ ಶುದ್ಧಿ ಮಾಡುವುದಕ್ಕೆ ಸಮವಾಗುತ್ತದೆ.
ಎರಡನೇಯದಾಗಿ ನೀವು ಚೆನ್ನಾಗಿ ಆಹಾರ ಸೇವಿಸಬೇಕು ಮತ್ತು ಹೆಚ್ಚೆಚ್ಚು ನೀರು ಕುಡಿಯಬೇಕು. ಬೇಕಾದ್ರೆ ನೀವು ನೀವೊಮ್ಮೆ ಟ್ರೈ ಮಾಡಿ ನೋಡಿ. ನೀವು ಉಪವಾಸವಿದ್ದು, ನಿಮ್ಮ ಬಾಯಿಯ ವಾಸನೆಯನ್ನೇ ನೀವೇ ಫೀಲ್ ಮಾಡಿ. ಅದು ಕೆಟ್ಟ ವಾಸನೆಯಾಗಿರುತ್ತದೆ. ಆದ್ರೆ ಹಲವರಿಗೆ ಈ ವಿಷಯ ಗೊತ್ತಿರುವುದಿಲ್ಲ. ಅವರು, ಇದು ಬ್ರಶ್ ಸರಿಯಾಗಿ ಮಾಡದಿದ್ದಾಗ ಬರುವ ವಾಸನೆ ಎಂದು ತಿಳಿಯುತ್ತಾರೆ. ಆದ್ರೆ ಅದು ಉಪವಾಸವಿದ್ದ ಕಾರಣ ಬರುವ ದುರ್ನಾತವಿರುತ್ತದೆ. ಹಾಗಾಗಿ ಉತ್ತಮ ಆಹಾರವನ್ನ ಸರಿಯಾಗಿ ತಿನ್ನಿ, ಹೆಚ್ಚು ಶುದ್ಧ ನೀರು ಕುಡಿಯಿರಿ.
ನೀವು ಬಾಯಿ ಶುದ್ಧ ಮಾಡಲು ಟೂತ್ ಪೇಸ್ಟ್ ಬಳಸುತ್ತೀರಿ. ಅದೇ ರೀತಿ ಬಬೂಲ್, ಬೇವಿನ ದಂಟನ್ನ ಕೂಡ ಬಳಸಿ ನೋಡಿ. ಇದು ಕೂಡ ಉತ್ತಮವಾಗಿರುತ್ತದೆ. ಇನ್ನು ಪ್ರತಿದಿನ ಒಂದೇ ಒಂದು ಲವಂಗವನ್ನ ನೀವು ಬಾಯಲ್ಲಿಟ್ಟು, ಅಗಿದು ಅದರ ರಸವನ್ನು ನುಂಗುತ್ತಿರಿ. ಇದರಿಂದಲೂ ಬಾಯಿಯ ದುರ್ನಾತ ಕಡಿಮೆಯಾಗುತ್ತದೆ. ಅಲ್ಲದೇ ದಿನಕ್ಕೆ ಎರಡು ಬಾರಿ ಬ್ರಶ್ ಮಾಡಿ. ಏನಾದರೂ ತಿಂದ ಬಳಿಕ, ಬಾಯಿಯನ್ನು ಕ್ಲೀನ್ ಮಾಡಿ. ಈ ಅಭ್ಯಾಸವಿದ್ದರೆ, ನಿಮ್ಮ ಬಾಯಿಯಿಂದ ಕೆಟ್ಟ ವಾಸನೆಯನ್ನು ಹೋಗಲಾಡಿಸಬಹುದು.