ಇಂದಿನ ಕಾಲದಲ್ಲಿ ಆಫೀಸಿನಲ್ಲಿ ಕೆಲಸ ಮಾಡಲು ಹೋಗುವವರು ಚೆನ್ನಾಗಿ ಡ್ರೆಸ್ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಫಾರ್ಮಲ್ ಡ್ರೆಸ್‌ನಗಳನ್ನೇ ಹಾಕಬೇಕು. ಟೈ, ಶೂಸ್ ಕಂಪಲ್ಸರಿ ಹಾಕಲೇಬೇಕು ಎಂಬ ರೂಲ್ಸ್ ಇರತ್ತೆ. ಅಂಥವರು ಮನಸ್ಸಿಲ್ಲದಿದ್ದರೂ, ದುಡಿಮೆಗಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಲೇಬೇಕಾಗುತ್ತದೆ. ಹಾಗಾಗಿ ನಾವಿಂದು ಶೂಸ್ ಹಾಕಿದರೂ, ಪಾದದಲ್ಲಿ ವಾಸನೆ ಬರದಂತೆ ತಡೆಗಟ್ಟುವುದು ಹೇಗೆ ಅಂತಾ ತಿಳಿಸಲಿದ್ದೇವೆ.
ಮೊದಲನೇಯದಾಗಿ ನೀವು ನಿಮ್ಮ ಪಾದವನ್ನು ಚೆನ್ನಾಗಿ ಸ್ವಚ್ಛಮಾಡುವುದರ ಜೊತೆಗೆ, ಶೂಸ್, ಸಾಕ್ಸ್ ಕೂಡ ಚೆನ್ನಾಗಿ ತೊಳೆಯಬೇಕು. ಆಫೀಸಿನಿಂದ ಬಂದ ಬಳಿಕ, ಸ್ವಚ್ಛವಾಗಿ ಕಾಲನ್ನು ತೊಳೆದುಕೊಳ್ಳಿ. ನೀವು ಎರಡು ಜೊತೆ ಶೂಸ್, ನಾಲ್ಕೈದು ಜೊತೆ ಸಾಕ್ಸ್ ಹೊಂದಿರಲೇಬೇಕು. ಹೀಗೆ ಮಾಡಿದಾಗಲಷ್ಟೇ ನಿಮ್ಮ ಪಾದದ ಆರೋಗ್ಯದ ಜೊತೆಗೆ, ಪಾದದಿಂದ ಬರುವ ವಾಸನೆಯ ಸಮಸ್ಯೆಯನ್ನು ತಡೆಗಟ್ಟಬಹುದು. ಸಾಕ್ಸ್‌ನ್ನು ಬಿಸಿ ನೀರಿನಿಂದ ತೊಳೆಯಿರಿ. ಒಂದು ದಿನ ಬಳಸಿದ ಸಾಕ್ಸ್ ಇನ್ನೊಮ್ಮೆ ಬಳಸುವಾಗ, ತೊಳೆದು ಸ್ವಚ್ಛಗೊಳಿಸಿಯೇ ಬಳಸಬೇಕು.
ಎರಡನೇಯದಾಗಿ ಪ್ರತಿದಿನ ಪಾದಕ್ಕೆ ಎಣ್ಣೆ ಮಸಾಜ್ ಮಾಡಬೇಕು. ರಾತ್ರಿ ಮಲಗುವಾಗ ಪಾದಕ್ಕೆ ತೆಂಗಿನ ಎಣ್ಣೆಯ ಮಸಾಜ್ ಮಾಡಿ ಮಲಗಿ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ. ಅಲ್ಲದೇ, ಪಾದದ ವಾಸನೆಯೂ ಕಡಿಮೆಯಾಗುತ್ತದೆ. ವಾರಕ್ಕೆ ಮೂರು ಬಾರಿಯಾದರೂ ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರು, ಉಪ್ಪು, ನಿಂಬೆರಸ ಹಿಂಡಿ ಅದರಲ್ಲಿ 15 ನಿಮಿಷ ನಿಮ್ಮ ಪಾದವನ್ನಿರಿಸಿ. ಹೀಗೆ ಮಾಡುವುದರಿಂದ ನಿಮ್ಮ ಪಾದ ಸ್ವಚ್ಛವಾಗುತ್ತದೆ. ಹೀಗೆ ಮಾಡಿದಾಗ, ಪಾದದಲ್ಲಿ ವಾಸನೆ ಬರುವ ಸಮಸ್ಯೆ ಸರಿಹೋಗುತ್ತದೆ.