Tuesday, September 16, 2025

Latest Posts

ಬಾಣಂತನದ ಸಮಯದಲ್ಲಿ ಕೂದಲು ಉದುರುವುದನ್ನು ಹೇಗೆ ತಡೆಯಬೇಕು..?

- Advertisement -

Health Tips: ಗರ್ಭಿಣಿಯಾಗುವ ಸಮಯ ಹೆಣ್ಣು ಒಂದು ರೀತಿಯ ಚಾಲೆಂಜ್ ಅನುಭವಿಸುತ್ತಾಳೆ. ಅಬಾ, ಆರೋಗ್ಯವಾಗಿರುವ ಮಗು ಹುಟ್ಟಿದೆ ಎಂದು ಸಮಾಧಾನ ಪಡುವಷ್ಟರಲ್ಲಿ, ಈಗ ತನ್ನ ಆರೋಗ್ಯ ಮತ್ತು ಸೌಂದರ್ಯದ ಕಾಳಜಿ ನಿಭಾಯಿಸುವ ಜವಾಬ್ದಾರಿ ಅವಳ ಹೆಗಲೇರುತ್ತದೆ. ಇಂಥ ಸಮಯದಲ್ಲಿ ಮತ್ತೂ ಟೆನ್ಶನ್ ಕೊಡುವ ಸಮಸ್ಯೆ ಅಂದ್ರೆ, ಕೂದಲು ಉದುರುವ ಸಮಸ್ಯೆ. ಗರ್ಭಿಣಿಯಾಗಿರುವಾಗ, ಹೇಗೆ ಕೂದಲು ಸೊಂಪಾಗಿ ಬೆಳೆದಿರುತ್ತದೆಯೋ, ಅದೇ ರೀತಿ, ಬಾಾಣಂತನದಲ್ಲಿ ಅದರ ದುಪ್ಪಟ್ಟು ಕೂದಲು ಉದುರುತ್ತದೆ. ಇದಕ್ಕಾಗಿ ನಾವಿಂದು ಮನೆಮದ್ದೊಂದನ್ನು ತಂದಿದ್ದೇವೆ.

ನೀವು ಹೆನ್ನಾವನ್ನು (ಮೆಹೆಂದಿ) ಬಳಸಿ, ನಿಮ್ಮ ಕೂದಲನ್ನು ಆರೋಗ್ಯಕರ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಕೂದಲು ಉತ್ತಮವಾಗಿರುವುದಲ್ಲದೇ, ನಿಮ್ಮ ಕೂದಲಿಗೆ ಉತ್ತಮ ಕಲರ್ ಮತ್ತು ಹೊಳಪು ಕೂಡ ಬರುತ್ತದೆ. ಒಂದು ಬೌಲ್ ಮೊಸರಿಗೆ, ಹೆನ್ನಾವನ್ನು ಸೇರಿಸಿ. ಎಷ್ಟು ಹೆನ್ನಾ ಸೇರಿಸಬೇಕು ಎಂಬುದು ನಿಮಗೆ ಬಿಟ್ಟಿದ್ದು. ಅದು ನಿಮ್ಮ ಕೂದಲು ಎಷ್ಟು ಉದ್ದ, ದಪ್ಪ ಇದೆ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ.

ಹೆನ್ನಾ ಮತ್ತು ಮೊಸರನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ ಟೀ ಡಿಕಾಕ್ಷನ್‌, ಎರಡ್ಮೂರು ಡ್ರಾಪ್ಸ್ ಕೊಬ್ಬರಿ ಎಣ್ಣೆ ಸೇರಿಸಿ. ಈ ಮಿಶ್ರಣವನ್ನು ಒಂದು ತಾಸು ಹೀಗೆ ಬಿಡಬೇಕು. ಆಗ ಇದು ಚೆನ್ನಾಗಿ ಮಿಕ್ಸ್ ಆಗುತ್ತದೆ. ಬಳಿಕ ಇದನ್ನು ತಲೆಗೆ ಹಚ್ಚಿ, ಒಣಗಿದ ಬಳಿಕ, ಕೆಮಿಕಲ್ ಇಲ್ಲದ ಶ್ಯಾಂಪೂ ಬಳಸಿ, ಹೇರ್ ವಾಶ್ ಮಾಡಿ. ಇದರಿಂದ ತಲೆಗೂದಲು ಉದುರುವುದಿಲ್ಲ. ಕೂದಲು ಸಧೃಡವಾಗಿ, ಶೈನಿಯಾಗಿ ಇರುತ್ತದೆ.

ಆದರೆ ಅದಕ್ಕೂ ಮುನ್ನ ಈ ಹೇರ್ ಪ್ಯಾಕ್ ನಿಮ್ಮ ತಲೆಗೂದಲಿಗೆ ಸೂಟ್ ಆಗತ್ತೋ, ಇಲ್ಲವೋ ಎಂದು ಪರೀಕ್ಷಿಸಿ, ಬಳಿಕ ಬಳಸಿ. ಅಲರ್ಜಿಯಾಗುತ್ತದೆ ಎಂದಲ್ಲಿ, ಈ ಹೇರ್ ಪ್ಯಾಕ್ ಬಳಸುವ ಮುನ್ನ, ವೈದ್ಯರಲ್ಲಿ ವಿಚಾರಿಸಿ. ಇನ್ನು ಈ ಹೇರ್ ಪ್ಯಾಕ್ ಹೇಗೆ ತಯಾರಿಸುತ್ತಾರೆ..? ಹೇಗೆ ಅಪ್ಲೈ ಮಾಡುತ್ತಾರೆ..? ಇದರ ಎಫೆಕ್ಟ್ ಹೇಗಿರುತ್ತದೆ ಅಂತಾ ತಿಳಿಯಲು ಈ ವೀಡಿಯೋ ನೋಡಿ..

Joint Pain ಕಾಡ್ತಿದ್ಯಾ? ಇಲ್ಲಿದೆ ಮನೆಮದ್ದು..

ಮಕ್ಕಳ ಈ ಹುಚ್ಚಿಗೆ ಕಾರಣ ಯಾರು?

Liver Cancer ಅಂದ್ರೆ ಏನು? ವೈದ್ಯರ ವಿವರಣೆ ಇಲ್ಲಿದೆ ನೋಡಿ..

- Advertisement -

Latest Posts

Don't Miss