ಮುಖದ ಮೇಲಾಗುವ ನೆರಿಗೆಯನ್ನು ತಡೆಯುವುದು ಹೇಗೆ..?

Health Tips: ಹೆಣ್ಣು ಮಕ್ಕಳಿಗೆ 30 ವರ್ಷ ದಾಟಿದ ಬಳಿಕ ಮುಖದ ಮೇಲೆ ನೆರಿಗೆ ಬರಲು ಶುರುವಾಗುತ್ತದೆ. ಆಗ ವಯಸ್ಸಾಗುತ್ತಿದೆ ಎಂಬ ಸೂಚನೆ ಸಿಗುತ್ತದೆ. ಆದರೆ ನೀವು ಮನೆ ಮದ್ದುಗಳನ್ನು ಬಳಸಿ, ನಿಮ್ಮ ಮುಖದ ಮೇಲಿನ ಸುಕ್ಕನ್ನು ಹೋಗಲಾಡಿಸಿ ಅಂದವಾಗಿ ಕಾಣಬಹುದು. ಹಾಗಾದ್ರೆ ಅದಕ್ಕೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಈಗ ನಾವು ಹೇಳುವ ಫೇಸ್‌ಪ್ಯಾಕನ್ನು ನೀವು ವಾರದಲ್ಲಿ ಕೇವಲ ಎರಡು ಬಾರಿ, ಅಂದರೆ ಮೂರು ದಿನಕ್ಕೊಮ್ಮೆ ಹಚ್ಚಬಹುದು. ಅದಕ್ಕಿಂತ ಹೆಚ್ಚು ಬಾರಿ ಅಪ್ಲೈ ಮಾಡಬೇಡಿ. ಒಂದು ಸ್ಪೂನ್ ಕಾಫಿ ಪುಡಿ, ಒಂದು ಸ್ಪೂನ್ ಫ್ರೆಶ್ ಆಗಿರುವ ಆ್ಯಲೋವೆರಾ ಜೆಲ್, 5 ಡ್ರಾಪ್ಸ್ ತೆಂಗಿನ ಎಣ್ಣೆ ಇವಿಷ್ಟನ್ನು ಮಿಕ್ಸ್ ಮಾಡಿ, ಫೇಸ್‌ಪ್ಯಾಕ್ ಹಾಕಿ. 15 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

ರಾತ್ರಿ ಮಲಗುವಾಗ ಎರಡು ಸ್ಪೂನ್ ತ್ರಿಫಲಾ ಚೂರ್ಣವನ್ನು 1 ಗ್ಲಾಸ್ ಬಿಸಿ ನೀರಿನಲ್ಲಿ ಬೆರೆಸಿಡಿ. ಮರುದಿನ ಬೆಳಿಗ್ಗೆ ನೀರನ್ನು ಸೋಸಿ, ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. 1 ತಿಂಗಳು ಅಥವಾ ಒಂದು ದಿನ ಬಿಟ್ಟು ಒಂದು ದಿನ ನೀವು ಈ ನೀರನ್ನು ಕುಡಿದರೆ, ನಿಮ್ಮ ಮುಖದ ಅಂದ ಹೆಚ್ಚುತ್ತದೆ. ಈ ಚೂರ್ಣ ನಿಮ್ಮ ದೇಹವನ್ನು ಒಳಗಿನಿಂದ ಕ್ಲೀನ್ ಮಾಡಿ, ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ನಾವು ಅಂದವಾಗಿ ಕಾಣಲು ಕಾರಣ ನಾವು ಕುಡಿಯುವ ನೀರು ಮತ್ತು ಸೇವಿಸುವ ಆಹಾರ. ಜಂಕ್ ಫುಡ್, ಮಸಾಲೆಯುಕ್ತ ಆಹಾರ, ಚಾಕ್ಲೇಟ್, ಬೇಕರಿ ತಿಂಡಿ ಇವೆಲ್ಲದರ ಸೇವನೆ ಅತೀಯಾಗಿ ಮಿತವಾಗಿ ಇರಬೇಕು. ಮಜ್ಜಿಗೆ, ಮೊಸರು, ಎಳನೀರು, ಜ್ಯೂಸ್, ಮತ್ತು ನೀರಿನ ಸೇವನೆ ಹೆಚ್ಚಾಗಿ ಮಾಡಿ. ತರಕಾರಿ, ಮೊಳಕೆಕಾಳು, ಹಣ್ಣು, ಸೊಪ್ಪಿನ ಪದಾರ್ಥಗಳ ಸೇವನೆ ಮಾಡುವುದರಿಂದ, ದೇಹದ ಆರೋಗ್ಯ ಚೆನ್ನಾಗಿರುವುದರ ಜೊತೆಗೆ, ನಿಮ್ಮ ಸೌಂದರ್ಯ ಕೂಡ ಅಭಿವೃದ್ಧಿಯಾಗುತ್ತದೆ. ಇನ್ನು ನಾವಿಲ್ಲಿ ಹೇಳಿರುವ ಫೇಸ್‌ಪ್ಯಾಕ್ ಬಳಸಿದ್ರೆ, ನಿಮಗೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಬಳಸುವುದು ಉತ್ತಮ.

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..

ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

About The Author