ಚಳಿಗಾಲದ ರೋಗದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ..?

Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಇಂದು ವೈದ್ಯರಾದ ಡಾ.ಆಂಜೀನಪ್ಪ ಅವರು ನಾವು ಚಳಿಗಾಲದಲ್ಲಿ ಯಾವ ರೀತಿ ರೋಗದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ಸಾಮಾನ್ಯವಾಗಿರುತ್ತದೆ. ಹಾಗಾಗಿ ನಾವು ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳಿಗೆ ಬೆಚ್ಚಗಿನ ಬಟ್ಟೆ ಹಾಕಬೇಕು. ಜನಜಂಗುಳಿ ಇರುವ ಪ್ರೇದಶಕ್ಕೆ ಹೋಗುವುದನ್ನು ತಪ್ಪಿಸಬೇಕು. ಜ್ವರ, ನೆಗಡಿ, ಕೆಮ್ಮು ಬಂದಾಗ, ಮನೆಮದ್ದುಗಳಿಂದ ಸರಿಯಾಗುವುದಿದ್ದರೆ, ಮನೆಮದ್ದುಗಳನ್ನೇ ಬಳಸಬಹುದು. ಇನ್ನು ಈ ಸಮಯದಲ್ಲಿ ಬಿಸಿ ನೀರು, ಬಿಸಿ ಬಿಸಿ ಆಹಾರಗಳನ್ನೇ ಸೇವಿಸಬೇಕು. ಫ್ರಿಜ್‌ನಲ್ಲಿ ಇರಿಸಿದ ಆಹಾರವನ್ನು ಸೇವಿಸದಿದ್ದಲ್ಲಿ ಉತ್ತಮ ಅಂತಾರೆ ವೈದ್ಯರು.

ನೆಯಲ್ಲಿಯೇ ನೀರನ್ನು ಕುದಿಸಿ, ಆರಿಸಿ ಕುಡಿಯಿರಿ. ಇನ್ನು ತರಕಾರಿ, ಸೊಪ್ಪು ಹಣ್ಣುಗಳ ಸೇವನೆ ಯಥೇಚ್ಛವಾಗಿ ಮಾಡಬೇಕು. ಆದರೆ, ಅವುಗಳನ್ನು ಸೇವಿಸುವ ಮುನ್ನ ಚೆನ್ನಾಗಿ ತೊಳೆಯಬೇಕು. ಏಕೆಂದರೆ, ತರಕಾರಿ, ಸೊಪ್ಪು, ಹಣ್ಣುಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಕೆಲವರು ಸೀಬೆಹಣ್ಣು, ಬಾಳೆಹಣ್ಣು, ಕಿತ್ತಳೆ ಹಣ್ಣನ್ನು ತಂಪು ಎಂದು ಸೇವಿಸುವುದನ್ನೇ ಬಿಡುತ್ತಾರೆ. ಆದರೆ ಇಂಥ ಸೀಸನಲ್ ಹಣ್ಣು, ತರಕಾರಿಗಳನ್ನು ಸೇವಿಸಿದಾಗಲೇ, ನಮ್ಮ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಇನ್ನು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

About The Author