ಮುಖದ ಮೇಲೆ ಮೊಡವೆ ಬಂದರೆ ಅಷ್ಟು ಟೆನ್ಶನ್ ಆಗಲ್ಲ. ಆದ್ರೆ ಅದರ ಕಲೆ ಉಳಿದುಬಿಡೋದೇ ಟೆನ್ಶನ್ ಕೊಡತ್ತೆ ಅನ್ನೋದು, ಇಂದಿನ ಪೀಳಿಗೆಯವರ ಕಂಪ್ಲೇಂಟ್. ಅದಕ್ಕೆ ನಾವಿಂದು ಮುಖದ ಮೇಲೆ ಡಾರ್ಕ್ ಸ್ಪಾರ್ಟ್ಸ್ ಕಡಿಮೆ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಟೊಮೆಟೋ ರಸದಲ್ಲಿ ಕಾಟನ್ ಅದ್ದಿ, ಅದರಿಂದ ಮುಖಕ್ಕೆ 5 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಮುಖದ ಮೇಲಿನ ಈ ಪ್ಯಾಕ್ ಒಣಗಿದ ಬಳಿಕ, ಉಗುರು ಬೆಚ್ಚಗಿನ ನೀರು ಬಳಸಿ, ಮುಖವನ್ನು ತೊಳೆಯಿರಿ. 7 ದಿನಗಳವರೆಗೆ ಸತತವಾಗಿ ಈ ರೀತಿ ಮಾಡಿದ್ದಲ್ಲಿ, ನಿಮ್ಮ ಸ್ಕಿನ್ ಚೆನ್ನಾಗಿರತ್ತೆ. ಮೊಡವೆ ಕಲೆ ಹೋಗತ್ತೆ.
ಟೊಮೆಟೋನಲ್ಲಿ ನ್ಯಾಚುರಲ್ ಬ್ಯೂಟಿ ಹೆಚ್ಚಿರುವ ಗುಣಗಳಿರುತ್ತದೆ. ನೀವು ವಾರಕ್ಕೆ ಎರಡು ಬಾರಿ ಹೀಗೆ ಟೊಮೆಟೋ ರಸದಿಂದ ಮಸಾಜ್ ಮಾಡಿಕೊಂಡ್ರೆ, ನಿಮ್ಮ ಸ್ಕಿನ್ ಸಾಫ್ಟ್ ಆಗಿ, ಗ್ಲೋವಾಗಿ ಇರತ್ತೆ. ಇನ್ನು ಸ್ಕ್ರಬ್ ಮಾಡಲು ಮಾರುಕಟ್ಟೆಯಿಂದ ಕ್ರೀಮ್ ತರುವ ಬದಲಿಗೆ, ತಿಂಗಳಿಗೆ ಒಮ್ಮೆ ಟೊಮೆಟೋ ಕಟ್ ಮಾಡಿ, ಅದಕ್ಕೆ ಸಕ್ಕರೆ ಅಂಟಿಸಿ, ಅದರಿಂದ ಮುಖಕ್ಕೆ ಸ್ಕ್ರಬಿಂಗ್ ಮಾಡಿ. ಇದರಿಂದ ನಿಮ್ಮ ಸ್ಕಿನ್ ಲೈಟ್ ಪಿಂಕ್ ಕಲರ್ ಪಡೆಯುತ್ತೆ.