Health Tips: ನಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು..? ಚರ್ಮದ ಆರೈಕೆ ಹೇಗಿರಬೇಕು ಎಂಬ ಬಗ್ಗೆ ವೈದ್ಯೆಯಾದ ಡಾ.ದೀಪಿಕಾ ಹಲವು ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ಬೇಸಿಗೆ ಕಾಲದಲ್ಲಿ ನಮ್ಮ ಚರ್ಮದ ಆರೈಕೆ ಹೇಗಿರಬೇಕು ಎಂದು ವೈದ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಬೇಸಿಗೆಗಾಲ, ಚಳಿಗಾಲ, ಮಳೆಗಾಲದಲ್ಲಿ ನಮ್ಮ ಸ್ಕಿನ್ ಕೂಡ ಚೇಂಜ್ ಆಗುತ್ತದೆ. ಹಾಗಾಗಿ ಆಯಾ ಸೀಸನ್‌ನಲ್ಲಿ ಬೇರೆ ಬೇರೆ ರೀತಿ ನಾವು ನಮ್ಮ ತ್ವಚೆಯ ಆರೈಕೆ ಮಾಡಬೇಕಾಗುತ್ತದೆ. ಬೇಸಿಗೆ ಕಾಲದಲ್ಲಿ ನಾವು ನಮ್ಮ ತ್ವಚೆಯನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಬೇಕು. ಅದಕ್ಕಾಗಿ ಹೆಚ್ಚು ನೀರು ಕುಡಿಯಬೇಕು. ಮಜ್ಜಿಗೆ, ಪಾನಕ, ಜ್ಯೂಸ್, ಎಳನೀರು ಸೇವಿಸಬೇಕು. ದೇಹಕ್ಕೆ ತಂಪು ಕೊಡುವ ಹಣ್ಣು, ತರಕಾರಿ ಸೇವನೆ ಮಾಡಬೇಕು.
ಬೇಸಿಗೆಯಲ್ಲಿ ಹೆಚ್ಚು ಬೆವರು ಹೋಗುತ್ತದೆ. ದೇಹದ ನೀರೆಲ್ಲ ಬೆವರಿನ ಮೂಲಕ ಹೊರಹೋಗುತ್ತದೆ. ಹಾಗಾಗಿ ದೇಹಕ್ಕೆ ನೀರಿನ ಅವಶ್ಯಕತೆ ತುಂಬ ಇರುತ್ತದೆ. ಈ ವೇಳೆ ನಾವು ಸರಿಯಾಗಿ ನೀರು ಕುಡಿಯದಿದ್ದಲ್ಲಿ, ನಮ್ಮ ಚರ್ಮ ಒಣಗಲಾರಂಭಿಸುತ್ತದೆ. ತ್ವಚೆಯ ಕಳೆಗುಂದುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಾವು ಹೆಚ್ಚು ನೀರು ಕುಡಿದು, ನಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.
ಇನ್ನು ತ್ವಚೆಗೆ ಸನ್‌ಸ್ಕ್ರೀನ್ ಬಳಸಬೇಕು. ಆಹಾರ ಸೇವಿಸುವಾಗ, ಮನೆಯಲ್ಲಿ ತಯಾರಿಸಿದ ಫ್ರೆಶ್ ಆದ ಆಹರವನ್ನೇ ಸೇವಿಸಿ. ಹೊಟೇಲ್ ತಿಂಡಿ, ಹೊರಗಡೆ ಸಿಗುವ ಚಾಟ್ಸ್ ಹೆಚ್ಚು ಸೇವಿಸಬಾರದು. ಏಕೆಂದರೆ, ಬೇಸಿಗೆಯಲ್ಲಿ ಹೆಚ್ಚು ಫುಡ್ ಪಾಯ್ಸನಿಂಗ್ ಆಗುತ್ತದೆ. ಹಾಗಾಗಿ ಆಹಾರ ಸೇವಿಸುವಾಗಲೂ ನಾವು ಹುಷಾರಾಗಿರಬೇಕು. ಇದು ಕೂಡ ನಮ್ಮ ತ್ವಚೆಯ ಮೇಲೆ ಎಫೆಕ್ಟ್ ಆಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..