Health Tips: ವೈದ್ಯೆಯಾದ ಡಾ.ದೀಪಿಕಾ ಚರ್ಮದ ಆರೈಕೆ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಚರ್ಮದ ಖಾಯಿಲೆ ಹೇಗೆ ಬರುತ್ತದೆ. ನಮ್ಮ ಚರ್ಮ ನುಣುಪಾಗಿರಲು ನಾವು ದೇಹಕ್ಕೆ ಏನು ಬಳಸಬೇಕು..? ಹೇಗೆ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗೆ ಮಾಡಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ವೈದ್ಯರು ಹೇಳುವ ಪ್ರಕಾರ, ಚಳಿಗಾಲದಲ್ಲಿ ಹೆಚ್ಚು ಹೊತ್ತು ಸ್ನಾನ ಮಾಡಬಾರದು. ಕೆಲವರು ಚಳಿಗಾದಲ್ಲಿ ಬಿಸಿ ಬಿಸಿ ನೀರು ಸಿಕ್ಕರೆ, ಗಂಟೆಗಟ್ಟಲೇ ಸ್ನಾನ ಮಾಡುತ್ತಾರೆ. ಏಕೆಂದರೆ, ಚಳಿಗಾಲದಲ್ಲಿ, ಬಿಸಿ ಬಿಸಿ ನೀರಿನ ಸ್ನಾನ ಮಾಡಲು, ಹಿತವೆನ್ನಿಸುತ್ತದೆ. ಆದರೆ ಹೀಗೆ ಮಾಡುವುದರಿಂದ ನಮ್ಮ ಚರ್ಮ ಬೇಗನೆ ಹಾಳಾಗುತ್ತದೆ. ಒಣಗಿ ಹೋಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರಿನಿಂದ, ಕಡಿಮೆ ಹೊತ್ತಿನಲ್ಲೇ ಸ್ನಾನ ಮಾಡಬೇಕು.
ಇನ್ನು ಚಳಿಗಾಲದಲ್ಲಿ ಪದೇ ಪದೇ ಮುಖ ತೊಳೆಯಬಾರದು. ಸೋಪ್ ಹೆಚ್ಚು ಬಳಸಬಾರದು. ಉತ್ತಮ ಕ್ವಾಲಿಟಿಯ ಮಾಯಿಶ್ಚರೈಸಿಂಗ್ ಕ್ರೀಮ್ ಬಳಸಬೇಕು. ಇನ್ನು ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯದ ಕಾರಣ, ನಾವು ಹಣ್ಣು, ತರಕಾರಿಗಳ ಸೇವನೆ ಹೆಚ್ಚು ಮಾಡಬೇಕಾಗುತ್ತದೆ. ಇಂಥ ಆರೋಗ್ಯಕರ ಆಹಾರಗಳಿಂದಲೇ, ನಮ್ಮ ಚರ್ಮದ ಸೌಂದರ್ಯ ಚೆನ್ನಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ವೀಡಿಯೋ ನೋಡಿ..